ನಟ ಕಮಲ ಹಾಸನ್ ಹೇಳಿಕೆಗೆ ಸಚೀನ್ ಫರಹತಾಬಾದ ಖಂಡನೆ

ಕಲಬುರಗಿ:ಮೇ.31: ತಮಿಳ್ ಚಲನಚಿತ್ರದ ನಟ ಕಮಲ ಹಾಸನ್ ಅವರು ಕನ್ನಡ ಭಾμÉಯು ತಮಿಳಿಗೆ ಹುಟ್ಟಿದೆ ಎಂದು ಅವಹೇಳಿಕೆ ನೀಡಿದ್ದು, ಈ ಹೇಳಿಕೆಯನ್ನು ಜೈ ಕನ್ನಡಿಗರ ರಕ್ಷಣಾ ವೇದಿಕೆ ಬಲವಾಗಿ ಖಂಡಿಸುತ್ತದೆ. ಕೂಡಲೇ 7 ಕೋಟಿ ಕನ್ನಡಿಗರನ್ನು ಕ್ಷಮೆ ಕೇಳಬೇಕು, ಇಲ್ಲದೇ ಹೋದಲ್ಲಿ ಕರ್ನಾಟಕ ರಾಜ್ಯದ್ಯಾದಂತ ಅವರ ಚಿತ್ರಗಳು ಚಿತ್ರಮಂದಿರದಲ್ಲಿ ನಡೆಯದಂತೆ ಬ್ಯಾನ ಮಾಡಿ, ಅವರು ಬೆಂಗಳೂರಿಗೆ ಬಂದಾಗ ಮುತ್ತಿಗೆ ಹಾಕಿ, ಮಸಿ ಬಡಿದು ಆಕ್ರೋಶ ಹೋರ ಹಾಕಬೇಕಾಗುತ್ತದೆ ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸಚೀನ್ ಫರಹತಾಬಾದ ಅವರು ತಿಳಿಸಿದ್ದಾರೆ.
ಸದರಿ ಕನ್ನಡ ಭಾμÉಯ ಬಗ್ಗೆ ತಮಿಳ್ ಚಿತ್ರ ನಟರಾದ ಕಮಲ್ ಹಾಸನ್ ಅವರು ತಮಿಳ್‍ದಿಂದ ಕನ್ನಡ ಭಾμÉ ಹುಟ್ಟಿದೇ ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದು, ಸದರಿ ನಮ್ಮ ಕನ್ನಡ ಭಾμÉಯು ಅವರಿಗೆ ಕನ್ನಡ ಚಲಚಿತ್ರಗಳಲ್ಲಿ ಹಲವಾರು ಅವಕಾಶಗಳು ನೀಡಿದೇ, ನಮ್ಮ ಕನ್ನಡ ನಾಡಿನ ಅನ್ನವನ್ನು ತಿಂದು ಬೆಳೆದು, ಈ ರೀತಿಯಾಗಿ ಕನ್ನಡ ಬಗ್ಗೆ ಅವಹೇಳನಕಾರಿಯಾಗಿ ಹೇಳಿರುವುದು ನಮ್ಮ 7 ಕೋಟಿ ಕನ್ನಡಿಗರಿಗೆ ಅವಮಾನ ಮಾಡಿರುತ್ತಾರೆ. ನಮ್ಮ ಕನ್ನಡ ಭಾμÉಗೆ ತನ್ನದೇ ಆದ ವಿಶೇಷ ಗೌರವ, ಸ್ವಾಭಿಮಾನ ಇರುತ್ತದೆ.
ಸದರಿ ತಮಿಳ್ ಚಿತ್ರ ನಟರಾದ ಕಮಲ್ ಹಸನ್ ಅವರು ನೀಡಿರುವ ಹೇಳಿಕೆಗೆ ನಮ್ಮ ಜೈ ಕನ್ನಡಿಗರ ರಕ್ಷಣಾ ವೇದಿಕೆ (ರಿ) ರಾಜ್ಯ ಘಟಕ, ಕಲಬುರಗಿಯು ಖಂಡಿಸುತ್ತದೆ. ಮತ್ತು ಕೂಡಲೇ ನಮ್ಮ ಕನ್ನಡ ನಾಡಿನ ಜನತೆಗೆ ಕ್ಷಮೆ ಕೇಳಬೇಕು. ಒಂದು ವೇಳೆ ಅವರು ಕ್ಷಮೆ ಕೇಳದೆ ಹೋದರೆ, ಕರ್ನಾಟಕ ರಾಜ್ಯದ್ಯಾದಂತ ಅವರ ಚಿತ್ರಗಳು ಚಿತ್ರಮಂದಿರದಲ್ಲಿ ನಡೆಯದಂತೆ ಬ್ಯಾನ ಮಾಡಿ, ಅವರು ಬೆಂಗಳೂರಿಗೆ ಬಂದಾಗ ಮುತ್ತಿಗೆ ಹಾಕಿ, ಮಸಿ ಬಡಿದು ಆಕ್ರೋಶ ಹೋರ ಹಾಕಲಾಗುವುದು ಎಂದು ಸಚಿನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.