ಕಲಬುರಗಿ:ಅ.7:ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ 3ನೇ, 4ನೇ ಮತ್ತು 5ನೇ ತರಗತಿಯ ಮಕ್ಕಳಿಂದ ರಸ್ತೆ ನಿಯಮಗಳ ಪಾಲನೆಯ ಕುರಿತು ಬೀದಿ ನಾಟಕ ದೃಶ್ಯವನ್ನು ಪ್ರದರ್ಶನ ಮಾಡಲಾಯಿತು ಮತ್ತು ಟ್ರಾಫಿಕ್ ನಿಯಮಗಳ ಬಗ್ಗೆ ವಸ್ತು ಪ್ರದರ್ಶನ ನಡೆಸಲಾಯಿತು. ಇಂದಿನ ಯುಗದಲ್ಲಿ ಅನೇಕ ಅಪಘಾತಗಳು ಸಂಭವಿಸುತ್ತಿವೆ ಅವುಗಳನ್ನು ತಡೆಯಲು ರಸ್ತೆ ದಾಟುವುದು, ವಾಹನಗಳ ಚಾಲನೆ, ಮೊಬೈಲ್ ಫೋನ್‍ಗಳ ಬಳಕೆಯ ಬಗ್ಗೆ ಮಕ್ಕಳಿಂದ ರಸ್ತೆಯ ನಿಯಮಗಳ ಸಂದೇಶವನ್ನು ಕೊಡಲಾಯಿತು. ರಸ್ತೆ ನಿಯಮಗಳ ಸಂದೇಶವನ್ನು ಮಕ್ಕಳಿಂದ ಪ್ರಚಾರಗೊಳ್ಳಲಿ ಎಂದು ಶಾಲೆಯ ಪ್ರಾಚಾರ್ಯರು ಆದೇಶಿಸಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಹೇಮಂತಕುಮಾರ ಅವರು ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮಾಡಿದರು. ರಸ್ತೆಯ ಪ್ರದರ್ಶನವನ್ನು ಹಿರಿಯ ಶಿಕ್ಷಕಿಯರಾದ ಶ್ರೀಮತಿ ಶಾರದಾ ರಾಂಪೂರೆ, ಕಾಲೇಜಿನ ಮೇಲ್ವಿಚಾರಕರಾದ ಶ್ರೀಶೈಲ್ ಹೊಗಾಡೆ, ಶಂಭುಲಿಂಗ ದಿಗ್ಗಾಂವ ಮತ್ತು ಗುರುಲಿಂಗ ಅವರು ಹಾಗೂ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕವೃಂದದವರು ಈ ಕಾರ್ಯಕ್ರಮವನ್ನು ವಿಕ್ಷಿಸಿದರು.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಹಾಗೂ ಪೂಜ್ಯ ಮಾತೋಶ್ರೀ ದಾಕ್ಷಾಯಣಿ ಅವ್ವಾಜಿ ಹಾಗೂ 9ನೇ ಪೀಠಾಧಿಪತಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪ ಅವರು, ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ. ಬಸವರಾಜ ದೇಶಮುಖ ಹಾಗೂ ಪ್ರಾಚಾರ್ಯರಾದ ಶ್ರೀ. ಎನ್.ಎಸ್. ದೇವರಕಲ್ ಅವರು ಈ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

































