ರಸ್ತೆ ವಿವಾದ ಅಧಿಕಾರಿಗಳು ಭೇಟಿ ಪರಿಶೀಲನೆ

filter: 0; jpegRotation: 0; fileterIntensity: 0.000000; filterMask: 0; module:0facing:0; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 129.0; hist255: 0.0; hist252~255: 0.0; hist0~15: 0.0;

ಕೆಜಿಎಫ್.ಮೆ೧೮:ಶ್ರೀನಿವಾಸ್ ಅಂದ್ರೆ ಗ್ರಾಮ ಪಂಚಾಯಿತಿ ಸದಸ್ಯ ಮಾಧವಿ ಗಜೇಂದ್ರ ಹಾಗೂ ಮುಖಂಡರಾದ ಬಾಬುರೆಡ್ಡಿ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆ ಅಡಿ ಬಿಡುಗಡೆಗೊಂಡಿರುವ ಅನುದಾನದಲ್ಲಿ ಖಾಸಗಿ ಲೇಔಟ್ ನಲ್ಲಿ ರಸ್ತೆಯನ್ನು ಹಾಕಲಾಗಿದೆ ಎಂದು ಲೋಕಾಯುಕ್ತ ಹಾಗೂ ಸಿಇ ಓ ರವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಎಇಇ ರವಿಚಂದ್ರನ್ ಹಾಗೂ ನಿವೃತ್ತ ಜಿಲ್ಲಾ ಪಂಚಾಯತ್ ಇಂಜನೀಯರಿಂಗ್ ವಿಭಾಗದ ಎಇಇ ಶೇಷಾದ್ರಿ ರಾಜಪೇಟೆ ರಸ್ತೆ ಯಲ್ಲಿ ರುವ ಖಾಸಗಿ ಲೇಔಟ್ ನಲ್ಲಿ ಅನುದಾನ ವನ್ನು ವಿನಿಯೋಗಿಸಿರುವುದನ್ನು ಪರಿಶೀಲನೆ ನಡೆಸಿದರು.


೨೦೧೭- ೧೮ ನೇ ಸಾಲಿನಲ್ಲಿ ಮುಖ್ಯ ಮಂತ್ರಿ ಗಳ ಗ್ರಾಮ ವಿಕಾಸ ಯೋಜನೆ ಯಡಿಯಲ್ಲಿ ಶ್ರೀನಿವಾಸ್ ಸಂದ್ರ ಗ್ರಾಮ ಪಂಚಾಯಿತಿ ಆಯ್ಕೆ ಯಾಗಿ ೧ ಕೋಟಿ ಅನುದಾನ ಸಹ ಬಿಡುಗಡೆ ಗೊಳಿಸಲಾಗಿತ್ತು ಆದರೆ ೧ ಕೋಟಿ ಅನುದಾನ ದಲ್ಲಿ ೧೦ ಲಕ್ಷ ತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡ ನಿರ್ಮಾಣ ಕ್ಕಾಗಿ ಬಳಸಲಾಗಿತ್ತು ಹಾಗೂ ೩೦ ಲಕ್ಷ ವೆಚ್ಚದಲ್ಲಿ ರಸ್ತೆ ನಿಮೀ೯ಸಿದರು ಸರಿ ಸುಮಾರು ೫೫ ಲಕ್ಷ ಅನುದಾನ ಉಳಿಕೆ ಯಾಗಿತ್ತು ಸಕಾ೯ರ ಕ್ಕೆ ಅನುದಾನ ವಾಪಸು ಆಗಲಿದೆ ಎಂದು ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ರಾಜ ಪೇಟೆ ರಸ್ತೆ ಯಲ್ಲಿ ರುವ ಲೇಔಟ್ ನಲ್ಲಿ ರಸ್ತೆ ನಿಮೀ೯ಸಲು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಅನುಮೋದನೆಯನ್ನು ನೀಡಲಾಗಿತ್ತು

ಈ ಹಿನ್ನೆಲೆಯಲ್ಲಿ ರಾಜ ಪೇಟೆ ರಸ್ತೆ ಯಲ್ಲಿರುವ ಖಾಸಗಿ ಲೇಔಟ್ ನಲ್ಲಿ ರಸ್ತೆ ನಿಮೀ೯ಸಿರುವುದನ್ನು ಆಕ್ಷೇಪ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಾಧವಿ ಗಜೇಂದ್ರ ಹಾಗೂ ಮುಖಂಡರಾದ ಬಾಬುರೆಡ್ಡಿ ತಾಲ್ಲೂಕು ಪಂಚಾಯಿತಿ ಇಒ ಕೋಲಾರ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಲೋಕಾಯುಕ್ತ ರಿಗೆ ದೂರು ನೀಡಿದ್ದರು. ಅಧಿಕಾರಿಗಳು ಪರಿಶೀಲನೆ ನಡೆಸಲು ಆಗಮಿಸಿದ ವೇಳೆ ದೂರುದಾರ ಬಾಬು ರೆಡ್ಡಿ ಹಾಜರಿದ್ದರು.