ಸೈದಾಪುರ:ಗೌರಿ ಗಣೇಶ ಹಬ್ಬ ಖರೀದಿ ಜೋರು

ಸೈದಾಪುರ:ಅ.28:ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಗೌರಿ ಗಣೇಶ ಹಬ್ಬದ ಸಂಭ್ರಮ ಆಚರಣೆ ಮಾಡಲು ಮಾರುಕಟ್ಟೆಯಲ್ಲಿ ಅಲಂಕಾರಿಕ ವಸ್ತು, ಪೂಜೆ ಸಾಮಾಗ್ರಿ, ಹೂವು ಹಣ್ಣುಗಳು ಸೇರಿದಂತೆ ಇತರೆ ಸಾಮಾಗ್ರಿಗಳ ಖರೀದಿ ಜೋರಾಗಿ ನಡೆಯಿತು.
ಈ ಸಂದರ್ಭದಲ್ಲಿ ಹಣ್ಣಿನ ವ್ಯಾಪಾರಿ ಹಣಮಂತ ನಾಯಕ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ ಯುವಕರು ಸೇರಿದಂತೆ ಗ್ರಾಮಸ್ಥರು ಸಂಭ್ರಮದೊಂದಿಗೆ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಾರೆ. ಎಲ್ಲ ಕಾರ್ಯಗಳಿಗೂ ಮೊದಲು ಆಗ್ರಪೂಜೆ ಸಲ್ಲುವುದು ಗಣಪತಿಗೆ. ಪೂಜೆ, ನೈವೇಧ್ಯಗಳಂತಹ ವಿವಿಧ ಧಾರ್ಮಿಕ ಆಚರಣೆ ಈ ಸಂದರ್ಭದಲ್ಲಿ ಮಾಡುವರು. ಹಣ್ಣಿನ ವ್ಯಾಪಾರವು ಉತ್ತಮವಾಗಿ ನಡೆಯುತ್ತಿದೆ. ಈ ವರ್ಷ ಉತ್ತಮ ಮಳೆ ಕಂಡು ಬಂದಿದ್ದೂ ರೈತರ ಸಂಕಷ್ಟಗಳು ನಿವಾರಣೆಯಾಗಿ ಉತ್ತಮ ಬೆಳೆಯನ್ನು ವಿನಾಯಕ ಎಲ್ಲರಿಗೂ ಕಲ್ಪಿಸಲಿ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.