ಕಂದಾಯ ಇಲಾಖೆ ಡಿ ಗ್ರೂಪ್ ನೌಕರ ಬಸವರಾಜ ಹೂಗಾರ್ ರಸ್ತೆ ಅಪಘಾತದಲ್ಲಿ ಸಾವು

ಜೇವರ್ಗಿ: ಜ.8:ತಾಲೂಕಿನ ಸೊನ್ನ ಕ್ರಾಸ್ ಬಳಿ ಬುಧವಾರ ತಡರಾತ್ರಿ ಬೈಕ್-ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಮೃತಪಟ್ಟಿದ್ದಾರೆ. ಕಂದಾಯ ಇಲಾಖೆಯ ಡಿ ಗ್ರೂಪ್ ನೌಕರ ಬಸವರಾಜ್ ಹೂಗಾರ್ ಅವರು ತಮ್ಮ ಕೆಲಸ ಮುಗಿಸಿ ಪ್ರತಿನಿತ್ಯದಂತೆ ಪಟ್ಟಣದಿಂದ ಸ್ವಗ್ರಾಮ ನೆಲೋಗಿಗೆ ಹೊರಟಿದ್ದರು. ದಾರಿ ನಡುವೆ ನಿಂತ ಲಾರಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ನೆಲೋಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ