Home ಜಿಲ್ಲೆ ಭರತನಾಟ್ಯದಲ್ಲಿ ಪ್ರಶಸ್ತಿ ಪಡೆದು ಸಾನ್ವಿ ಸಾಧನೆ

ಭರತನಾಟ್ಯದಲ್ಲಿ ಪ್ರಶಸ್ತಿ ಪಡೆದು ಸಾನ್ವಿ ಸಾಧನೆ

ಮುದ್ದೇಬಿಹಾಳ: ಕೇಸಾಪುರ ಗ್ರಾಮದ ಸಿದ್ಧಾರ್ಥ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಹಾಗೂ ಹುನಕುಂಟಿ ಗ್ರಾಮದ ಮುಖ್ಯಗುರುಗಳಾದ ಶ್ರೀಮತಿ ನೀಲಮ್ಮ ಎಸ್. ಜಗಂಡಭಾವಿ ಅವರ ಪುತ್ರಿ ಕುಮಾರಿ ಸಾನ್ವಿ ಜಗಂಡಭಾವಿ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಪ್ರಶಸ್ತಿ ಪಡೆದುಕೊಂಡಿದ್ದಾಳೆ.
ಬೆಂಗಳೂರಿನ ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕöÈತಿಕ ಪ್ರತಿಷ್ಠಾನ ವತಿಯಿಂದ ಕೊಡಮಾಡಲಾದ ಮಹಾತ್ಮ ಗಾಂಧಿ ಸದ್ಭಾವನಾ ಪ್ರಶಸ್ತಿಯನ್ನು ಸಾನ್ವಿ ಅವರಿಗೆ ಪ್ರಧಾನ ಮಾಡಿ ಗೌರವಿಸಲಾಯಿತು.
ಭರತನಾಟ್ಯ ಕ್ಷೇತ್ರದಲ್ಲಿ ಅವರು ತೋರಿದ ಪ್ರತಿಭೆ ಹಾಗೂ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದ್ದು, ಸಂಸ್ಥೆಯ ರಾಜ್ಯ ಅಧ್ಯಕ್ಷೆ ಶ್ರೀಮತಿ ಮಂಜುಳಾ ಪಾವಗಡ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಸಾನ್ವಿ ಅವರ ಸಾಧನೆಗೆ ಸಿದ್ಧಾರ್ಥ ಪಬ್ಲಿಕ್ ಸ್ಕೂಲ್ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಖಾನಾಪುರ ಅವರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಟುಂಬಸ್ಥರಾದ ಬಿ.ಜಿ. ಜಗ್ಗಲ(ವಕೀಲರು), ರಾಯಪ್ಪ ಕುದರಿಕಾರ, ಬಿ.ಜಿ. ಬಿರಾದಾರ, ಮಹಾಂತೇಶ ಎಮ್ಮಿ ಹಾಗೂ ಚಿಂಚೋಳಿ ತಾಲ್ಲೂಕಿನ ಸರ್ಕಾರಿ ನೌಕರರ ಸಂಘ ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಾನ್ವಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಭರತನಾಟ್ಯ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸಾಧನೆ ಮಾಡುವಂತೆ ಶುಭ ಹಾರೈಸಿದರು.