
ಕಲಬುರಗಿ,ಮೇ.29-ಅಯ್ಯರವಾಡಿಯ ಗೋವಿಂದರಾಜ ವಾಗ್ಮೋರೆ ಮತ್ತು ಅವರ ಪತ್ನಿ ಭಾಗ್ಯಶ್ರೀ ಅವರು 38 ಜನ ವ್ಯಾಪಾರಿಸ್ಥರಿಂದ 8417.64 ಕ್ವಿಂಟಾಲ್ ತೊಗರಿ, 3481.15 ಕ್ವಿಂಟಾಲ್ ತೊಗರಿ ಬೇಳೆ, 100 ಕ್ವಿಂಟಾಲ್ ಕಡಲೆ ಬೇಳೆ, 500 ಕ್ವಿಂಟಾಲ್ ಬೂಸಾ (ಚುನ್ನಿ) ಮತ್ತು ನಗದು ಹಣ 52,88,840/-ರೂ.ಅರ್.ಟಿ.ಜಿ.ಎಸ್. ಮುಖಾಂತರ ತನ್ನ ಖಾತೆಗೆ ಹಾಕಿಸಿಕೊಂಡು ಮತ್ತು ಗುಪ್ತಾ ಎಂಬುವವರ ಜಾಬ್ ವರ್ಕ ಖರ್ಚು ಸೇರಿ 10,07,83,000/-ರೂ.ಪಡೆದುಕೊಂಡು ಹಣ ಅಥವಾ ಮಾಲು ಮರಳಿ ಕೊಡದೇ ತಲೆಮರೆಸಿಕೊಂಡು ಹಣವನ್ನು ಸ್ವಂತಕ್ಕೆ ಬಳಸಿಕೊಂಡು, ಮೋಸ ವಂಚನೆ ಮಾಡಿದ್ದಾರೆ ಎಂದು ಶಿವಸಾಯಿ ಟ್ರೇಡಿಂಗ್ ಕಂಪನಿ ಜನರಲ್ ಮರ್ಚಂಟ್ ಕಮೀಷನ್ ಏಜೆಂಟ್ ಅಂಗಡಿ ಮಾಲೀಕ ಹಣಮಂತರಾಯ ಮಾಲಿ ಪಾಟೀಲ ಎಂಬುವವರು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.