
ಕಲಬುರಗಿ,ನ.7-ನಗರದ ಸುಪರ್ ಮಾರ್ಕೆಟ್‍ನ ತರಕಾರಿ ಮಾರ್ಕೆಟ್ ಕಟ್ಟದಲ್ಲಿರುವ ಭವಾನಿ ಮಾರ್ಕೆಟಿಂಗ್-ಬೇಕರಿ ಸಾಮಾನುಗಳ ಹೋಲ್‍ಸೇಲ್ ಅಂಗಡಿ ಶೆಟರ್ ಮೇಲೆತ್ತಿ ಗಲ್ಲಾದಲ್ಲಿದ್ದ 1.40 ಲಕ್ಷ ರೂ.ನಗದನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಸಂಬಂಧ ಅಂಗಡಿ ಮಾಲಿಕ ನರೇಶ್ ಚೌಧರಿ ಅವರು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.






























