ಅಥಣಿ:ಅ.೨: ಯುವಕರು ಮತ್ತು ಯುವತಿಯರಿಗೆ ವೈಯಕ್ತಿಕ ಅಭಿವೃದ್ಧಿಗೆ ಸಹಾಯ ಮಾಡುವ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಸ್ನೇಹ ಮತ್ತು ಸೇವೆಯ ಮೂಲಕ ಉತ್ತಮ ಬಾಂಧವ್ಯದ ಜೊತೆಗೆ ನಾಯಕತ್ವದ ಗುಣಗಳನ್ನು ಬಳಸಿಕೊಳ್ಳಲು ರೋಟರಾಕ್ಟ್ ಕ್ಲಬ್ ಬಹಳಷ್ಟು ಸಹಕಾರಿಯಾಗಿದೆ ಎಂದು ಅಥಣಿ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.
ಅವರು ಪಟ್ಟಣದ ಕೆಎಲ್‌ಇ ಸಂಸ್ಥೆಯ ಬಿಬಿಎ ಮತ್ತು ಬಿಸಿಎ ಮಹಾವಿದ್ಯಾಲಯದಲ್ಲಿ ರೋಟರಿ ಸಂಸ್ಥೆಯ ರೋಟರಾಕ್ಟ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೋಟರಿ ಸಂಸ್ಥೆಯೊAದಿಗೆ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಮಹಿಳೆಯರು, ಗ್ರಾಮೀಣ ಪ್ರದೇಶದ ಜನರು, ವಯಸ್ಕರ ಕೂಡ ಸಾಮಾಜಿಕ ಸೇವೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ರೋಟರಿ ಸಂಸ್ಥೆಯAತೆ ಒಂದು ವರ್ಷದ ಅವಧಿಯಲ್ಲಿ ರೋಟರಿ ಕ್ಲಬ್ ಸಹಕಾರದೊಂದಿಗೆ ಕೆಲಸ ಮಾಡಲು ಅವಕಾಶಗಳನ್ನು ಒದಗಿಸಲಾಗುವದು ಎಂದು ಹೇಳಿದ ಅವರು ನೂತನವಾಗಿ ಪದಗ್ರಹಣಗೊಂಡ ರೋಟರಾಕ್ಟ್ ಕ್ಲಬ್ ಪದಾಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಥಣಿ ರೋಟರಿ ಸಂಸ್ಥೆಯ ಅಧ್ಯಕ್ಷ ಸಚಿನ ದೇಸಾಯಿ ಮಾತನಾಡಿ ರೋಟರಿ ಸಂಸ್ಥೆಯು ಅಥಣಿಯಲ್ಲಿ ಕಳೆದ ೨೬ ವರ್ಷಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ, ಪರಿಸರ ಸಂರಕ್ಷಣೆ, ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರೋಟರಾಕ್ಟ್ ಕ್ಲಬ್ ನ ನೂತನ ಪದಾಧಿಕಾರಿಗಳು ಶೈಕ್ಷಣಿಕ ವಲಯದಲ್ಲಿ ಹಮ್ಮಿಕೊಳ್ಳುವ ಸಮಾಜಮುಖಿ ಕಾರ್ಯಕ್ರಮಗಳಿಗೆ ಅಗತ್ಯ ಸಹಕಾರ ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರೋಟರಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಗೌರೀಶ ಕಾರ್ಚಿ, ಕಾರ್ಯದರ್ಶಿಯಾಗಿ ಪ್ರಜ್ವಲ್ ಕೋಳಿಕರ, ಖಜಂಚಿಯಾಗಿ ಸಚಿನ್ ರಾವೂರ, ಸಂಯೋಜಕರಾಗಿ ಶಿಲ್ಪಾ ಗದಗ ಪದಗ್ರಹಣ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಸಹಾಯಕ ಪ್ರಾಂತಪಾಲ ಮೇಘರಾಜ್ ಫಾರಮರ್, ಸಂತೋಷ ಬೊಮ್ಮಣ್ಣವರ, ಶೇಖರ್ ಕೋಲಾರ್, ಶ್ರೀಕಾಂತ ಅಥಣಿ, ಅರುಣ ಯಲಗುದ್ರಿ, ಅನಿಲರಾವ್ ದೇಶಪಾಂಡೆ, ಅರುಣ ಸೌದಾಗರ, ರಮೇಶ ಬುಲಬುಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.































