
ಬೀದರ, ನ.೨೯: ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಗೆ ಒಳಗಾದ ಅನ್ನದಾತರಿಗೆ ಕೂಡಲೇ ಬೆಳೆ ಹಾನಿ ಪರಿಹಾರ ಪಾವತಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಯವರು ನಿನ್ನೆ ಅಧಿಕೃತವಾಗಿ ೧೪.೨೪ ಲಕ್ಷ ರೈತರಿಗೆ ೧೦೩೩ ಕೋಟಿ ರೂ. ಪರಿಹಾರ ನೀಡಿಕೆಗೆ ಚಾಲನೆ ನೀಡಿದ್ದಾರೆ. ಬೀದರ್ ಜಿಲ್ಲೆಗೆ ೧೩೭೯೮.೯೩ ಲಕ್ಷ ರೂ. ಬಿಡುಗಡೆಯಾಗಿದೆ. ಅರ್ಹ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ಕೂಡಲೇ ಖಚಿತಪಡಿಸಿಕೊಳ್ಳಲು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಈ ಸಂಬAಧ ಲಿಖಿತ ಸೂಚನೆ ನೀಡಿರುವ ಅವರು, ತಾವು ಹಲವು ಸುತ್ತಿನ ಸಭೆಗಳನ್ನು ನಡೆಸಿ ಎನ್.ಡಿ.ಆರ್.ಎಫ್. ಮತ್ತು ಎನ್.ಡಿ.ಆರ್.ಎಫ್. ನಿಯಮಾವಳಿಗಳ ರೀತ್ಯ ಶೀಘ್ರ ಬೆಳೆ ಹಾನಿ ಪರಿಹಾರ ನೀಡುವಂತೆ ಸೂಚನೆ ನೀಡಿದ ತರುವಾಯ, ಜಿಲ್ಲಾಡಳಿತ ಅಲ್ಬಾವಧಿಯಲ್ಲೇ ಸಮೀಕ್ಷೆ ಮಾಡಿ, ಪರಿಹಾರ ತಂತ್ರಾAಶದಲ್ಲಿ ಗ್ರಾಮವಾರು, ಸರ್ವೆ ನಂಬರುವಾರು ದಾಖಲಿಸಿದೆ. ಆದರೆ ಇನ್ನೂ ಹಲವರಿಗೆ ಪರಿಹಾರ ಪಾವತಿ ಆಗದಿರುವ ಬಗ್ಗೆ ದೂರುಗಳು ಬರುತ್ತಿದ್ದು, ವಿಳಂಬಕ್ಕೆ ಕಾರಣವೇನು ಎಂದು ತಿಳಿದು ಸಮಸ್ಯೆ ಪರಿಹರಿಸಿ ರೈತರ ಖಾತೆಗೆ ಪರಿಹಾರ ಹಣ ಜಮಾ ಮಾಡಲು ನಿರ್ದೇಶಿಸಿದ್ದಾರೆ.
ಸುಮಾರು ೨೨ ಕೋಟಿ ಹಣ ಪಾವತಿಗೆ ಲಭ್ಯವಿದ್ದರೂ, ಭೂಮಿ ನಿಗಾ ಕೋಶದಲ್ಲಿ ಬಿಲ್ ಸೃಜನೆಯಾಗದೆ ಕಳೆದ ೨೫ ದಿನಗಳಿಂದ ಪರಿಹಾರ ಪಾವತಿ ವಿಳಂಬ ಆಗಿದೆ ಎಂಬ ಆರೋಪ ಕೇಳಿಬಂದಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಈ ಪ್ರಸ್ತಾವನೆ ಯಾವ ದಿನಾಂಕದAದು ಹೋಗಿದೆ. ಯಾವ ಕಾರಣಕ್ಕೆ ವಿಳಂಭವಾಗಿದೆ, ಇದರಲ್ಲಿ ಬಿಎಂಸಿಯ ಅಧಿಕಾರಿ ಅಥವಾ ಸಿಬ್ಬಂದಿಯ ನಿರ್ಲಕ್ಷ್ಯ, ಕರ್ತವ್ಯಲೋಪ ಇದೆಯೇ ಎಂಬ ಬಗ್ಗೆ ಪರಿಶೀಲಿಸಲೂ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ.

























