
ಹುಬ್ಬಳ್ಳಿ,ಫೆ15: ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಹುಬ್ಬಳ್ಳಿ- ಧಾರವಾಡ ಸಂಚಾರ ಉಪ ಪೆÇಲೀಸ್ ಆಯುಕ್ತ ವೀರೇಶ್ ತಿಳಿಸಿದ್ದಾರೆ.
ಗೋಕುಲ ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 1ನೇ ಡಿಪೆÇದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಹಾಗೂ ಇಂಧನ ಉಳಿತಾಯ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ರಸ್ತೆ ಅಪಘಾತಗಳಿಂದ ದೇಶದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಹಾಗೂ ಅಂಗ ಊನತೆ ಹೊಂದುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ದ್ವಿಚಕ್ರ ವಾಹನ ಸವಾರ ಯುವಕರು ಎಂಬುದು ಕಹಿ ಸತ್ಯವಾಗಿದೆ.
ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಹಾಗೂ ನಿರ್ಲಕ್ಷತೆಯ ವಾಹನ ಚಾಲನೆ ಮುಖ್ಯ ಕಾರಣವಾಗಿರುತ್ತದೆ. ಪಾಲಕರು,ಪೆÇೀಷಕರು ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ ಸುರಕ್ಷತೆಯ ನಂಬಿಕೆಯಿಂದ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಸಾರ್ವಜನಿಕರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಸಾರಿಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ವಾಹನ ಚಾಲನೆಯಲ್ಲಿ ಮೊಬೈಲ್ ಬಳಸುವುದು, ರೀಲ್ಸ ಮಾಡುವುದು,ಗುಟ್ಕಾ ಮತ್ತಿತರ ಮಾದಕ ವಸ್ತು ಸೇವನೆ ಮಾಡುವುದು, ಅಪಾಯವನ್ನು ನಾವಾಗಿಯೇ ಮೈಮೇಲೆ ಎಳೆದುಕೊಂಡಂತೆ ಎಂಬುದನ್ನು ಮರೆಯಬಾರದು. ಅಪಘಾತ ರಹಿತ ಸುರಕ್ಷಿತ ಬಸ್ ಚಾಲನೆಯ ಜೊತೆಗೆ ಇಂಧನ ಮಿತವ್ಯಯ ಸಾಧಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸಿ. ತ್ಯಾಗರಾಜ ಮಾತನಾಡಿ ಸಾರಿಗೆ ಸಿಬ್ಬಂದಿಗಳು ಹೆಚ್ಚಿನ ಅವಧಿಗೆ ಕುಳಿತುಕೊಂಡು ಇಲ್ಲವೆ ನಿಂತುಕೊಂಡು ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ಒತ್ತಡ ಹೆಚ್ಚಾಗಿ ಮೂಲವ್ಯಾಧಿ, ಬೆನ್ನು ನೋವು, ವೆರಿಕೋಸ ವೇನ್ಸ, ಮತ್ತಿತರ ವೃತ್ತಿಸಂಬಂಧಿತ ಕಾಯಿಲೆಗಳಿಂದ ಬಳಲುತ್ತಾರೆ. ದುಶ್ಚಟಗಳಿಂದ ದೂರವಿದ್ದು ಒತ್ತಡ ನಿರ್ವಹಣೆಗೆ ನಿತ್ಯ ವಾಕಿಂಗ್, ವ್ಯಾಯಾಮ, ಯೋಗದ ಜೊತೆಗೆ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಿಳಾ ಪೆÇಲೀಸ್ ಠಾಣೆಯ ಸಿ.ಪಿ.ಐ. ಜ್ಯೋತಿರ್ಲಿಂಗ ವಣಕಟ್ಟಿ ಮೂಲಕ ರಸ್ತೆ ಸುರಕ್ಷತಾ ಜಾಗೃತಿ, ಒತ್ತಡ ನಿರ್ವಹಣೆ ಕುರಿತು ಜಾನಪದ ಹಾಡುಗಳನ್ನು ಪ್ರಸ್ತುತಪಡಿಸಿದರು.
ವಿಭಾಗೀಯ ಸಂಚಾರ ಅಧಿಕಾರಿ ಮತ್ತು ವೈ.ಎಂ.ಶಿವರಡ್ಡಿ, ವಿಭಾಗೀಯ ತಾಂತ್ರಿಕ ಇಂಜಿನಿಯರ ದೀಪಕ ಜಾಧವ ಅಪಘಾತ ರಹಿತ ಸುರಕ್ಷಿತ ಬಸ್ ಚಾಲನೆ ಹಾಗೂ ಇಂಧನ ಉಳಿತಾಯಕ್ಕೆ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಅಪಘಾತ ರಹಿತ ಸುರಕ್ಷಿತ ಚಾಲನೆ ಮಾಡಿದ ಹಾಗೂ ಇಂಧನ ಮಿತವ್ಯಯ ಸಾಧಿಸಿದ ಚಾಲಕರನ್ನು ಅಭಿನಂದಿಸಲಾಯಿತು.
ಲೆಕ್ಕಾಧಿಕಾರಿ ಮಹದೇವಸ್ವಾಮಿ, ಡಿಪೆÇ ಮ್ಯಾನೇಜರ ಚೈತನ್ಯ ಅಗಳಗಟ್ಟಿ, ಚಾಲಕರು, ನಿರ್ವಾಹಕರು,ತಾಂತ್ರಿಕ ಸಿಬ್ಬಂದಿ,ಆಡಳಿತ ಸಿಬ್ಬಂದಿ ಮತ್ತಿತರರು ಇದ್ದರು.



























