ಡಿಎಸ್‌ಪಿ ಎಸ್.ರೋಷನ್ ಜಮೀರ ಅದ್ಯಕ್ಷತೆಯಲ್ಲಿ ಎಸ್.ಎಸಿ.ಎಸ್.ಟಿ ಕುಂದುಕೊರತೆ ಸಭೆ

ಸಂಜೆ ವಾಣಿ ವಾರ್ತೆ
ಜಮಖಂಡಿ:ಅ.೨೦ ಪ್ರತಿ ತಿಂಗಳ ರವಿವಾರದಂದು ಜಮಖಂಡಿ ಉಪವಿಭಾಗದ ಎಲ್ಲ ಪೋಲಿಸ ಠಾಣೆಗಳ ವ್ಯಾಪ್ತಿಯ ಎಸ್.ಎಸಿ.ಎಸ್.ಟಿ ದಲಿತ ಮುಖಂಡರಗಳನ್ನು ಕರೆಸಿ ಅವರ ಕುಂದು ಕೊರತೆಗಳ ಅಹವಾಲು ಸ್ವೀಕರಿಸಿ ಅವರ ಕಾರ್ಯಗಳನ್ನು ನಿವಾರಿಸುವ ನಿರ್ಣಯ ಮಾಡಲಾಗಿದೆ ಎಂದು ಡಿ.ವಾಯ್.ಎಸ್.ಪಿ ಸಯ್ಯದ ರೋಷನ್ ಜಮೀರ ಹೇಳಿದರು.
ಶಹರ ಪೊಲೀಸ್ ಠಾಣೆಯಲ್ಲಿ ಭಾನುವಾರ ಜಮಖಂಡಿ ಉಪವಿಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು-ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೊದಲ ಸಭೆ ಆಗಿರುವದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು ಭಾಗಿಯಾಗಿಲ್ಲ ಮತ್ತು ಬಹಳಷ್ಟು ಚರ್ಚೆಗಳು ಆಗಿಲ್ಲ ಮುಂದಿನ ತಿಂಗಳು ನ.೧೯ರಂದು ಸಭೆಯನ್ನು ಕರೆದು ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರನ್ನು ಕೂಡಿಸುವ ವ್ಯವಸ್ತೆ ಮಾಡಲಾಗುವದು ಎಂದರು.
ತೆರದಾಳ,ಬನಹಟ್ಟಿ ರಬಕವಿ,ಮಹಾಲಿಂಗಪೂರ, ಮುಧೋಳ, ಸಾವಳಗಿ,ಜಮಖಂಡಿ ತಾಲೂಕಿನ ದಲಿತ ಮುಖಂಡರು ಮಾತನಾಡಿ ಯುವಕರು ಮದ್ಯಪಾಣ ಮಾಡಿ ಇಸ್ಪೀಟು ಜೂಜಾಟ ಸೇರಿದಂತೆ ಟ್ರಾಫಿಕ್ ನಿವಾರಣೆ ಸೇರಿದಂತೆ ತಮ್ಮ ಕುಂದು ಕೊರತೆಗಳನ್ನು ತಿಳಿಸಿದರು.
ಮುಖಂಡ ಸಂಜು ಮುಂಡಗನೂರ ಮಾತನಾಡಿ ಹಳ್ಳಿಗಳಲ್ಲಿ ಎಲ್ಲ ರಿತಿಯ ಸಮಶ್ಯಗಳು ಇರುತ್ತಾವೆ ಸಂಭAಧ ಪಟ್ಟ ವಿವಿಧ ಇಲಾಖೆ ಅಧಿಕಾರಿಗಳನ್ನು ಕರೆಸಿ ಸಭೆಯನ್ನು ಜರುಗಿಸಿ ಎಂದರು.
ಡಿ.ವಾಯ್.ಎಸ್.ಪಿ ಸಯ್ಯದ ರೋಷನ್ ಜಮೀರ ಅವರು ಸಮಸ್ಯಗಳನ್ನು ಆಲಿಸಿ ಆಯಾ ವ್ಯಾಪ್ತಿಯ ಪಿ.ಎಸೈ ಗಳಿಗೆ ಮಾತನಾಡಿ ಕಡಕಾಗಿ ಸೂಚನೆ ನೀಡಿ ಸಮಸ್ಯಗಳನ್ನು ಭಗೆ ಹರಿಸಲು ತಿಳಿಸಿದರು
ಮುಧೋಳ ಸಿ.ಪಿ.ಐ ಮಹಾದೇವ ಶಿರಹಟ್ಟಿ, ಮಹಾಲಿಂಗಪೂರ ಪಿ.ಎಸೈ.ಕಿರಣ,ಅಪರಾಧ ವಿಭಾಗದ ಪಿ.ಎಸ್.ಐ ಮಧು.ಎಲ್. ಸೇರಿದಂತೆ ತೆರದಾಳ, ಬನಹಟ್ಟಿ.ರಬಕವಿ, ಮಹಾಲಿಂಗಪೂರ,ಮುಧೋಳ, ಜಮಖಂಡಿ ತಾಲೂಕಿನ ದಲಿತ ಮುಖಂಡರು ಹಾಗೂ ಪೋಲಿಸ ಅಧಿಕಾರಿಗಳು ಉಪಸ್ಥಿತ ಇದ್ದರುಪಿ.ಎಸ್.ಐ ಅನೀಲ ಕುಂಬಾರ ಸ್ವಾಗತಿಸಿ ವಂದಿಸಿದರು