ರಸ್ತೆ ಅಪಘಾತ: ಮುಖ್ಯ ಶಿಕ್ಷಕ ಸಾವು

ಜೇವರ್ಗಿ:ಡಿ.10: ದ್ವಿಚಕ್ರ ವಾಹನ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿ ಮುಖ್ಯಶಿಕ್ಷಕರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ತಾಲ್ಲೂಕಿನ ನೇದಲಗಿ ಕ್ರಾಸ್ ಹತ್ತಿರ ಸಂಭವಿಸಿದೆ.
ಗುರಣ್ಣಬೂದಿಹಾಳ ಬಳ್ಳುಂಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾಗಿದ್ದ ಗುರಣ್ಣ ನಿಂಗಬಸಪ್ಪ ಬೂದಿಹಾಳ (55) ಮೃತರು. ಕರ್ತವ್ಯ ನಿಮಿತ್ತ ದ್ವಿಚಕ್ರ ವಾಹನದ ಮೇಲೆ ಸಿಂದಗಿಯಿಂದ ಬಳ್ಳುಂಡಗಿ ಗ್ರಾಮದ ಕಡೆಗೆ ಬರುವಾಗ ಸಿಮೆಂಟ್ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.ಶಿಕ್ಷಕ ಗುರಣ್ಣ ನಿಂಗಬಸಪ್ಪ
ಅಪಘಾತದ ರಭಸಕ್ಕೆ ಶಿಕ್ಷಕನ ದೇಹವು ಛಿದ್ರಛಿದ್ರವಾಗಿದೆ. ಘಟನಾ ಸ್ಥಳಕ್ಕೆ ನೆಲೋಗಿ ಪಿಎಸ್‍ಐ ಚಿದಾನಂದ ಸವದಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೆಲೋಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.