
ಸೇಡಂ, ಡಿ,೧೬: ಕಲ್ಯಾಣ ನಾಡಿನ ಪವಾಡ ಪುರುಷ, ಲಿಂಗೈಕ್ಯ ಪೂಜ್ಯ ಸಪ್ಪಣ್ಣಾರ್ಯರ ಜೀವನ ಚರಿತ್ರೆ ಆಧಾರಿತ ಸದ್ಭಾವನಾ ಮೂರ್ತಿ ಸಪ್ಪಣ್ಣಾರ್ಯರು ಕಿರುಚಿತ್ರಕ್ಕೆ ಪೂಜ್ಯ ಡಾ.ಸದಾಶಿವ ಮಹಾಸ್ವಾಮೀಜಿ ಚಾಲನೆ ನೀಡಿ ಮಾತನಾಡಿದರು.
ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯಲ್ಲಿ ಕ್ಯಾಮರಾ ಪೂಜೆ ನೆರವೇರಿಸಿದ ಅವರು, ಚಲನಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಮೂಲ ಕರ್ತೃ ಲಿಂಗೈಕ್ಯ ಸಪ್ಪಣ್ಣಾರ್ಯರು, ಅವರ ಅಗಾಧ ಶಕ್ತಿಯಿಂದ ಇಲ್ಲಿನ ಕೊತ್ತಲ ಬಸವಣ್ಣ ಜನರ ಪಾಲಿನ ದೇವರಾದರು.ಸಕಲವನ್ನೂ ತ್ಯಾಗ ಮಾಡಿ ಈ ನೆಲದ ಒಳಿತಿಗಾಗಿ ಕಾಲಿಟ್ಟ ಸಪ್ಪಣ್ಣಾರ್ಯರ ಚರಿತ್ರೆಯನ್ನು ಈಗಾಗಲೇ ಅನೇಕ ಬಾರಿ ನಾಟಕದ ಮೂಲಕ ಪ್ರಸ್ತುತಪಡಿಸಲಾಗಿದೆ. ಈಗ ಡಿಜಿಟಲ್ ಮಾಧ್ಯಮದ ಮೂಲಕ ಕಿರುಚಿತ್ರ ನಿರ್ಮಾಣಕ್ಕೆ ಪಾದಾರ್ಪಣೆ ಮಾಡಲಾಗುತ್ತಿದೆ. ಇದೊಂದು ಇತಿಹಾಸ ನಿರ್ಮಿಸುವ ಚಿತ್ರವಾಗಲಿದೆ ಎಂದು ಅವರು ಇದೇ ವೇಳೆ ಶುಭ ಹಾರೈಸಿದರು.
ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ, ಹಿರಿಯ ರಂಗ ಕಲಾವಿದ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಡಾ. ಮುರಳೀಧರ ದೇಶಪಾಂಡೆ, ಪ್ರೊ. ಶೋಭಾದೇವಿ ಚೆಕ್ಕಿ,ಸಂಗಣ್ಣ ಅಲ್ದಿ, ಸೂರ್ಯಕಾಂತ ನಿಂಗದಳ್ಳಿ,ಶಿವಾರೆಡ್ಡಿ ಗೌಡನಹಳ್ಳಿ, ಶೃತಿ ಚರಂತಿಮಠ, ರಾಜಶೇಖರ ಮಂಗಲಗಿ, ಮಲ್ಲಿಕಾರ್ಜುನ ದಿಗ್ಗಾವ,ಪ್ರವೀಣ ಇಂಜಳ್ಳಿ, ಈರಣ್ಣ ರೆಮ್ಮಣ್ಣಿ,ಬಸಲಿಂಗಪ್ಪ ಬಾಳಿ, ಶಿವು ಧುತ್ತರಗಿ ಮಲಕೂಡ,ಶಿವಕುಮಾರ ಹಿರೇಮಠ, ಮಂಜುನಾಥಸ್ವಾಮಿ,ವೆAಕು,ರಾಘು ಪಂಗರಗಿ, ನಿರ್ದೇಶಕ ಯುವರಾಜ ಗುತ್ತೇದಾರ ಇತರರು ಉಪಸ್ಥಿತರಿದ್ದರು.























