ಮತಪಟ್ಟಿ ಪರಿಷ್ಕರಣೆ:ತಡೆಗೆ ಸುಪ್ರೀಂ ನಕಾರ

ನವದೆಹಲಿ,ನ.೨೭- ಚುನಾವಣಾ ಆಯೋಗ ಶಾಸನಬದ್ಧವಾಗಿ ಮತ್ತು ಸಾಂವಿಧಾನಿಕವಾಗಿದ್ದು ದೇಶಾದ್ಯಂತ ಮತದಾರರ ವಿಶೇಷ ತೀವ್ರ ಪರಿಷ್ಕರಣೆನಡೆಸಲು ಅಧಿಕಾರ ಹೊಂದಿದೆ ಮತ್ತು ಪ್ರಕ್ರಿಯೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಸುಪ್ರೀಂಕೋರ್ಟ್‌ನ ಈ ಮಹತ್ವದ ತೀರ್ಪಿನಿಂದ ಚುನಾವಣಾ ಆಯೋಗಕ್ಕೆ ಇದ್ದ ಅಡೆ ತಡೆ ದೂರವಾಗಿದ್ದು ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧ ಭಾಗಳಲ್ಲೊ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಗೆ ವಿರೋಧಿಸಿದ್ದ ರಾಜ್ಯಗಳಿಗೆ ಹಿನ್ನೆಡೆ ಆಗಿದೆ.

ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ಮತದಾರರ ತೀವ್ರ ಪರಿಷ್ಕರಣೆ ಕಾರ್ಯಕ್ಕೆ ತಡೆ ನೀಡಲು ನಿರಾಕರಿಸಿ ಚುನಾವಣಾ ಆಯೋಗದ ಕೆಲಸ ಕಾರ್ಯಗಳಿಗೆ ಹಸಿರು ನಿಶಾನೆ ತೋರಿದೆ.

ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಯಾವುದೇ ಅಕ್ರಮಗಳು ಗಮನಕ್ಕೆ ಬಂದರೆ ಸರಿಪಡಿಸುವ ಕ್ರಮಗಳನ್ನು ಆದೇಶಿಸುವುದಾಗಿ ಭರವಸೆ ನೀಡಿ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಲು ಸಮ್ಮತಿ ನೀಡಿದೆ.

ಸುಪ್ರೀಂ ಕೋರ್ಟ್‌ನ ನಿರ್ದಶನದಲ್ಲಿ ಮತದಾರರ ಪಟ್ಟಿಗಳ ನವೀಕರಣದ ವಿರುದ್ಧ ಒಂದೇ ಒಂದು ಆಕ್ಷೇಪಣೆ ಸಲ್ಲಿಸಲಾಗಿಲ್ಲ.
೨ನೇ ಹಂತದಲ್ಲಿ ೧೨ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಷ್ಕರಣೆ ಪ್ರಾರಂಭಿಸಲಿದೆ, ಬಿಹಾರದಲ್ಲಿ ಯಾವುದೇ ದೂರುಗಳಿಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

೨ನೇ ಹಂತದಲ್ಲಿ ೧೨ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ವೀಶೇಷ ಪಟ್ಟಿ ಪರಿಷ್ಕರಣೆ ಪ್ರಾರಂಭಿಸಲಿದೆ, ಬಿಹಾರದಲ್ಲಿ ಯಾವುದೇ ದೂರುಗಳಿಲ್ಲ ಎಂದು ಹೇಳಿದ್ದಾರೆ.

ಆರ್ ಜೆಡಿ ಸಂಸದ ಮನೋಜ್ ಝಾ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಮತದಾರರ ಪಟ್ಟಿ ಪರಿಷ್ಕರಣೆ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ವಾದಗಳನ್ನು ಪ್ರಾರಂಭಿಸಿದರು, ಮತದಾರರ ಎಣಿಕೆ ನಮೂನೆಗಳನ್ನು ಭರ್ತಿ ಮಾಡಲು ಸಾಧ್ಯವಾಗದ ಲಕ್ಷಾಂತರ ಅನಕ್ಷರಸ್ಥ ಜನರಿದ್ದಾರೆ, ಇದು ಹೊರಗಿಡುವ ಸಾಧನವಾಗಿದೆ ಎಂದು ಹೇಳಿದ್ದಾರೆ.

“ಮತದಾರನನ್ನು ಎಣಿಕೆ ನಮೂನೆ ಭರ್ತಿ ಮಾಡಲು ಏಕೆ ಕೇಳಬೇಕು ಒಬ್ಬ ವ್ಯಕ್ತಿಯು ಭಾರತೀಯ ಪ್ರಜೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಇಅ ಯಾರು ಆಧಾರ್ ಕಾರ್ಡ್ ನಿವಾಸದ ಸ್ಥಳ ಮತ್ತು ಜನ್ಮ ದಿನಾಂಕವನ್ನು ಉಲ್ಲೇಖಿಸುತ್ತದೆ, ೧೮ ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ತಾವು ಭಾರತೀಯ ನಾಗರಿಕರು ಎಂದು ಸ್ವಯಂ ಘೋಷಣೆ ಮಾಡಿದರೆ ಮತದಾರರಾಗಿ ದಾಖಲಾಗಲು ಇದು ಸಾಕಾಗುತ್ತದೆ” ಎಂದು ಸಿಬಲ್ ವಾದ ಮಂಡಿಸಿದ್ದರು.