
ಗುರುಮಿಠಕಲ್,ನ.21-ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಮತ್ತು ನಾಡಿನ ಸಾಂಸ್ಕøತಿಕತೆ ಬಗ್ಗೆ ಪರಿಚಯ ಮಾಡಿಸುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಈ ಚಕೋರ ವೇದಿಕೆಯ ಕಾರ್ಯಕ್ರಮ ಶ್ಲಾಘನೀಯ ಎಂದು ಗುರುಮಿಠಕಲ್ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜೆ.ವಿ.ಪುರುಷೋತ್ತಮ ಹೇಳಿದರು.
ಜಿಲ್ಲೆಯ ಆಂಧ್ರ ಗಡಿಭಾಗದ ಗುರುಮಿಠಕಲ್ ತಾಲೂಕಿನ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ರಾಜ್ಯೋತ್ಸವದ ಅಂಗವಾಗಿ ಚಕೋರ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಿಯೂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಲಕ್ಷ್ಮಯ್ಯ ಕಲಾಲ್ ವಿಶೇಷ ಉಪನ್ಯಾಸ ನೀಡಿದರು. ಆಶಯನುಡಿಯನ್ನು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಆಡಿದರು. ಮುಖ್ಯ ಅತಿಥಿಯಾಗಿ ಗುರುಮಿಠಕಲ್ ತಾಲೂಕಿನ ಕಸಾಪ ಅಧ್ಯಕ್ಷರಾದ ಬಸರೆಡ್ಡಿ ಪಾಟೀಲರು ಭಾಗವಹಿಸಿದ್ದರು. ಡಾ.ಬಾಬುರಾಯ ದೊರೆ ಕಾರ್ಯಕ್ರಮ ಸಂಘಟಿಸಿ ನಿರೂಪಿಸಿದರು.






















