ಧಾರ್ಮಿಕ ಸಾಂಸ್ಕೃತಿಕ ವೈಭವ ಭಕ್ತಿಭಾವದಿಂದ ಸಂಪನ್ನ

ಆಳಂದ:ಫೆ.೧: ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿರುವ ಶ್ರೀ ಚನ್ನಮಲ್ಲೇಶ್ವರ ಮಠದ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಶ್ರೀ ಚನ್ನಮಲ್ಲೇಶ್ವರ ಚರಿತಾಮೃತ ಮಹಾಪುರಾಣ ಪ್ರವಚನ, ಪೀಠಾಧಿಪತಿ ಶ್ರೀ ಚನ್ನಮಲ್ಲ ಶಿವಾಚಾರ್ಯ ಶಿವಯೋಗಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರವೇರಿದ್ದು, ಈ ಭವ್ಯ ಸಮಾರೋಪದೊಂದಿಗೆ ಮಹಾಮಂಗಲಕ್ಕೆ ಸಾಕ್ಷಿಯಾಯಿತು.
ಬೆಳಿಗ್ಗೆ ಸುಮಂಗಲಿಯರ ಕುಂಭಕಳಸ, ಮುತ್ತಿನಾರತಿ ಹಾಗೂ ಮಂಗಳವಾದ್ಯಗಳೊAದಿಗೆ ಡಾ. ಶ್ರೀ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಗ್ರಾಮ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿAದ ನಡೆಯಿತು.
ಶ್ರೀಮಠಕ್ಕೆ ಮೆರವಣಿಗೆ ಆಗಮಿಸಿದ ನಂತರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರು, “ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಸನ್ಮಾರ್ಗದತ್ತ ಕರೆದೊಯ್ಯುವ ಶಕ್ತಿಯನ್ನಿಟ್ಟುಕೊಂಡಿವೆ. ಶ್ರೀ ಚನ್ನಮಲ್ಲ ಶಿವಯೋಗಿಗಳ ಸಮಾಜಮುಖಿ ಸೇವೆಗಳು ಅನುಕರಣೀಯ” ಎಂದು ಶ್ಲಾಘಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಚನ್ನಮಲ್ಲ ಶಿವಯೋಗಿಗಳು ಆಶೀರ್ವಚನ ನೀಡುತ್ತಾ, ಭಕ್ತರ ಸರ್ವತೋಮುಖ ಕಲ್ಯಾಣವೇ ಶ್ರೀಮಠದ ಮುಖ್ಯ ಉದ್ದೇಶ. ಪ್ರತಿಯೊಬ್ಬರೂ ಧರ್ಮಮಾರ್ಗದಲ್ಲಿ ನಡೆಯುವ ಮೂಲಕ ಆತ್ಮೋನ್ನತಿ ಸಾಧಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ವೀರಣ್ಣ ಮಂಗಾಣೆ, ಸರಡಗಿ ಮಠದ ಅಪ್ಪಾರಾವ್ ದೇವಿ ಮಠಾಧೀಶರು, ಐನಾಪೂರದ ಶ್ರೀಗಳು, ಹುಬ್ಬಳ್ಳಿಯ ಸಿದ್ಧಲಿಂಗ ದೇವರು,ಶ್ರೀನಿವಾಸ್ ಸರಡಗಿ ಸೇರಿದಂತೆ ವಿವಿಧ ಮಠಾಧೀಶರು ಉಪಸ್ಥಿತರಿದ್ದು ಭಕ್ತರಿಗೆ ಆಶೀರ್ವಚನ ನೀಡಿದರು.
ಸಾಮಾಜಿಕ ಕಳಕಳಿಯ ಭಾಗವಾಗಿ ನಿವೃತ್ತ ಸೈನಿಕರಿಗೆ ಸನ್ಮಾನ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಖ್ಯಾತ ನೇತ್ರ ತಜ್ಞರಿಂದ ಉಚಿತ ನೇತ್ರ ತಪಾಸಣೆ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಶ್ರೀ ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯ ಬಡದಾಳ ಶಾಲಾ ವಿದ್ಯಾರ್ಥಿಗಳು ಶ್ರೀ ಚನ್ನಮಲ್ಲ ಶಿವಾಚಾರ್ಯರ ಪವಾಡಗಳನ್ನು ಆಧರಿಸಿದ ಕಿರು ನಾಟಕ ಪ್ರದರ್ಶಿಸಿ ಮೆಚ್ಚುಗೆ ಪಡೆದರು.
ಹಿರಿಯ ಕೃಷಿ ವಿಜ್ಞಾನಿಗಳಿಂದ ಕೃಷಿ ಕುರಿತ ವಿಶೇಷ ಮಾರ್ಗದರ್ಶನ, ಸುಚಿತ ಕಿಣಗಿ ಹಾಗೂ ತಂಡದಿAದ ಭರತನಾಟ್ಯ ಕಾರ್ಯಕ್ರಮ, ಮಾಡಿಯಾಳ ಆಯುರ್ವೇದ ಆಸ್ಪತ್ರೆಯ ವತಿಯಿಂದ ಬಡ ರೋಗಿಗಳಿಗೆ ಉಚಿತ ಸಂಧಿವಾತ ಚಿಕಿತ್ಸಾ ಶಿಬಿರ ನಡೆಯಿತು. ಇಂಡಿಯನ್ ಐಡಲ್ ಖ್ಯಾತ ಗಾಯಕಿ ಶಿವಾನಿ ಶಿವದಾಸ ಸ್ವಾಮಿ ಹಿರೇಮಠ ಹಾಗೂ ತಂಡದ ಭಕ್ತಿ ಸಂಗಮ ಕಾರ್ಯಕ್ರಮ ಭಕ್ತರನ್ನು ಆಕರ್ಷಿಸಿತು.
ನ್ಯಾಯವಾದಿ ಬಾಬಾಸಾಹೇಬ ಪಾಟೀಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಾದಿಮನಿ, ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಮಹಾದೇವ ತಂಬಾಕವಾಡಿ, ಮಲ್ಲಿಕಾರ್ಜುನ ಪರೆಣಿ, ಶಿವುಕುಮಾರ ಹೀರಾ, ರವಿ ಮದನಕರ್, ಶರಣಗೌಡ ದೇವಂತಗಿ, ನಾಗರಾಜ ಶೇಗಜಿ, ಜಿಪಂ ಮಾಜಿ ಸದಸ್ಯ ಶಿವಶರಣಪ್ಪ ಹಿರಾಪೂರ ಸೇರಿದಂತೆ ಅನೇಕರು ಅತಿಥಿಗಳಾಗಿ ಆಗಮಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಷ್ ಪೊಲೀಸ್ ಪಾಟೀಲ್, ಸೂರ್ಯಕಾಂತ್ ರಾಮ್‌ಜಿ, ಸಂಗಣ್ಣ ಮುದ್ದಡಗಿ, ಪ್ರಭಾಕರ್ ಬಿರಾದಾರ್, ಶಿವಲಿಂಗಪ್ಪ ದೇನಕ್, ನಿಂಗಣ್ ಮಾಸ್ಟರ್ ಕಂಬಾರ್, ಸಿದ್ಧರಾಮ ಮಾಲಿ ಪಾಟೀಲ್, ಸಿದ್ದರಾಮ ಕಂಬಾರ್, ಬಸವರಾಜ್ ಕೌಲಗಿ, ಸಂಗಮನಾಥ ಉಪ್ಪಿನ್, ಕುರಬಸಯ್ಯ ಸ್ವಾಮಿ, ಸಿದ್ದರಾಮ ಶಿರೋಳ, ಚೆನ್ನು ಬಿರಾದಾರ್ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಇದ್ದರು.