ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ

ಧಾರವಾಡ,ಜ27: ಇಲ್ಲಿನ ಸುಕ್ಷೇತ್ರ ಮುರುಘಾ ಮಠದ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಭರ್ಜರಿ ಕುಸ್ತಿ ಪಂದ್ಯಾವಳಿಯು ಕ್ರೀಡಾಭಿಮಾನಿಗಳ ನಡುವೆ ರೋಚಕವಾಗಿ ಜರುಗಿತು.

ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ, “ಗ್ರಾಮೀಣ ಕ್ರೀಡೆಗಳಿಗೆ ಮತ್ತು ನಮ್ಮ ಮಣ್ಣಿನ ಕಲೆಗೆ ನಿರಂತರ ಪೆÇ್ರೀತ್ಸಾಹದ ಅಗತ್ಯವಿದೆ,” ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಕುಸ್ತಿ ಪಟುಗಳಾದ ಅರ್ಜುನ ಕಾನಾಪುರ, ಅಶೋಕ ಏನಗಿ ಹಾಗೂ ರಾಜೇಸಾಬ ಅವರನ್ನು ಸನ್ಮಾನಿಸಲಾಯಿತು.

ಪ್ರತಿ ಬಾರಿಯಂತೆ ಕುಸ್ತಿ ಪಂದ್ಯಾವಳಿಯ ವಿಜೇತರಿಗೆ ವೈಶು ದೀಪ ಫೌಂಡೇಶನ್ ವತಿಯಿಂದ ಆರು ಭವ್ಯ ಬೆಳ್ಳಿಯ ಗದೆಗಳು ಹಾಗೂ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.

ಪಂದ್ಯಾವಳಿಯಲ್ಲಿ ಕುಸ್ತಿ ತರಬೇತುದಾರರಾದ ವಿನೋದ ದಾವಣಗೆರೆ ನೇತೃತ್ವದಲ್ಲಿ ಪರಿಣಿತ ನಿರ್ಣಾಯಕರುಗಳಾದ ತುಕಾರಾಂ ಗೌಡ, ಶಿವಪ್ಪ ಪಾಟೀಲ್, ಮುಕ್ತಾಂ ಸಾಬ, ಸುರೇಶ ಮುನವಳ್ಳಿ, ರಂಜಾನ್ ಲೋಕುರ್, ದ್ಯಾಮಣ್ಣ, ತುಕಾರಾಂ ಗುಡಿಹಳ, ಮಹದೇವಪ್ಪ ಕ್ಯಾರಕೊಪ್ಪ, ಪಕ್ಕೀರಪ್ಪಾ ತಡಸಿನಕೊಪ್ಪ, ಗುರುನಾಥ, ಸಹದೇವ ಹಾಗೂ ಮಂಜು ಮಲ್ಲಿಗಾವಾಡ ಅವರುಗಳು ಪಂದ್ಯಗಳ ಯಶಸ್ಸಿಗೆ ಶ್ರಮಿಸಿದರು.

ಕಾರ್ಯಕ್ರಮದ ಉಸ್ತುವಾರಿಯನ್ನು ಅರವಿಂದ ಏಗನಗೌಡರ ಅವರು ವಹಿಸಿಕೊಂಡಿದ್ದರು. ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆ, ಮೃತ್ಯುಂಜಯ ಸಿದ್ನಾಳ, ದೀಪಕ ಇಂಡಿ, ಈಶ್ವರ ಮಾಲಗಾರ, ಮಹಾಂತೇಶ ಗೊರವನಕೊಳ್ಳ, ರಾಜಶೇಖರ ಕಮತಿ ಹಾಗೂ ಈರಪ್ಪ ಗೋಡಿಕಟ್ಟಿ ಅವರು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.