
ಕಲಬುರಗಿ,ಅ.11-ಮನೆಯ ಮೇನ್ ಡೋರ್ ಕೊಂಡಿ ಮುರಿದು ಅಲಮಾರಿಯಲ್ಲಿಟ್ಟಿದ್ದ 80 ಸಾವಿರ ರೂಪಾಯಿ ನಗದು ಹಣ ಕಳವು ಮಾಡಿರುವ ಘಟನೆ ನಗರದ ಬಿದ್ದಾಪುರ ಕಾಲೋನಿಯಲ್ಲಿ ನಡೆದಿದೆ.
ಅಫಜಲಪುರ ತಾಲ್ಲೂಕಿನ ಅತನೂರ ಗ್ರಾಮದ ಪಿಡಿಒ ಆಗಿರುವ ಅನುಸೂಯಾ ಆನಂದ ರದ್ದೇವಾಡಿ ಎಂಬುವವರ ಮನೆ ಮೇನ್ ಡೋರ್ ಕೊಂಡಿ ಮುರಿದು ಕಳ್ಳರು ಹಣ ದೋಚಿಕೊಂಡು ಹೋಗಿದ್ದು, ಅವರು ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.





























