Home ಜಿಲ್ಲೆ ಚಟ್ನಳ್ಳಿ ಗ್ರಾಮದಲ್ಲಿ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರ ಮುಕ್ತಾಯ

ಚಟ್ನಳ್ಳಿ ಗ್ರಾಮದಲ್ಲಿ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರ ಮುಕ್ತಾಯ

ಬೀದರ, ಮೇ.26-ಬೀದರ ಜಿಲ್ಲೆಯ ಚಟ್ನಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಕಾಲೇಜಿನಿಂದ 2026ರ ಮಾರ್ಚ್ 02 ರಿಂದ ಮೇ 24ರವರೆಗೆ ಹಮ್ಮಿಕೊಂಡ 84 ದಿನಗಳ ತೋಟಗಾರಿಕೆ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರ ಭಾನುವಾರ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ತೋಟಗಾರಿಕೆ ವಸ್ತು ಪ್ರದರ್ಶನ ಉದ್ಘಾಟಿಸಿದ ಕಲಬುರಗಿ ಕೃಷಿ ಕಾಲೇಜಿನ ನಿವೃತ್ತ ಡೀನ್ ಡಾ. ಸುರೇಶ್ ಪಾಟೀಲ್ ಮಾತನಾಡಿ,
ಸಮಗ್ರ ಕೃಷಿ ಜೊತೆಗೆ ಹಣ್ಣು ತರಕಾರಿ ಹಾಗೂ ಪುಷ್ಪೋದ್ಯಮದಂತಹ ತೋಟಗಾರಿಕೆ ಬೆಳೆಗಳನ್ನು ಬೆಳೆದು ರೈತರು ಅಧಿಕ ಲಾಭವನ್ನು ಪಡೆಯಬೇಕೆಂದರು. ವಿದ್ಯಾರ್ಥಿಗಳು ಕಾರ್ಯಾನುಭವ ಶಿಬಿರದ ಅವಧಿಯಲ್ಲಿ ಕಲಿತ ಪ್ರಾಯೋಗಿಕ ಕೌಶಲ್ಯವು ಮುಂದಿನ ದಿನಗಳಲ್ಲಿ ಆತ್ಮವಿಶ್ವಾಸ ಹಾಗೂ ವೃತ್ತಿಪರ ಸಾಮಥ್ರ್ಯವನ್ನು ಹೆಚ್ಚಿಸಲು ನೆರವಾಗುತ್ತದೆ ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತೋಟಗಾರಿಕೆ ಕಾಲೇಜಿನ ಡೀನ್ ಡಾ. ಎಸ್. ವಿ. ಪಾಟೀಲ್ ಮಾತನಾಡಿ, ರೈತರು ತಪ್ಪದೇ ತಮ್ಮ ತಾಕುಗಳ ಮಣ್ಣು ಪರೀಕ್ಷೆ ಮಾಡಿಸಿ, ಅದಕ್ಕನುಗುಣವಾಗಿ ಬೆಳೆಗಳ ಆಯ್ಕೆ ಮಾಡಿಕೊಂಡು ಅಧಿಕ ಇಳುವರಿ ಪಡೆಯಬಹುದೆಂದು ರೈತರಿಗೆ ಸಲಹೆ ನೀಡಿದರು. ಚಟ್ನಳ್ಳಿ ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ನೆರವಾಗಲು ಶಾಲೆಯಲ್ಲಿ ತೋಟಗಾರಿಕೆ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಜೈವಿಕ ಕೇಂದ್ರ, ಸಹಯೋಗದಲ್ಲಿ ತೋಟಗಾರಿಕೆ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.

ಸಹಾಯಕ ಪ್ರಾಧ್ಯಾಪಕರಾದ ಡಾ.ಜಾಹ್ನವಿ ಡಿ.ಆರ್. ಶಿಬಿರದ ವರದಿಯನ್ನು ಓದಿದರು. ತೋಟಗಾರಿಕೆ ಸಂಯೋಜಕ ಡಾ. ಹರೀಶ, ಡಾ. ಫಾರೂಕ್, ಡಾ. ರಾಜಕುಮಾರ್ ಎಮ್., ಡಾ. ವಿಜಯ ಮಹಾಂತೇಶ್, ಡಾ. ಅಬ್ದುಲ್ ಕರೀಮ್, ಅಂಜನೇಯ, ಅಂಬುಜಾ, ಹಾಗೂ ಡಾ. ಅನುರಾಧ, ಗ್ರಾಮಸ್ಥರು, ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕು.ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು ಹಾಗೂ ಅಮಿತ್ ವಂದಿಸಿದರು.