ವಾಷಿಂಗ್ಟನ್, ಆ.೬- ರಷ್ಯಾದಿಂದ ಅಮೆರಿಕಾಕ್ಕೆ ಬರುವ ರಾಸಾಯನಿಕಗಳು, ರಸಗೊಬ್ಬರಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತ ರಷ್ಯಾದ ಕಚ್ಚಾ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುವುದನ್ನು ಟೀಕಿಸಿದ ಬೆನ್ನಲ್ಲೇ ಈಗ ರಷ್ಯಾದಿಂದ ಅಮೆರಿಕಾಕ್ಕೆ ಬರುವ ಎಲ್ಲಾ ಉತ್ಪನ್ನಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸುದ್ಧಿಗಾರೊಂದಿಗೆ ಮಾತನಾಡಿದ ಅವರು ಶೇಕಡಾ ೨೫ ರಷ್ಟು ಸುಂಕ ವಿಧಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸುಂಕ ವಿಧಿಸುವ ಮುನ್ಸೂಚನೆ ನೀಡಿದ್ದಾರೆ.
ರಷ್ಯಾದ ತೈಲವನ್ನು ಖರೀದಿಸುವುದಕ್ಕಾಗಿ ಅಮೆರಿಕ ಭಾರತದ ಮೇಲೆ ಸುಂಕ “ಗಣನೀಯವಾಗಿ ಹೆಚ್ಚಳವಾಗಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಭಾರತ ಮುಕ್ತ ಮಾರುಕಟ್ಟೆಗಳಲ್ಲಿ ರಷ್ಯಾದ ತೈಲವನ್ನು ಮಾರಾಟ ಮಾಡುತ್ತಿದೆ, ಇದರಿಂದಾಗಿ ಭಾರಿ ಲಾಭ ಗಳಿಸುತ್ತಿದೆ ಎಂದು ಆರೋಪಿಸಿರುವ ಅವರು “ರಷ್ಯಾದ ಯುದ್ಧ ಯಂತ್ರದಿಂದ ಉಕ್ರೇನ್‌ನಲ್ಲಿ ಎಷ್ಟು ಜನರು ಕೊಲ್ಲಲ್ಪಡುತ್ತಿದ್ದಾರೆ ಎಂಬುದು ಅವರಿಗೆ ಮುಖ್ಯವಲ್ಲ. ಈ ಕಾರಣದಿಂದಾಗಿ, ಭಾರತ ಅಮೆರಿಕಕ್ಕೆ ಪಾವತಿಸುವ ಸುಂಕವನ್ನು ಹೆಚ್ಚಿಸುವುದಾಗಿ ತಿಳಿಸಿದ್ದಾರೆ.
ರಷ್ಯಾದ ತೈಲವನ್ನು ಖರೀದಿಸುವ ದೇಶಗಳ ಮೇಲೆ ೧೦೦ ಪ್ರತಿಶತ ಸುಂಕ ವಿಧಿಸುವ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದಿದ್ದಾರೆ.
ಏತನ್ಮಧ್ಯೆ, ರಷ್ಯಾದ ತೈಲವನ್ನು ಖರೀದಿಸುವುದಕ್ಕಾಗಿ ಭಾರತ ಮೇಲೆ ಸುಂಕವನ್ನು “ಗಣನೀಯವಾಗಿ” ಹೆಚ್ಚಿಸುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಕ್ಕಾಗಿ ಭಾರತ ಟೀಕಿಸಿದೆ, ಅಮೆರಿಕ ಅಧ್ಯಕ್ಷರ ಈ ಕ್ರಮ “ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸ” ಎಂದು ಕರೆದಿದೆ.
























