ರಾಬರ್ಟ್ ರೆಡ್‌ಫೋರ್ಡ್ ನಿಧನ ಬಾಲಿವುಡ್ ಸಂತಾಪ

ಹಾಲಿವುಡ್‌ನ ಪ್ರಸಿದ್ಧ ನಟ-ನಿರ್ದೇಶಕ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ರಾಬರ್ಟ್ ರೆಡ್‌ಫೋರ್ಡ್ ನಿಧನರಾಗಿದ್ದಾರೆ. ಅವರಿಗೆ ೮೯ ವರ್ಷ ವಯಸ್ಸಾಗಿತ್ತು. ಮಂಗಳವಾರ ಉತಾಹ್‌ನಲ್ಲಿರುವ ತಮ್ಮ ಮನೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ .ಸನ್‌ಡಾನ್ಸ್ ಸಂಸ್ಥಾಪಕ ಮತ್ತು ಸ್ವತಂತ್ರ ಸಿನಿಮಾದ ಪಿತಾಮಹ ನಿದ್ರೆಯಲ್ಲಿಯೇ ನಿಧನರಾದರು ಎಂದು ಅವರ ವಕ್ತಾರರು ದೃಢಪಡಿಸಿದ್ದಾರೆ.


೧೯೬೦ ರ ದಶಕದಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟ ರಾಬರ್ಟ್ ರೆಡ್‌ಫೋರ್ಡ್, ೧೯೭೦ ರ ದಶಕದ ಅತಿದೊಡ್ಡ ತಾರೆಗಳಲ್ಲಿ ಒಬ್ಬರಾಗಿದ್ದರು. ಅವರು ದಿ ಕ್ಯಾಂಡಿಡೇಟ್, ಆಲ್ ದಿ ಪ್ರೆಸಿಡೆಂಟ್ಸ್ ಮೆನ್, ಮತ್ತು ದಿ ವೇ ವಿ ವರ್ ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮ್ಮ ಆರ್ಡಿನರಿ ಪೀಪಲ್ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕನಿಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.


ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ಹಲವಾರು ಬಾಲಿವುಡ್ ಮತ್ತು ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ.
ಬಾಲಿವುಡ್ ನಟ ಅನಿಲ್ ಕಪೂರ್ ರೆಡ್‌ಫೋರ್ಡ್‌ನ ಹಳೆಯ ಚಿತ್ರಗಳನ್ನು ಹಂಚಿಕೊಂಡು ಭಾವನಾತ್ಮಕ ಟಿಪ್ಪಣಿ ಬರೆದಿದ್ದಾರೆ.


ಅನಿಲ್ ಕಪೂರ್
ಇನ್‌ಸ್ಟಾಗ್ರಾಮ್‌ನಲ್ಲಿ ರಾಬರ್ಟ್ ರೆಡ್‌ಫೋರ್ಡ್ ಅವರ ಚಿತ್ರವನ್ನು ಹಂಚಿಕೊಂಡು, ರಾಬರ್ಟ್ ರೆಡ್‌ಫೋರ್ಡ್‌ಗೆ ಗೌರವ. ಬೇರ್‌ಫೂಟ್ ಇನ್ ದಿ ಪಾರ್ಕ್ ನಿಂದ ದಿ ಗ್ರೇಟ್ ಗ್ಯಾಟ್ಸ್‌ಬೈವರೆಗೆ, ಅವರು ಅನೇಕ ಉತ್ತಮ ಚಲನಚಿತ್ರಗಳನ್ನು ಮಾಡಿದ್ದಾರೆ. ಅವರು ಇದುವರೆಗೆ ಬದುಕಿರುವ ಅತ್ಯಂತ ಸುಂದರ ಮತ್ತು ಆಕರ್ಷಕ ವ್ಯಕ್ತಿಗಳಲ್ಲಿ ಒಬ್ಬರು. ಅವರ ವ್ಯಕ್ತಿತ್ವ ಮತ್ತು ನಗು ಹೋಲಿಸಲಾಗದು ಎಂದು ಬರೆದಿದ್ದಾರೆ


ಕರೀನಾ ಕಪೂರ್
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ರೆಡ್ಫೋರ್ಡ್ ಅವರ ಉಲ್ಲೇಖವನ್ನು ಹಂಚಿಕೊಂಡಿದ್ದಾರೆ. ಅವರು ಬರೆದಿದ್ದಾರೆ, ಕಥೆ ಹೇಳುವುದು ಮುಖ್ಯ. ಮಾನವ ನಿರಂತರತೆಯ ಒಂದು ಭಾಗ – ಕಥೆಗಳನ್ನು ಹೇಳಲೇಬೇಕು. ರಾಬರ್ಟ್ ರೆಡ್‌ಫೋರ್ಡ್ ಎಂದು ಬರೆದಿದ್ದಾರೆ.


ನರ್ಗಿಸ್ ಫಕ್ರಿ, ಅನುರಾಗ್ ಕಶ್ಯಪ್
ನಟಿ ನರ್ಗಿಸ್ ಫಕ್ರಿ ಮತ್ತು ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ತಮ್ಮ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರಸಿದ್ಧ ನಟ-ನಿರ್ದೇಶಕರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ರಾಬರ್ಟ್ ರೆಡ್‌ಫೋರ್ಡ್ ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ. ಅವರನ್ನು ವ್ಯಾಖ್ಯಾನಿಸಿದ ಚಿತ್ರದ ಒಂದು ನೋಟ”
ಎಂದು ನರ್ಗಿಸ್ ಫಕ್ರಿ ಬರೆದಿದ್ದಾರೆ.


ಪ್ರಿಯಾಂಕಾ ಚೋಪ್ರಾ-ಸೋನಮ್ ಕಪೂರ್
ಪ್ರಿಯಾಂಕಾ ಚೋಪ್ರಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ರಾಬರ್ಟ್ ರೆಡ್ಫೋರ್ಡ್ ಅವರ ಚಿತ್ರವನ್ನು ಹಂಚಿಕೊಂಡು ರಾಬರ್ಟ್ ರೆಡ್ಫೋರ್ಡ್ ೧೯೩೬-೨೦೨೫ ಐಕಾನ್ ಎಂದು ಬರೆದಿದ್ದಾರೆ. ಸೋನಮ್ ಕಪೂರ್ ರಾಬರ್ಟ್ ರೆಡ್ಫೋರ್ಡ್ ಅವರ ಚಿತ್ರವನ್ನು ಹಂಚಿಕೊಂಡು ಟ್ರಿಬ್ಯೂಟ್ ಎಂದು ಬರೆದಿದ್ದಾರೆ.


ರಾಬರ್ಟ್ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
೧೯೬೦ ರ ದಶಕದಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ್ದ ರಾಬರ್ಟ್ ರೆಡ್‌ಫೋರ್ಡ್ ೧೯೭೦ ರ ದಶಕದ ಹಾಲಿವುಡ್‌ನ ಅತಿದೊಡ್ಡ ತಾರೆಗಳಲ್ಲಿ ಒಬ್ಬರಾದರು.
ರೆಡ್‌ಫೋರ್ಡ್ ಅವರ ಸಾವಿಗೆ ಕಾರಣವನ್ನು ಹೇಳಿಕೆಯಲ್ಲಿ ನಿರ್ದಿಷ್ಟಪಡಿಸಲಾಗಿಲ್ಲ.


ರಾಬರ್ಟ್ ರೆಡ್‌ಫೋರ್ಡ್ ಅವರ ನಿಧನದಿಂದ ಚಿತ್ರರಂಗ ಆಘಾತಕ್ಕೊಳಗಾಗಿದೆ. ಲಿಯೊನಾರ್ಡೊ ಡಿಕಾಪ್ರಿಯೊ ಮತ್ತು ರಾನ್ ಹೊವಾರ್ಡ್‌ನಿಂದ ಮೆರಿಲ್ ಸ್ಟ್ರೀಪ್‌ವರೆಗಿನ ಹಾಲಿವುಡ್ ತಾರೆಯರು ಅವರ ಹಳೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವರು ಉದ್ಯಮಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದಾರೆ.