Home ಜಿಲ್ಲೆ ಕಲಬುರಗಿ ದೊಡ್ಡಪ್ರಮಾಣದಲ್ಲಿ ಮತದಾರರ ಪಟ್ಟಿಯಿಂದ ಕೈಬಿಡುವ ಅಪಾಯ:ಡಾ. ಮೊಹಮ್ಮದ್ ಅಸ್ಗರ್ ಚುಲ್ಬುಲ್ ಕಳವಳ

ದೊಡ್ಡಪ್ರಮಾಣದಲ್ಲಿ ಮತದಾರರ ಪಟ್ಟಿಯಿಂದ ಕೈಬಿಡುವ ಅಪಾಯ:ಡಾ. ಮೊಹಮ್ಮದ್ ಅಸ್ಗರ್ ಚುಲ್ಬುಲ್ ಕಳವಳ

ಕಲಬುರಗಿ, ಆ.5 : ಕುಡಾ ಮಾಜಿ ಅಧ್ಯಕ್ಷ ಡಾ. ಮೊಹಮ್ಮದ್ ಅಸ್ಗರ್ ಚುಲ್ಬುಲ್ ಅವರು, ಜಿಲ್ಲೆಯಾದ್ಯಂತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಮತದಾರರ ಮಾಹಿತಿ ನಮೂನೆ ಅಭಿಯಾನದ ಕುರಿತು ಪ್ರಮುಖ ಕಳವಳಗಳನ್ನು ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮತದಾರರ ಡಿಜಿಟಲೀಕರಣದಲ್ಲಿನ ಗಂಭೀರ ಅಂಕಿ-ಅಂಶಗಳ ಅಂತರವನ್ನು ಡಾ. ಚುಲ್ಬುಲ್ ಎತ್ತಿ ತೋರಿಸಿದರು ಮತ್ತು ಕಲಬುರಗಿ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಲಕ್ಷಾಂತರ ನಾಗರಿಕರಿಗೆ ಎದುರಾಗಿರುವ ಹಕ್ಕು ಚಲಾವಣೆಯಿಂದ ವಂಚಿತರಾಗುವ ದೊಡ್ಡ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದರು.
ಕಲಬುರಗಿ ಜಿಲ್ಲೆಯ ಒಟ್ಟು ಮತದಾರರು: 23,71,542, ಎಎಸ್‍ಡಿಡಿಒ (ಅನುಪಸ್ಥಿತಿಯವರು, ಸ್ಥಳಾಂತರಗೊಂಡವರು, ಮೃತರಾದವರು, ನಕಲಿ ಅಥವಾ ಇತರರು) ಎಂದು ಘೋಷಿಸಲಾದ ಮತದಾರರು: 5,36,712.ಇದರ ಅರ್ಥ 5.36 ಲಕ್ಷಕ್ಕೂ ಅಧಿಕ ಮತದಾರರು ಚುನಾವಣಾ ಪಟ್ಟಿಯಿಂದ ಕೈಬಿಡಲ್ಪಡುವ ಗಂಭೀರ ಅಪಾಯದಲ್ಲಿದ್ದಾರೆ.
ಉತ್ತರ ಮತ್ತು ದಕ್ಷಿಣದ ಒಟ್ಟು ಅಪಾಯ: ಕಲಬುರಗಿ ಉತ್ತರ ಮತ್ತು ದಕ್ಷಿಣದಲ್ಲಿ ಒಟ್ಟು 2,18,413 ಮತದಾರರು ಎಎಸ್‍ಡಿಡಿಒ ವರ್ಗದ ಅಡಿಯಲ್ಲಿ ಬರುತ್ತಾರೆ. ಇದರ ಜೊತೆಗೆ, 2 ಲಕ್ಷಕ್ಕೂ ಅಧಿಕ ಮತದಾರರು ಅಸಂಗತತೆಗಳು ವರ್ಗದಡಿಯಲ್ಲಿ ಬರಲಿದ್ದು, ಅವರಿಗೆ ನೋಟೀಸ್‍ಗಳು ಬರುವ ಸಾಧ್ಯತೆಯಿದೆ.
ಗುಲ್ಬರ್ಗಾದ ನಿವಾಸಿಗಳು ತಮ್ಮ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಡಾ. ಚುಲ್ಬುಲ್ ಬಲವಾಗಿ ಒತ್ತಾಯಿಸಿದರು:
ಮತಗಟ್ಟೆ ಸೂಚನಾ ಫಲಕಗಳನ್ನು ಪರಿಶೀಲಿಸಿ: ನಾಗರಿಕರು ತಕ್ಷಣವೇ ತಮ್ಮ ಸಂಬಂಧಿತ ಮತಗಟ್ಟೆಗಳಿಗೆ ಭೇಟಿ ನೀಡಿ, ಎಎಸ್‍ಡಿಡಿಒ ಪಟ್ಟಿಯಲ್ಲಿ ತಮ್ಮ ಹೆಸರುಗಳಿವೆಯೇ ಎಂದು ನೋಟಿಸ್ ಬೋರ್ಡ್‍ನಲ್ಲಿ ಪರಿಶೀಲಿಸಬೇಕು.ಬಿ ಎಲ್ ಒ ಅನ್ನು ಸಂಪರ್ಕಿಸಿ: ಎಎಸ್‍ಡಿಡಿಒಪಟ್ಟಿಯಲ್ಲಿ ಹೆಸರು ಕಂಡುಬಂದಲ್ಲಿ, ಮತದಾರರು ತಕ್ಷಣವೇ ತಮ್ಮ ಮತಗಟ್ಟೆ ಮಟ್ಟದ ಅಧಿಕಾರಿಯನ್ನು ಸಂಪರ್ಕಿಸಿ, ಮಾಹಿತಿ ನಮೂನೆಯನ್ನು ಪಡೆದು, ಭರ್ತಿ ಮಾಡಿ ಅಲ್ಲೇ ಸಲ್ಲಿಸಬೇಕು.ಅಸ್ತಿತ್ವದಲ್ಲಿರುವ ನಮೂನೆಗಳನ್ನು ವಿಳಂಬವಿಲ್ಲದೆ ಸಲ್ಲಿಸಿ: ಈಗಾಗಲೇ ಮಾಹಿತಿ ನಮೂನೆಯನ್ನು ಹೊಂದಿರುವ ಎಲ್ಲ ಮತದಾರರು ಗಡುವಿಗೆ ಮುಂಚಿತವಾಗಿ ತಕ್ಷಣವೇ ತಮ್ಮ ನಮೂನೆಗಳನ್ನು ಸಲ್ಲಿಸುವಂತೆ ಕೋರಲಾಗಿದೆ.
ಹೊಸ ಹಾಗೂ ಯುವ ಮತದಾರರು (ನಮೂನೆ 6): ಅಕ್ಟೋಬರ್ 10,ಕ್ಕೆ 18 ವರ್ಷ ತುಂಬುವ ವ್ಯಕ್ತಿಗಳು ಅಥವಾ ಪ್ರಸ್ತುತ 2025ರ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಆನ್‍ಲೈನ್ ಮೂಲಕ ನಮೂನೆ 6 ಅನ್ನು ಭರ್ತಿ ಮಾಡಬೇಕು ಅಥವಾ ಸಂಬಂಧಿತ ಬಿ ಎಲ್ ಒಗೆ ಸಲ್ಲಿಸಬೇಕು.
2002ರ ಪಟ್ಟಿಯಲ್ಲಿ ಹೆಸರುಗಳಿದ್ದು, 2025ರ ಪಟ್ಟಿಯಲ್ಲಿ ಹೆಸರಿಲ್ಲದ ಮತದಾರರು ತಕ್ಷಣವೇ ನಮೂನೆ 6 ಅನ್ನು ಸಲ್ಲಿಸಬೇಕು.2025ರ ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಅವರ ತಂದೆ, ತಾಯಿ, ತಾತ ಅಥವಾಜ್ಜಿಯರ ಹೆಸರುಗಳು 2002ರ ಮತದಾರರ ಪಟ್ಟಿಯಲ್ಲಿ ಇಲ್ಲದಿರುವವರು ಮಾಹಿತಿ ನಮೂನೆಯ ಭಾಗ ‘ಅ’ ಕಾಲಮ್ ಅನ್ನು ಭರ್ತಿ ಮಾಡಿ ತಕ್ಷಣವೇ ಸಂಬಂಧಿತ ಬಿ ಎಲ್ ಒಗೆ ಒಪ್ಪಿಸಬೇಕು.
ನಮೂನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 8, 2026
ಮತದಾರರ ಸಹಾಯ ಕೇಂದ್ರ: ಗುಲ್ಬರ್ಗಾದಲ್ಲಿ ಹಲವು ಸಾಮಾಜಿಕ, ರಾಜಕೀಯ ಮತ್ತು ಸಮುದಾಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಮತದಾರರ ಸೌಲಭ್ಯ ಕೇಂದ್ರಗಳು ಮತ್ತು ಸಹಾಯ ಕೇಂದ್ರಗಳನ್ನು ನಡೆಸುತ್ತಿರುವುದನ್ನು ಶ್ಲಾಘಿಸಿದ ಡಾ. ಚುಲ್ಬುಲ್, ಮಾರ್ಗದರ್ಶನಕ್ಕಾಗಿ ಈ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ನಾಗರಿಕರಿಗೆ ಪೆÇ್ರೀತ್ಸಾಹಿಸಿದರು.ಕಾನೂನು ನೆರವು ಸಮಿತಿ: ಅಧಿಕೃತ ನೋಟೀಸ್‍ಗಳಿಗೆ ಹೇಗೆ ಉತ್ತರಿಸಬೇಕು ಮತ್ತು ಮತದಾರರಿಗೆ ಹೇಗೆ ಸಹಾಯ ಮಾಡಬೇಕು ಎಂಬುದರ ಕುರಿತು ತಜ್ಞರು ಹಾಗೂ ವಕೀಲರೊಂದಿಗೆ ಚರ್ಚಿಸಿ, ಪ್ರಾಮಾಣಿಕವಾಗಿ ಯೋಜಿಸಿ ಮೀಸಲಾದ ಕಾನೂನು ಸಮಿತಿಯನ್ನು ರಚಿಸುವುದಾಗಿ ಅವರು ಘೋಷಿಸಿದರು.