ಕಮಲನಗರದಲ್ಲಿ ಗಮನ ಸೆಳೆದ ಆರ್.ಎಸ್.ಎಸ್ ಪಥ ಸಂಚಲನಪುಷ್ಪ ಮಳೆ ಸುರಿಸಿ ಶಾಸಕ ಪ್ರಭು ಚವ್ಹಾಣ ಗೌರವ

ಕಮಲನಗರ:ಅ.24:ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷ ಹಾಗೂ ವಿಜಯದಶಮಿಯ ಅಂಗವಾಗಿ ಅ.19ರಂದು ಕಮಲನಗರದಲ್ಲಿ ಸಹಸ್ರಾರು ಗಣವೇಷಧಾರಿ ಸ್ವಯಂ ಸೇವಕರು ಪಥ ಸಂಚಲನ ನಡೆಸಿ ಗಮನ ಸೆಳೆದರು.

ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಬಿಳಿ ಅಂಗಿ, ಖಾಕಿ ಪ್ಯಾಂಟು, ಕಪ್ಪು ಟೊಪ್ಪಿಗೆ, ಕೈಯಲ್ಲಿ ಲಾಠಿ ಹಿಡಿದು ಶಿಸ್ತಿನಿಂದ ಪಥ ಸಂಚಲನ ನಡೆಸುತ್ತಿದ್ದ ಸ್ವಯಂ ಸೇವರ ಮೇಲೆ ಪುಷ್ಪಮಳೆ ಸುರಿಸಿ ಗೌರವ ಸಲ್ಲಿಸಿದರು. ಶಿಸ್ತಿನ ಶಿಪಾಯಿಗಳಂತೆ ಪಥ ಸಂಚಲನ ಮಾಡುತ್ತಿದ್ದ ಗಣವೇಶಧಾರಿಗಳು ನೋಡುಗರ ಗಮನ ಸೆಳೆದರು.

ಪಥ ಸಂಚಲನವು ಶನೇಶ್ವರ ಮಂದಿರದಿಂದ ಆರಂಭಗೊಂಡು, ಕೃಷಿ ಉತ್ಪನ್ನ ಮಾರುಕಟ್ಟೆ, ಅಲ್ಲಮಪ್ರಭು ವೃತ್ತ, ಅತಿಥಿ ಗೃಹ, ಹಳೆ ಪೆÇಲೀಸ್ ಠಾಣೆ, ಬಸವೇಶ್ವರ ವೃತ್ತ, ಗ್ರಾಮ ಪಂಚಾಯತ್ ಕಛೇರಿ, ಅಕ್ಕಮಹಾದೇವಿ ವೃತ್ತ, ವಿಠಲ ರುಕ್ಮಿಣಿ ಮಂದಿರ, ಶಿವಾಜಿ ವೃತ್ತ, ಡಾ.ಚನ್ನಬಸವ ಪಟ್ಟದೇವರ ಸ್ಮಾರಕ ಭವನದಿಂದ ಸಾಗಿ ಡಾ.ಚನ್ನಬಸವ ಪಟ್ಟದೇವರ ಪ್ರೌಢಶಾಲೆ ಆವರಣಕ್ಕೆ ಬಂದು ಸಂಪನ್ನಗೊಂಡಿತು.

ಪಥ ಸಂಚಲನ ನೋಡಲು ಮಹಿಳೆಯರು, ಮಕ್ಕಳು ಹಾಗೂ ಯುವಕರು ರಸ್ತೆ ಎರಡು ಬದಿಗಳಲ್ಲಿ ಜಮಾಯಿಸಿದ್ದರು. ಹಲವು ಕಡೆ ಸಾರ್ವಜನಿಕರು ಹೂವುಗಳನ್ನು ಸ್ವಯಂ ಸೇವಕರ ಮೇಲೆ, ಭಗವಾಧ್ವಜ, ಹಾಗೂ ಭಾರತ ಮಾತೆಗೆ, ಡಾ.ಗುರೂಜಿ, ಡಾ.ಹೆಡ್ಗೆವಾರ್ ಅವರ ಭಾವಚಿತ್ರಕ್ಕೆ ಹೂವು ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ಮೆರವಣಿಗೆಯಲ್ಲಿ ಭಾರತ ಮಾತಾ ಕೀ ಜೈ ಸೇರಿ ಮಹಾಪುರುಷರ ಘೋಷಣೆಗಳು ಮೊಳಗಿದವು.

ಪಥ ಸಂಚಲನ ಸಾಗುವ ಎಲ್ಲ ರಸ್ತೆಗಳನ್ನು ಭವ್ಯ ಕಮಾನುಗಳಿಂದ ಅಲಂಕರಿಸಲಾಗಿತ್ತು. ಅಲ್ಲಲ್ಲಿ ಭಾರತಾಂಬೆ, ಡಾ.ಚನ್ನಬಸವ ಪಟ್ಟದೇವರ ಭಾವಚಿತ್ರಗಳನ್ನಿಟ್ಟು ಪೂಜಿಸುವುದು ಕಂಡುಬಂತು. ಮನೆಗಳ ಮುಂದೆ ರಂಗೋಲಿ ಬಿಡಿಸಿ ಅಂದ ಹೆಚ್ಚಿಸಿದ್ದರು. ಅಲ್ಲಮಪ್ರಭು ವೃತ್ತದ ಬಳಿ ಡೋಣಗಾಂವ ಮಠದ ಪೂಜ್ಯ ಡಾ.ಶಂಭುಲಿಂಗ ಶಿವಾಚಾರ್ಯರು ಹಾಗೂ ಠಾಣಾಕುಶನೂರ ಮಠದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಯವರು ಸ್ವಯಂ ಸ್ವೇವಕರ ಮೇಲೆ ಪುಷ್ಪಾರ್ಚನೆಗೈದು ಗೌರವಿಸಿದರು.

ಸಂಘದ ಪ್ರಮುಖರಾದ ದಯಾನಂದ ಪವಾರ ಅವರು ವಿಶೇಷ ಉಪನ್ಯಾಸ ನೀಡಿ, ಹಿಂದೂ ಸಮುದಾಯವನ್ನು ಒಗ್ಗೂಡಿಸಲು, ನಾಗರಿಕರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಲು ಮತ್ತು ಭಾರತೀಯ ಸಂಸ್ಕøತಿ ಮತ್ತು ಪರಂಪರೆಯನ್ನು ಮುಂದುವರಸಿಕಿಂಡು ಹೋಗಲು ಸ್ಥಾಪನೆಯಾಗಿರುವ ಸಂಘವು ಇಂದು ದೇಶಾದ್ಯಂತ ವಿಸ್ತಾರಗೊಂಡಿದೆ ಎಂದು ಹೇಳಿದರು.

ಸಂಘದ ಪ್ರಮುಖರಾದ ಹಣಮಂತರಾವ ಪಾಟೀಲ, ಶಿವಲಿಂಗ ಕುಂಬಾರ, ರಾಜೇಂದ್ರ ಪಾಂಚಾಳ, ಸತೀಷ ಮುಧಾಳೆ, ಪ್ರಮುಖರಾದ ವಸಂತ ಬಿರಾದಾರ, ಬಸವರಾಜ ಪಾಟೀಲ, ಶಿವಾನಂದ ವಡ್ಡೆ, ಕಿರಣ ಪಾಟೀಲ, ಅರಹಂತ ಸಾವಳೆ, ಶಿವು ಝುಲ್ಫೆ, ನಾಗೇಶ ಪತ್ರೆ, ರಾಮಶೆಟ್ಟಿ ಪನ್ನಾಳೆ, ಖಂಡೋಬಾ ಕಂಗಟೆ, ಬಂಟಿ ರಾಂಪೂರೆ, ಬಸವರಾಜ ಹಳ್ಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಲಿಷ್ಠ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಸ್ಥಾಪನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಯಶಸ್ವಿಯಾಗಿ 100 ವರ್ಷಗಳು ಪೂರೈಸಿರುವುದು ಅತ್ಯಂತ ಹೆಮ್ಮೆಯ ವಿಷಯ. ವಿಶ್ವದ ಅತಿ ದೊಡ್ಡ ಸಂಘಟನೆಯಾಗಿ ಬೆಳೆದು ನಿಂತಿರುವ ಸಂಘವು ನೂರು ವರ್ಷಗಳಲ್ಲಿ ಭವ್ಯ ಭಾರತ ನಿರ್ಮಾಣಕ್ಕಾಗಿ ಮಾಡಿರುವ ಸೇವೆ ಅನನ್ಯ.

ಹೆಚ್ಚಿನ ಯುವಕರು ಸಂಘದ ತತ್ವ ಸಿದ್ದಾಂತಗಳನ್ನು ನೆಚ್ಚಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದಕ್ಕೆ ದೇಶಾದ್ಯಂತ ನಡೆಯುತ್ತಿರುವ ಪಥ ಸಂಚಲನವೇ ಸಾಕ್ಷಿ. ಯುವಜನತೆ ದೇಶಪ್ರೇಮ, ಶಿಸ್ತು, ಸೇವಾ ಭಾವನೆಗಳನ್ನು ಬೆಳೆಸಿಕೊಂಡು ಸಂಘದ ತತ್ವಗಳನ್ನು ಜೀವನದಲ್ಲಿ ಮೈಗೂಡಿಸಿಜೊಳ್ಳಬೇಕು.

ಪ್ರಭು ಬಿ.ಚವ್ಹಾಣ : ಮಾಜಿ ಸಚಿವರು ಹಾಗೂ ಶಾಸಕರು ಔರಾದ(ಬಿ)