
ವಿಜಯಪುರ, ಮೇ. 23:ಪ್ರಸಕ್ತ ಶೈಕ್ಷಣಿಕ ಸಾಲಿನ ಅಖಿಲ ಭಾರತೀಯ ಸೈನಿಕ ಶಾಲೆಯ ಪ್ರವೇಶಪೂರ್ವ ಪರೀಕ್ಷೆಯಲ್ಲಿ ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿರುವ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸ್ ವಿದ್ಯಾರ್ಥಿ ರೋಹಿತ ರಾಜು ಚವ್ಹಾಣ ಮಾನಸಿಕ ಸಾಮಥ್ರ್ಯ ವಿಷಯದಲ್ಲಿ ಒಟ್ಟು 50 ಅಂಕಗಳಿಗೆ 50 ಅಂಕಗಳನ್ನು ಪಡೆದುಕೊಂಡು ದೇಶದಲ್ಲಿಯೇ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ.
ವಿದ್ಯಾರ್ಥಿಯ ಸಾಧನೆಗೆ ವಿಷಯ ಶಿಕ್ಷಕಿ ಸುಚಿತ್ರಾ ಹೊಸಮನಿ, ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ, ನೀಲಾ ಜತ್ತಿ, ಮಧು ಬಿರಾದಾರ, ರಾಜೇಶ್ವರಿ ಮುಳಜಿ, ಸೌಮ್ಯ ಗಲಗಲಿ ಸೇರಿದಂತೆ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.