
ಬೀದರ:ಮೇ.೨೦: ಧರ್ಮರಕ್ಷಣೆಗಾಗಿ ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಸುವ ಅವಶ್ಯಕತೆಯಿದೆ. ಕೆಟ್ಟ ಸ್ನೇಹಿತ ದುರ್ಮಾರ್ಗ ಹೊಂದಿರುವ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾನೆ. ಒಳ್ಳೆಯ ಸ್ನೇಹಿತ ಧಾರ್ಮಿಕ ಕ್ಷೇತ್ರಗಳಿಗೆ ಕೊಂಡೊಯ್ಯುತ್ತಾನೆ. ಅಂಬರೀಶ ಮತ್ತು ಅರವಿಂದ ಶೀಲವಂತ ಅವರು ಸನ್ಮಾರ್ಗದಲ್ಲಿ ನಡೆದು ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿರುವುದು ಧರ್ಮರಕ್ಷಣೆಯ ಕಾರ್ಯವಾಗಿದೆ ಎಂದು ಉಜ್ಜಯಿನಿಯ ಶ್ರೀ ಅಘೋರ್ ಪೀಠದೇಶ್ವರ ಅಚಲನಾಥ ಮಹಾರಾಜ ನುಡಿದರು.
ನಗರದ ದೇವಿ ಕಾಲೋನಿಯಲ್ಲಿ ದೇವಿ ಗ್ರೂಪ್ ಮತ್ತು ಶ್ರೀ ಶಬರಿ ಮಾತಾ ಭಕ್ತಮಂಡಳಿ ಬೀದರ ವತಿಯಿಂದ ಶ್ರೀ ಸದ್ಗುರು ಶಬರಿ ಮಾತಾ ಜೀವಂತ ಸಮಾಧಿ ೨೫ನೇ ಬ್ರಹ್ಮೆöÊಕ್ಯ ಕಾರ್ಯಕ್ರಮದ ಪ್ರಯುಕ್ತ ಸಾಧು ಸಂಗಮ ಮೇಳ ಮತ್ತು ಶ್ರೀ ಶಬರಿ ಮಾತಾ ಆಸ್ತಾನ ಉದ್ಘಾಟನಾ ಸಮಾರಂಭ ಹಾಗೂ ಸಾಧು ಸಂತರ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಗಾಪುರ ಸರಸ್ವತಿ ಮಂದಿರದ ಶ್ರೀ ಕಾಶಿನಾಥ ಬಾಬಾ ಮಾತನಾಡಿ ನಗರಗಳಲ್ಲಿ ಯುವಕರಿಂದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳಾದಾಗ ದುರ್ಗುಣ ದುಶ್ಚಟಗಳಿಂದ ಯುವಕರು ಮುಕ್ತತೆ ಹೊಂದಿ ಸನ್ಮಾರ್ಗದೆಡೆಗೆ ಸಾಗುತ್ತಾರೆ ಎಂದರು.
ಕಾರ್ಯಕ್ರಮದ ಆಯೋಜಕರಾದ ಅಂಬರೀಶ ಶೀಲವಂತ ಮತ್ತು ಅರವಿಂದ ಶೀಲವಂತ ಮಾತನಾಡಿ ಇಂದಿನ ಕಾಲದಲ್ಲಿ ಯುವಕರು ಯಾವುದೇ ತತ್ವದಡಿಯಲ್ಲಿ ಸಾಗಲಿ. ಅವರು ಪ್ರತಿದಿನ ದೇವರ ಧ್ಯಾನ, ಶ್ಲೋಕ, ವಚನ ಮತ್ತು ಮಂತ್ರಪಠಣ ಮಾಡಿದರೆ ಅವರ ಹೃದಯದಲ್ಲಿ ಶಾಂತಿ, ಸೌಹಾರ್ದತೆ ಮತ್ತು ತಾಳ್ಮೆ ಮೂಡುತ್ತದೆ. ಅವರ ಬದುಕು ಹಸನಾಗುವುದರ ಜೊತೆಗೆ ಸಮಾಜ ದೇಶದಲ್ಲಿ ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ. ಈ ಕಾರಣಕ್ಕಾಗಿ ಯುವಕ ಯುವತಿಯರನ್ನು ಧರ್ಮ ಮಾರ್ಗದ ಕಡೆಗೆ ಕರೆತರಲು ನಾವು ಶ್ರೀ ಶಬರಿಮಾತಾ ಆಸ್ತಾನ ಸ್ಥಾಪಿಸಿದ್ದೇವೆ. ಜನರು ದರ್ಶನ ಪಡೆದು ಪುನೀತರಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಶಂಕರೆಪ್ಪ ಮಾತಂ, ಪೂಜ್ಯ ಹವಾ ಮಲ್ಲಿನಾಥ ಮಹಾರಾಜರು, ರೋಶನ್ ಮಹಾರಾಜ್ ಹರಿಯಾಣ, ವೀರೇಶ್ವರ ಶಿವಾಚಾರ್ಯರು ಧನಶ್ರೀ, ವಿಠಲಪುರದ ಶ್ರೀ ಶಾಂತಿ ಬಾಬಾ, ವಿಜಯವಾಡದ ವಿಜಯಲಕ್ಷಿö್ಮÃ ಮಠ, ಸಿದ್ದೇಶ್ವರಂನ ನರಸಿಂಗ ಸ್ವಾಮಿ, ಸಂತ ಭಾನುದಾಸ್ ಮಹಾರಾಜರು, ಮಹೇಶ ಸ್ವಾಮಿ ರಾಜಪುಡಿ, ವೆಂಕಟ ಸ್ವಾಮೀಜಿ, ಅಘೋರಿ ಆನಂದ ಮಹಾರಾಜರು, ಮಲ್ಲಯ್ಯ ಸ್ವಾಮಿ, ಪೂಜ್ಯ ವಿಜಯನಾಗಲಿಂಗೇಶ್ವರ ಶ್ರೀಗಳು ಸೇರಿದಂತೆ ಹಲವು ಸಾಧು ಸಂತರು ಉಪಸ್ಥಿತರಿದ್ದರು. ಇದೇ ವೇಳೆ ಅಂಬರೀಶ ಮತ್ತು ಅರವಿಂದ ಶೀಲವಂತ ಅವರ ಸಂಗೀತ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ನಗರದ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಮಹಾಪ್ರಸಾದ ಸೇವಿಸಿ ಧನ್ಯರಾದರು.