ಬಸವನ ಬಾಗೇವಾಡಿ :ಅ.೧೨:ಪಟ್ಟಣದ ವಿವಿಧ ಬಡಾವಣೆಗಳಿಂದ ಮಹಿಳೆಯರು ರೊಟ್ಟಿ ಮಾಡಿಕೊಂಡು ರೊಟ್ಟಿ ಬುಟ್ಟಿ ಕಟ್ಟಿಕೊಂಡು ಅಳಿಯ ಸ್ಥಳೀಯ ವಿರಕ್ತ ಮಠಕ್ಕೆ ಬಂದು ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿ ಅವರು ರೊಟ್ಟಿ ಬುಟ್ಟಿಗೆ ಪೂಜಿ ಸಲ್ಲಿಸಿದರು ನಂತರ ಮಹಿಳೆಯರು ತಮ್ಮ ಬುತ್ತಿಯನ್ನು ತಲೆ ಮೇಲೆ ಹೊತ್ತುಕೊಂಡು ಸಾಲಾಗಿ ವಿವಿಧ ವಾದ್ಯಗಳಿಂದ ಮೆರವಣಿಗೆ ಮಾಡಿಕೊಂಡು ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬಂದ ನಂತರ ಎಲ್ಲಾ ರೊಟ್ಟಿ ಬುಟ್ಟಿಗಳನ್ನು ದಾಸೋಹಕ್ಕೆ ಅರ್ಪಿಸಲಾಯಿತು ರಾಜ್ಯದ ವಿದೇಶದಲ್ಲಿಗಳಿಂದ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸುತ್ತಾರೆ ಜಾತ್ರೆಯಲ್ಲಿ ನಿರಂತರ ದಾಸೋಹ ನಡೆಯುತ್ತದೆ ಇದರ ಪ್ರಯುಕ್ತವಾಗಿ ನಗರದ ಬಡಾವಣೆಗಳಿಂದ ಮಹಿಳೆಯರು ಮಾಡಿಕೊಂಡು ದಾಸೋಹಕ್ಕೆ ಒಪ್ಪಿಸುವುದು ಇದೊಂದು ಮಾದರಿಯಾಗಲಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು ಈ ಕಾರ್ಯಕ್ರಮದಲ್ಲಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷರಾದ ಈರಣ್ಣ ಪಟ್ಟಣಶೆಟ್ಟಿ ಜಾತ್ರಾ ಕಮಿಟಿ ಅಧ್ಯಕ್ಷರಾದ ರವಿ ರಾಠೋಡ್ ಎಂಜಿ ಆದಿಗೊಂಡ ಇದೊಂದು ಒಳ್ಳೆಯ ಸೇವಾ ಮನೋಭಾವನೆ ಎಂದರು ಈ ಮೆರವಣಿ ಕಾರ್ಯಕ್ರಮದಲ್ಲಿ ಬಸವರಾಜ್ ಹಾರಿವಾಳ ಮಾಂತೇಶ ಹಂಜಗಿ ಸಂಗಮೇಶ ಓಲೆಕಾರ ಮಹೇಶ ಹಿರೇ ಕುರುಬರ ಸಂಗಮೇಶ ಜಾಲಗೇರಿ ಗುರಪ್ಪ ಅವಟಿ ಇದ್ದರು.
























