ರೈಫಲ್ ಶೂಟಿಂಗ್ ಸ್ಪರ್ಧೆ: ಅದಿತಿಗೆ ಕಂಚಿನ ಪದಕ

ತುಮಕೂರು, ಜ. ೨- ಮಧ್ಯಪ್ರದೇಶದ ಇಂದೋರ್‌ನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸ್ಕೂಲ್‌ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ೬೯ನೇ ರಾಷ್ಟ್ರ ಮಟ್ಟದ ೧೭ ವರ್ಷ ವಯೋಮಿತಿಯ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ತುಮಕೂರಿನ ವಿವೇಕಾನಂದ ಶೂಟಿಂಗ್ ಅಕಾಡೆಮಿಯ ಅದಿತಿ ಜಿ. ಭಾಗವಹಿಸಿ ಕಂಚಿನ ಪದಕ ಪಡೆದಿದ್ದಾರೆ.


ಸ್ಕೂಲ್‌ಗೇಮ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆಯುವ ಮೂಲಕ,ಭಾರತದ ಅತಿ ದೊಡ್ಡ ಕ್ರೀಡಾಕೂಟವಾದ ಖೇಲೋ ಇಂಡಿಯಾ ಯೂತ್‌ಗೇಮ್ಸ್ -೨೦೨೬ರಲ್ಲಿ ಭಾಗವಹಿಸಲು ಆರ್ಹತೆ ಗಳಿಸಿ, ರಾಜ್ಯಕ್ಕೆ, ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.


ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಹಿತ್‌ಗಂಗಾಧರ್ ಅವರುಗಳು ಸ್ಕೂಲ್‌ಗೇಮ್ಸ್ ಫೇಡರೇಷನ್ ಆಫ್ ಇಂಡಿಯಾ ಪದಕ ಪಡೆದ ಅದಿತಿ.ಜಿ. ಅವರನ್ನು ಅಭಿನಂದಿಸಿದ್ದಾರೆ.


ಈ ಸಂದರ್ಭದಲ್ಲಿ ವಿವೇಕಾನಂದ ಶೂಟಿಂಗ್ ಅಕಾಡೆಮಿಯ ತರಬೇತುದಾರ ಅನಿಲ್ ಮತ್ತಿತರರು ಉಪಸ್ಥಿತರಿದ್ದರು.