ಎ. ಪಿ. ಡಿ ಸಂಸ್ಥೆಯ ಕಾರ್ಯಗಳ ಪರಿವೀಕ್ಷಣೆ ಹಾಗೂ ಶ್ಲಾಘನೆ

ಗುರುಮಠಕಲ್:ಜು.೬:ಬೆಂಗಳೂರಿನ ಎಮ್ ಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನ ವಿಧ್ಯಾರ್ಥಿಗಳಿಂದ ತಾಲೂಕಿನ ಸ್ವಾವಲಂಬಿ ವಿಕಲಚೇತನರ ಕ್ಷೇತ್ರಭೇಟಿ. ಗುರುಮಠಕಲ್ ತಾಲೂಕಿನ ವಿಕಲ ಚೇತನರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎ.ಪಿ.ಡಿ ದಿ ಎಸೋಷಿಯೇಷನ್ ಪೀಪಲ್ ವಿತ್ ಡಿಸೆಬಿಲಿಟಿ ಅವರ ಅಂಗವಿಕಲರ ಅಭಿವೃದ್ಧಿ ಕಾರ್ಯಕ್ರಮಗಳ ಪರಿವೀಕ್ಷಣೆ ಹಾಗೂ ಸ್ವಾವಲಂಬಿ ವಿಕಲಚೇತನರ ಅಧ್ಯಯನ ಕುರಿತಾಗಿ ಬೆಂಗಳೂರು ಎಮ್. ಎಸ್. ರಾಮಯ್ಯ ವೈದ್ಯಕೀಯ ಬಿಪಿಟಿ ವಿಭಾಗದ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳು ಭೇಟಿ ನೀಡಿ ಅವರ ಜೀವನ ಚಕ್ರದ ಕುರಿತು ಮಾಹಿತಿ ಪಡೆದರು. ಕು.ಸಂಪ್ರೀತ ಎಲ್ ಸಿ ಎ ಕಾರ್ಯಕ್ರಮದ ವ್ಯವಸ್ಥಾಪಕರು, ನಾಗಪ್ಪ ಜಿ ಅವಂಟಿ, ವಿರುಪಾಕ್ಷ ಮಾಲಿಪಾಟೀಲ ತಾಲೂಕ ಸಂಯೋಜಕರು, ಸಿದ್ದನ ಗೌಡ ಅರ್, ಪಿ, ಡಿ ಟಾಸ್ಕ ತಾಲೂಕ ಅಧ್ಯಕ್ಷರು, ಚಂದ್ರಪ್ಪ, ಹಣಮಂತ, ಮಂಗಮ್ಮ ಶ್ರೀದೇವಿ, ಶಿಲ್ಪ, ಗಂಗಪ್ಪ, ವೈದ್ಯಕೀಯ ಕಾಲೇಜಿನ ವಿಧ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ವಿರುಪಾಕ್ಷ ಮಾಲಿ ಪಾಟೀಲ ಮಾತನಾಡಿ ಪಟ್ಟಣದ ಹಾಗೂ ತಾಲೂಕಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ೩ ಸಾವಿರಕ್ಕೂ ಹೆಚ್ಚು ವಿಕಲ ಚೇತನರಿಗೆ ಯುಡಿಐಡಿ ಕಾರ್ಡ ಎಪಿಡಿ ವತಿಯಿಂದ ಮಾಡಿಸಿದ್ದು , ಸರಕಾರದಿಂದ ಸಿಗುವ ಮುದ್ರ ಯೋಜನೆ, ಪ್ರಧಾನ ಮಂತ್ರಿ ಆವಾಸ ಯೋಜನೆ, ಜೀವನ ಜ್ಯೋತಿ ವಿಮಾ ಯೋಜನೆ, ಇನ್ನೂ ಅವರಿಗೆ ಸ್ವ ಸಹಾಯ ಸಂಘಗಳನ್ನು ಮಾಡಿಕೊಟ್ಟು ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಎ. ಪಿ. ಡಿ ಸಂಸ್ಥೆಯಿAದ ಮಾಡುತ್ತಿದ್ದೆ?ವೆ ಎಂದು ಹೇಳಿದರು. ನೀತಿ ಮತ್ತು ವಕಾಲತ್ತು ವಿಭಾಗದ ಜಿಲ್ಲಾ ಸಂಯೋಜಕರಾದ ನಾಗೇಶ್ ಜಿ ಅವಂಟಿ ಅವರು ಮಾತನಾಡಿ ಸ್ವ ಸಹಾಯ ಸಂಘಗಳಿಗೆ ಸರಕಾರದಿಂದ ಸಿಗುವ ಸೌಲಭ್ಯ ಗಳನ್ನು ವಿವರಿಸಿ, ಪಟ್ಟಣದ ಜೈ ಭವಾನಿ ಸ್ವ ಸಹಾಯ ಸಂಘ ಕುರಿತು ಅವರ ಕಾರ್ಯ ವೈಖರಿ, ಪೂರ್ವದಲ್ಲಿ ನಿರಾಶಾವಾದಿಯಾಗಿ ಸಮುದಾಯದ ನಡುವೆ ಅಂಗವೈಕಲ್ಯವನ್ನೇ ಸವಾಲಾಗಿ ಸ್ವೀಕರಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಅವರನ್ನು ತುಂಬು ಹೃದಯದಿಂದ ಶ್ಲಾಘನೆ ಮಾಡಿದರು.
ಪಟ್ಟಣದ ವಿಜಯ ಸಿಂಗ್ ರಾಜಪುತ ಅಂಗವೈಕಲ್ಯವನ್ನೇ ಸವಾಲಾಗಿ ಸ್ವೀಕರಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡು ಅಂಗಡಿ ಮಾಲೀಕರಾಗಿ ಅದೆಷ್ಟೊ ಮಂದಿ ಅಂಗ ವಿಕಲರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ, ಅವರ ಅಂಗಡಿಗೆ ಭೇಟಿ ನೀಡಿ ಅವರು ಯಾವ ರೀತಿ ವಿವಿಧ ರೀತಿಯ ಖಿ-shiಡಿಣ, ಕಪ್, ಮಗ್, ವಸ್ತುಗಳ ಮೇಲೆ ಹೆಸರು ಮುದ್ರಣ ಮಾಡಿ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಕಳುಹಿಸುತ್ತಿರುವದನ್ನು, ಹಾಗೂ ಶಾಲೆಯ ಗೋಡೆಗಳಿಗೆ ಬಣ್ಣ ಬಣ್ಣದ ಚಿತ್ರ ಬಿಡಿಸುವ, ಅವರಲ್ಲಿರುವ ಕಲೆಯನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಹುಟ್ಟುತ್ತಲೆ ಪೋಲಿಯೊ ರೋಗಕ್ಕೀಡದವರು, ತಮ್ಮ ಎರಡೂ ಕಾಲುಗಳ ಸ್ವಾಧಿuಟಿಜeಜಿiಟಿeಜನ ಕಳೆದುಕೊಂಡರೂ ಧೃತಿಗೆಡದೆ ಯಾರಿಗೂ ಹೊರೆಯಾಗದೆ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಅರ್ ಪಿ ಡಿ ಟಾಸ್ಕ ಫೋರ್ಸ್ ತಾಲೂಕಿನ ಅಧ್ಯಕ್ಷರಾದ ಸಿದ್ದನಗೌಡ ಅವರು ವಿಕಲ ಚೇತನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಿಲ್ಲಾ ಮಟ್ಟ, ರಾಜ್ಯ ಮಟ್ಟದ, ಎಲ್ಲಾ ಅಧಿಕಾರಿಗಳು ಹಾಗೂ ಸಂಬAದಪಟ್ಟ ಸಚಿವರಿಗೆ ಮನವಿ ನೀಡಿ ಪರಿಹಾರ ಕಂಡು ಕೊಳ್ಳುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಪಿಡಿ ಸಿಬ್ಬಂದಿಗಳಾದ ಶಿಲ್ಪಾ ಎಂ.ರೇಷ್ಮಾ,ನಾಗಮಣಿ,ಗAಗಪ್ಪ ಸೇರಿದಂತೆ ಇನ್ನಿತತರು ಹಾಜರಿದ್ದರು.