ಎಸ್. ಟಿ. ಬೇಡಿಕೆ ನಮ್ಮ ಸಂವಿಧಾನ ಬದ್ಧ ಹಕ್ಕು : ಲಚ್ಚಪ್ಪ ಜಮಾದಾರ

ಕಮಲಾಪುರ ;ಜ.27: ಕೋಲಿ ಸಮಾಜ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಹಿಂದುಳಿದ ಸಮಾಜವಾಗಿದೆ ಈ ಸಮಾಜ ಸದೃಢವಾಗಬೇಕೆಂದರೆ ಸ್‍ಟಿ ಮೀಸಲಾತಿ ಬೇಕೇ ಬೇಕು. ನಾವು ಭಿಕ್ಷೆ ಬೇಡಿದ್ದಿಲ್ಲ ಅದು ನಮ್ಮ ಸಂವಿಧಾನದ ಹಕ್ಕಾಗಿದೆ, ಎಲ್ಲಾ ರಂಗಗಳಲ್ಲಿ ಹಿಂದುಳಿದ ಕೂಲಿ ಸಮಾಜದ ಸವಾರ್ಂಗೀಣ ಅಭಿವೃದ್ಧಿಯಾಗಬೇಕು ಎಂದರೆ ಎಸ್ಟಿ ಮೀಸಲಾತಿಯಿಂದ ಮಾತ್ರ ಸಾಧ್ಯ ಹೀಗಾಗಿ ಎಸ್ಟಿ ಹೋರಾಟಕ್ಕಾಗಿ ಸದಾ ಸಿದ್ದರಾಗಿರಿ , ನಾವು ಭಿಕ್ಷೆ ಬೇಡುತ್ತಿಲ್ಲ ಎಸ್ ಟಿ ನಮ್ಮ ಸಂವಿಧಾನ ಬದ್ಧ ಹಕ್ಕಾಗಿದೆ ಎಂದು ಕೋಲಿ ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಹೇಳಿದರು.

ಕಮಲಾಪುರ ತಾಲೂಕಿನ ಹರಕಂಚಿ ಗ್ರಾಮದಲ್ಲಿ ಹಮ್ಮಿಕೊಂಡ ಶೀ ನಿಜ ಶರಣ ಅಂಬಿಗರ ಚೌಡಯ್ಯನವರ 906 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಬಿಗರ ಚೌಡಯ್ಯನವರು 12ನೇ ಶತಮಾನದ ಅವಧಿಯಲ್ಲಿ ಗಾಢವಾಗಿ ಬೇರೂರಿದ್ದ ಜಾತಿಯತೆ ಮೂಡನಂಬಿಕೆ ಲಿಂಗ ಅಸಮಾನತೆಯ ವಿರುದ್ಧ ಸಿಡಿದೆದ್ದ ಬಂಡಾಯ ವಚನಕಾರರು ಎಂದು ಹೇಳಬಹುದು, ಕೋಲಿ ಕಬ್ಬಲಿಗ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಕಂಡು ಬರುತ್ತಿದ್ದು ಒಳ್ಳೇಯ ಬೆಳವಣಿಗೆ ಅಲ್ಲ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರಗಳನ್ನು ನೀಡಬೇಕು, , ಒಗ್ಗಟ್ಟಾದರೆ ಮಾತ್ರ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ , , ಮಾನವ ಕುಲ ಒಂದೇ, ಇಲ್ಲಿ ಯಾರೂ ಮೇಲೂ ಕೀಳಲ್ಲ, ಎಲ್ಲರಿಗೂ ಸಮಾನವಾದ ಸ್ಥಾನ ಮಾನ ಅವಕಾಶ ಸಿಗಬೇಕ ಎಂದು ಕಡ್ಡಿ ಮುರಿದಂಗೆ ಹೇಳುವ ಎದೆಗಾರಿಕೆ ಹೊಂದಿದ್ದ ಏಕೈಕ ಶರಣರೆಂದರೆ ಅವರೇ ನಿಜ ಶರಣ ಅಂಬಿಗರ ಚೌಡಯ್ಯನವರು ಎಂದರು.

ಕೋಲಿ ಸಮಾಜದ ಹಿರಿಯ ಮುಖಂಡ ಬಸವರಾಜ ನಾಟೀಕಾರ ಮಾತನಾಡಿ ಸಮಾಜ ಬಾಂಧವರು ಸತ್ಯ, ನ್ಯಾಯ, ಅಹಿಂಸೆ ಮಾಗ9ದಲ್ಲಿ ಸಾಗಬೇಕು, ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಸಂಸ್ಕಾರಗಳನ್ನು ಬೇಳೆಸಿಕೊಳ್ಳಬೇಕು, ಮಹಾತ್ಮ ಬಸವೇಶ್ವರರ ನೈತೃತ್ವದಲ್ಲಿ ಹಲವಾರು ವಚನಕಾರರಿದ್ದರು, ಇದದ್ದನ್ನು ಇದ್ದಂಗೆ ವಚನಗಳಲ್ಲಿ ಸಾರಿ ಹೇಳಿದ್ದಾರೆ, ಈ ಕಾರಣದಿಂದಲೇ ಅವರನ್ನು ನಿಜ ಶರಣ ಎಂಬ ಬಿರುದು ದೊರಕಿದೆ, ಎಂದರು.

ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಉಪಾಧ್ಯಕ್ಷ ರಾಮಲಿಂಗ ನಾಟೀಕರ , ಹಿರಿಯ ಮುಖಂಡ ಬಸವರಾಜ ನಾಟೀಕಾರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಲೇಂಗಟಿ ಮಾತನಾಡಿದರು.

ಈ ಸಂದರ್ಭದಲ್ಲಿ ನಾಗೂರು ಗ್ರಾಪಂ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ್ , ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಅಂಬಾರಾಯ ಜವಳಗಾ, ರಾಮು ಉಮ್ಮರಗಿ, ತಮ್ಮಣ್ಣ, ಜಗನ್ನಾಥ್ ಅಂಕಲಗಿ, ಉದಯಕುಮಾರ್, ಹಣಮಂತ ನಾಯ್ಕೋಡಿ, ಬಾಬುರಾವ್ ನಾಯ್ಕೋಡಿ, ದೆವೇಂದ್ರ ದಂಡೋತಿ, ನಾಗೇಶ ಡೊಂಗರಗಾಂವ, ಶಿವಶರಣಪ್ಪ ಕಂದಗೂಳ, ನಾಗಪ್ಪ ನಾಯ್ಕೋಡಿ, ತೀಥ9ಪ್ಪ ನಾಯ್ಕೋಡಿ, ಶಿವರಾಜ ಇತರರು ಇದ್ದರು