ಅಪಾಯದ ಅಂಚಿನಲ್ಲಿ ರಸ್ತೆ

ಲಕ್ಷ್ಮೇಶ್ವರ,ಫೆ4: ತಾಲೂಕಿನ ಲಕ್ಷ್ಮೇಶ್ವರ-ಶಿರಹಟ್ಟಿ ವಾಯಾ ಅಡರಕಟ್ಟಿ,ಬಟ್ಟೂರು, ಶೇಟ್ಟಿಕೆರಿ ಮಾರ್ಗದ ಅಡರಕಟ್ಟಿ ಮತ್ತು ಬಟ್ಟೂರು ಮಧ್ಯದ ಕಾಂಕ್ರೀಟ್ ರಸ್ತೆ ಎಲ್ಲೆಂದರಲ್ಲಿ ಬಿರುಕು ಬಿಟ್ಟು ಇಡಿ ರಸ್ತೆ ಅಪಾಯದ ಅಂಚಿನಲ್ಲಿದೆ.

ಅಡರಕಟ್ಟಿ – ಬಟ್ಟೂರು ಮಧ್ಯ ನಿರ್ಮಿಸಿದ್ದ ರಸ್ತೆ ಬಿರುಕು ಮುಚ್ಚಲು ಡಾಂಬರು ಹಾಕಲಾಗಿತ್ತು. ಆದರೆ ಈ ತೇಪೆಯ ಕೆಲಸ ಸಿಸಿ ರಸ್ತೆಗೆ ಹೊಂದಿಕೊಳ್ಳದ್ದರಿಂದ ವರ್ಷಕ್ಕಿಂತ ವರ್ಷ ಬಿರುಕು ಹೆಚ್ಚಾಗಿ ಇಡಿ ಸಿಸಿ ರಸ್ತೆಯೇ ಎರಡು ಹೊಳಾಗುವ ಹಂತ ತಲುಪಿದೆ.

ಸರ್ಕಾರ ರಸ್ತೆಗಳ ನಿರ್ಮಾಣಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಅನುದಾನ ನೀಡಿ ಒಂದೆರಡು ವರ್ಷಗಳಲ್ಲಿ ರಸ್ತೆಗಳ ಸ್ಥಿತಿ ಅದೇ ರಾಗ ಅದೇ ಹಾಡು ಎನ್ನುವಂತಾಗಿದ್ದು ಶೀಘ್ರ ರಸ್ತೆ ದುರಸ್ತಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.