Home ಜಿಲ್ಲೆ ಕಲಬುರಗಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಪಿತೃಕಾರ್ಯ

ಮಹಾಲಯ ಅಮಾವಾಸ್ಯೆ ಪ್ರಯುಕ್ತ ಪಿತೃಕಾರ್ಯ

ಕಲಬುರಗಿ: ನಗರದ ಜಗತ್ತಿನ ಗೋಮುಖದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಗುರುರಾಜ ಸೇವಾ ಸಮಿತಿ ಹಾಗೂ ಶ್ರೀ ಗುರುಸಾರ್ವಭೌಮ ಭಜನಾ ಮಂಡಳಿ ವತಿಯಿಂದ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಪಿತೃಪಕ್ಷದ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು.
ಕಳೆದ 15 ದಿನಗಳಿಂದ ಮಠದಲ್ಲಿ ಪಿತೃಪಕ್ಷದ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದು, ಶನಿವಾರ ಸರ್ವಪಿತೃ (ಮಹಾಲಯ) ಅಮಾವಾಸ್ಯೆ ಅಂಗವಾಗಿ ಅನೇಕ ಭಕ್ತರು ಮಠಕ್ಕೆ ಆಗಮಿಸಿ, ತಮ್ಮ ಪೂರ್ವಜರ ಸ್ಮರಣಾರ್ಥ ಪಿತೃಕಾರ್ಯಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ಗುರುರಾಜ ಸೇವಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.