ರಸ್ತೆ ಸುರಕ್ಷತಾ ಸಪ್ತಾಹ


ಲಕ್ಷೆ÷್ಮÃಶ್ವರ,ಫೆ.೧: ಪಟ್ಟಣದಲ್ಲಿ ರಾಷ್ಟಿçÃಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಸಾರಿಗೆ ಇಲಾಖೆ ಪೊಲೀಸ್ ಇಲಾಖೆ ಚಂದನ್ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಆಚರಿಸಲಾಯಿತು.
ಜಾಗೃತಿ ಅಭಿಯಾನಕ್ಕೆ ಹಿರಿಯ ದಿವಾಣಿ ನ್ಯಾಯಾಧೀಶರಾದ ಭರತ್ ಯೋಗೇಶ್ ಕರಿಗುದರಿ ಮತ್ತು ಜೆ ಎಂ ಎಫ್ ಸಿ ಕಿರಿಯ ನ್ಯಾಯಾಧೀಶರಾದ ಎಮ್ ಸತೀಶ್ ಅವರು ಚಾಲನೆ ನೀಡಿದರು.


ಜಾಗೃತಿ ಅಭಯಾನವು ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೊಂದಿಗೆ ಪ್ರಮುಖ ಬೀದಿಯಲ್ಲಿ ಸಂಚರಿಸಿ ಸುರಕ್ಷತಾ ನಾಮಫಲಕಗಳು ಹಿಡಿದುಕೊಂಡು ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ನಂತರ ಚಂದನ ಶಿಕ್ಷಣ ಸಂಸ್ಥೆಯಲ್ಲಿ ಸಭೆಯಾಗಿ ಮಾರ್ಪಟ್ಟಿತು.


ಸಭೆಯಲ್ಲಿ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ತಾಲೂಕ ಸಮಿತಿಯ ಅಧ್ಯಕ್ಷರಾದ ಭರತ್ ಕರೆಗುದುರಿಯವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಈಗಿನಿಂದಲೇ ರಸ್ತೆ ನಿಯಮಗಳ ಪಾಲನೆಯಿಂದ ಸುರಕ್ಷತಾ ದೃಷ್ಟಿಕೋನಗಳನ್ನು ಹೇಳುವುದರಿಂದ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ ಈ ನಿಟ್ಟಿನಲ್ಲಿ ಸಾರಿಗೆ ಮತ್ತು ಪೊಲೀಸ್ ಇಲಾಖೆಯವರು ಸಂಚಾರದಟ್ಟನೆಯ ಪ್ರದೇಶಗಳಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಅವರಿಗೆ ಮಾರ್ಗಸೂಚಿಗಳನ್ನು ತಿಳಿಸಿ ಈಗಿನಿಂದಲೇ ಅವರನ್ನು ಸುರಕ್ಷಿತ ವಾಹನ ಸವಾರರನ್ನಾಗಿ ಸಿದ್ಧಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಎಂ. ಭರತ್ ಮಾತನಾಡಿದರು. ಸಾರಿಗೆ ಇಲಾಖೆಯ ಹಿರಿಯ ಮೋಟಾರ್ ವಾಹನ ಅಧಿಕಾರಿ ಅರುಣ್ ಕಟ್ಟಿಮನಿಯವರು ಸಾರಿಗೆ ಇಲಾಖೆಯ ಹಮ್ಮಿಕೊಂಡಿರುವ ರಾಷ್ಟಿçÃಯ ರಸ್ತೆ ಸುರಕ್ಷತಾ ಸಪ್ತಾಹದ ಬಗ್ಗೆ ಮತ್ತು ಸಂಚಾರಿ ನಿಯಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.


ಚಂದನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಟಿ ಈಶ್ವರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಪಿಐ ಬಿವಿ ನ್ಯಾಮಗೌಡರ ಗ್ರೇಡ್ _೨ ತಹಸಿಲ್ದಾರ್ ಮಂಜುನಾಥ ಅಮಾಸಿ ಪಿಎಸ್‌ಐ ನಾಗರಾಜ್ ಗಡದ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.