
ತಾಳಿಕೋಟೆ:ನ.೬: ಹಗಲು ಸೂರ್ಯ ರಾತ್ರಿ ಚಂದ್ರ ಕತ್ತಲೆಯನ್ನು ಕಳೆದು ಬೆಳಕನ್ನು ನೀಡುತ್ತಲಿದ್ದಾರೆ ಅದರಂತೆ ನಮ್ಮ ನಮ್ಮ ಮನೆಗಳಲ್ಲಿಯ ಕತ್ತಲೆಯನ್ನು ಕಳೆಯಲು ದೀಪ ಹಚ್ಚುತ್ತೇವೆ ಅದರಂತೆಯೇ ನಮ್ಮಲ್ಲಿಯ ಅಜ್ಞಾನದ ಕತ್ತಲೆಯನ್ನು ನಾಶ ಮಾಡುವವನೇ ಸದ್ಗುರುನಾಥನಾಗಿದ್ದಾನೆಂದು ಹುಬ್ಬಳ್ಳಿಯ ಶಾಂತಾಶ್ರಮದ ಶ್ರೀ ಅಭಿನವ ಸಿದ್ದಾರೂಡ ಸ್ವಾಮಿಜಿ ಅವರು ನುಡಿದರು.
ಬುಧವಾರರಂದು ಸ್ಥಳೀಯ ಆನಂದ ಆಶ್ರಮದ ವತಿಯಿಂದ ಶ್ರೀ ನಿಜಗುಣ ಶಿವಯೋಗಿಗಳವರ ಜಯಂತ್ಯೋತ್ಸವ ಕುರಿತು ೯ ದಿನ ಕಾಲಾವದಿಯಲ್ಲಿ ಜರುಗಲಿರುವ ಪ್ರವಚನ ಕಾರ್ಯಕ್ರಮವನ್ನು ದೀಪ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಶ್ರೀಗಳು ತಂದೆಯಾದವನು ಪರಶುದ್ದವಾದ ಆತ್ಮನಾಗಿರುತ್ತಾನೆ ಜಗತ್ ರಕ್ಷಕ ಪರಮಾತ್ಮ ಶುದ್ದತೆ ಕೂಡಿದಂತಹ ಆತ್ಮಗಳನ್ನು ಪ್ರೀತಿಸುತ್ತಾನೆ ದೇವಸ್ವರೂಪ ತಿಳುವಳಿಕೆ ನೀಡುವ ಕಾರ್ಯ ಮಾಡುವವನೇ ಗುರು ಆಗಿದ್ದಾನೆ ಕಾರಣ ಅಜ್ಞಾನ ನಾಶಕ್ಕೆ ಸದ್ಗುರುನಾಥ ದೊಡ್ಡ ಶಕ್ತಿಶಾಲಿಯಾಗಿದ್ದಾನೆಂದರು. ಮನುಷ್ಯನಿಗೆ ಕಣ್ಣು, ಕಿವಿ, ನಾಲಿಗೆ, ಚರ್ಮ, ಇವೇಲ್ಲವುಗಳು ಉಂಟು ಈ ಎಲ್ಲ ಇಂದ್ರಿಯಗಳಿಗೆ ಪ್ರೇರಣದಾಯಕವಾದ ಶರೀರಕ್ಕೆ ಏಚ್ಚರಿಸುವಂತಹ ಶಕ್ತಿ ಮನಸ್ಸೆಂಬುದರಲ್ಲಿದೆ ಮನಸ್ಸು ನೋಡುವಂತಹ ವಿಷಯಗಳತ್ತ ಗಮನವಿದ್ದರೆ ಜ್ಞಾನವಾಗುತ್ತದೆ ಎಂದರು. ಭೂ ಮಂಡಲದಲ್ಲಿ ೮೦೦ ಕೋಟಿ ಜನಸಂಖ್ಯೆ ಹೊಂದಿದ್ದು ಅದರಲ್ಲಿ ಭಾರತದಲ್ಲಿ ೧೫೦ ಕೋಟಿ ಇದೆ ಇಷ್ಟಾದರೂ ಒಂದರAತೆ ಒಂದಿಲ್ಲಾ ಒಬ್ಬರಂತೆ ಒಬ್ಬರಿಲ್ಲಾ ಆದರೆ ಪರಮಾತ್ಮ ನಿರ್ಮಾಣ ಮಾಡಿದ್ದರಲ್ಲಿ ಇನ್ನೊಂದು ಹುಟ್ಟುತ್ತದೆ ಅದುವೇ ಅನಿಯಮಿತವಾದುದ್ದೆಂದರು. ನಿಜಗುಣಶಿವಯೋಗಿಗಳು ಹೇಳಿದ್ದಾರೆ ಪರಮಾತ್ಮ ಎಲ್ಲಡೆಯಲ್ಲಿಯೂ ಇದ್ದಾನೆ ಬಹಳೇ ಉಪಕಾರವೆಂಬುದು ಸದ್ಗುರುವಿನದ್ದಾಗಿದೆ ಯಾಕೆಂದರೆ ಪರಮಾತ್ಮನ ಸ್ವರೂಪ ದಿವ್ಯ ಚೈತನ್ಯ ಎಲ್ಲಕಡೆ ತುಂಬಿದ್ದನ್ನು ಅರಿವಿಗೆ ತಂದವನು ಸದ್ಗುರು ಆಗಿದ್ದಾನೆಂದರು. ಭೂಮಿ ಎಂಬುದು ಅದ್ಭುತ್‌ವಾದ ಗ್ರಹವಾಗಿದೆ ಇದಕ್ಕಿಂತ ದೊಡ್ಡ ಗ್ರಹ ಸೂರ್ಯ, ಸೂರ್ಯಕ್ಕಿಂತಲೂ ಗುರುಗ್ರಹವಾಗಿದೆ ವಿಜ್ಞಾನಿಗಳು ಹೇಳಿದ್ದಾರೆ ೫೦ ಲಕ್ಷ ಗ್ರಹಗಳಿವೆ ಅವುಗಳನ್ನು ಗುರುತಿಸಿದ್ದರೂ ಇನ್ನೂ ಕಣ್ಣಿಗೆ ಕಾಣದ ಗ್ರಹಗಳು ಎಷ್ಟಿವೇ ಎಂಬುದು ಗೊತ್ತಿಲ್ಲಾ ಆದರೆ ಪರಮಾತ್ಮನ್ನು ಗುರುತಿಸಿಕೊಂಡವನೇ ಗುರು ಆಗಿದ್ದಾನೆ ಗುರು ಚೈತನ್ಯ ಸ್ವರೂಪ ಸರ್ವ ಜ್ಞಾನವನ್ನು ನೀಡುತ್ತಾನೆಂದರು.
ಇನ್ನೋರ್ವ ಪ್ರವಚನಕಾರರಾಗಿ ಆಗಮಿಸಿದ ಸೋಲ್ಲಾಪೂರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ತೋಳನೂರ ಸಿದ್ದಾರೂಡ ಮಠದ ವೇ.ಸಿದ್ದಯ್ಯ ಶಾಸ್ತಿçÃಗಳು ಮಾತನಾಡಿ ನಿಜಗುಣ ಶಿವಯೋಗಿಗಳ ತತ್ವ ಸಿದ್ದಾಂತಗಳನ್ನು ತಾಳಿಕೋಟೆಯ ಶ್ರೀ ಖಾಸ್ಗತ ಶಿವಯೋಗಿಗಳು ತಾಳಿಕೋಟೆಗೆ ತಂದಿದ್ದಾರೆ ನಮ್ಮ ನಿಜಸ್ವರೂಪ ಜ್ಞಾನವನ್ನು ಪಡೆಯಬೇಕಾದರೆ ಇಂತಹ ತತ್ವ ಸಿದ್ದಾಂತವನ್ನು ಅರ್ಥೈಸಿಕೊಂಡು ನಡೆಯಬೇಕು ಇಂತಹ ತತ್ವ ಸಿದ್ದಾಂತಗಳು ಅಂಗಡಿ ಮುಗ್ಗಟ್ಟುಗಳಲ್ಲಿ ದೊರೆಯುವದಿಲ್ಲಾವೆಂದರು. ಶರಣ ಸಂತರ ಸಂಘದಿAದ ಒಳ್ಳೆಯ ಆದ್ಯಾತ್ಮೀಕ ಭಾವನೆ ಎಂಬುದು ದೊರೆಯುತ್ತದೆ ೮೪ ಲಕ್ಷ ಜೀವರಾಶಿಗಳಲ್ಲಿ ಮಾನವ ಜನ್ಮವೆಂಬುದು ಶ್ರೇಷ್ಠವಾಗಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಯಾವ ರೀತಿ ಬಿತ್ತಿ ಬೆಳೆಯಲು ಒಳ್ಳೆಯ ಕಾಳು ಕಡಿಗಳು ಇಟ್ಟಂತೆ ಮಾನವನಲ್ಲಿ ಒಳ್ಳೆಯ ಗುಣಗಳನ್ನು ತುಂಬಿಕೊಳ್ಳಲು ಶರಣ ಶರಣೆಯರಲ್ಲಿಯ ಜ್ಞಾನ ಪಡೆಯಬೇಕೆಂದ ಶಾಸ್ತಿçÃಗಳು ಭಗವಂತ ಸೃಷ್ಠಿಸಿದ ಜಗತ್ತಿನಲ್ಲಿ ಬಧುಕುತ್ತಿರುವ ನಾವುಗಳು ಪೂಜೆ ಪುನಸ್ಕಾರ ಮಾಡುವದರಿಂದ ಮೋಕ್ಷ ಮಾರ್ಗ ದೊರೆಯಲಿದೆ ಎಂದರು.
ಇನ್ನೋರ್ವ ಸಭಾ ಅಧ್ಯಕ್ಷರಾದ ಕೋರವಾರದ ಶ್ರೀ ಷ.ಬ್ರ.ಮುರುಘೇಂದ್ರ ಸ್ವಾಮಿಗಳು ಮಾತನಾಡಿ ಮಾನವ ಜನ್ಮ ತಾಳಿರುವದು ಮೋಕ್ಷಕ್ಕಾಗಿ ಮೋಕ್ಷ ಪಡೆಯಬೇಕಾದರೆ ಗುರುವಿನಿಂದ ಜ್ಞಾನ ಮೂಡಿಸಿಕೊಳ್ಳುವದು ಅಗತ್ಯವಾಗಿದೆ ಗುರು ಅನ್ನುವಂತಹ ಶಕ್ತಿ ಬಹಳೇ ದೊಡ್ಡದು ಆ ಶಕ್ತಿಯಿಂದ ಜ್ಞಾನ ಮೂಡಿಸಿಕೊಳ್ಳಬೇಕಾದರೆ ಭಕ್ತಿ ಭಾವ ಎಂಬುದರೊAದಿಗೆ ಆತ್ಮ ಶುದ್ದಿಯಾಗಿರುವದು ಅಗತ್ಯವಾಗಿದೆ ಎಂದರು.
ಆನAದಾಶ್ರಮದ ಅಧ್ಯಕ್ಷ ವೇ.ಸಿದ್ರಾಮಯ್ಯಸ್ವಾಮಿಗಳು ಬೇನಾಳಮಠ ಅವರು ಅಧ್ಯಕ್ಷತೆ ವಹಿಸಿದ್ದರು.
ನಿರ್ದೇಶಕರಾದ ಶ್ರೀಮತಿ ಉಮಾ ಘೀವಾರಿ ಅವರು ಪ್ರಾಸ್ಥಾವಿಕ ಮಾತನಾಡಿದರು.
ಶಿಕ್ಷಕ ದೇವರಾಜ ಬಾಗೇವಾಡಿ, ಪರಮಣ್ಣ ಶರಣರು ಗುರುವಿನ ಶಕ್ತಿಯನ್ನು ಅರಿತುಕೊಳ್ಳಬೇಕಾದರೆ ಆದ್ಯಾತ್ಮದ ಚಿಂತನೆ ಮಾಡಬೇಕು ಪ್ರವಚನ ಕಾರ್ಯಕ್ರಮದಲ್ಲಿ ಹಾಗೂ ಶಾಸ್ತç ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿಯ ಹಿತನುಡಿಗಳನ್ನು ಆಲಿಸಿ ಪಾಲಿಸಿದರೆ ಸನ್ಮಾರ್ಗದ ಹಾದಿ ದೊರೆಯಲಿದೆ ಎಂದರು.
ವೇದಿಕೆಯ ಮೇಲೆ ಹುಬ್ಬಳ್ಳಿಯ ಶ್ರೀ ಸಚ್ಚಿದಾನಂದ ಶಿವಯೋಗಿ, ಹುಬ್ಬಳ್ಳಿಯ ಶ್ರೀ ಸಿದ್ದಲಿಂಗ ಶ್ರೀಗಳು ಉಪಸ್ಥಿತರಿದ್ದರು.
ಈ ಸಮಯದಲ್ಲಿ ಆನಂದಾಶ್ರಮದ ಶಾಸ್ತç ಸಮಿತಿ ಪದಾಧಿಕಾರಿಗಳು, ನಿರ್ದೇಶಕ ಮಂಡಳಿಯವರು, ದಾನಿಗಳು, ಶರಣ ಶರಣಿಯರು ಭಾಗವಹಿಸಿದ್ದರು. ಕಾರ್ಯಕ್ರಮದ ಮೊದಲಿಗೆ ಶ್ರೀ ನಿಜಗುಣ ಶಿವಯೋಗಿಗಳವರ ಮಹಾ ಮೂರ್ತಿಗೆ ಮಹಾ ಪೂಜೆ ಹಾಗೂ ಪುಷ್ಪಾರ್ಚನೆ ಗೈಯಲಾಯಿತು.























