Home ಜಿಲ್ಲೆ ಕಲಬುರಗಿ ಫೆ. 17 ರಂದು ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ

ಫೆ. 17 ರಂದು ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ

ಕಲಬುರಗಿ:ಫೆ.13: ಜಿಲ್ಲೆಯ ಕಮಲಾಪುರದ ಸುಕ್ಷೇತ್ರ ಭೂಸಣಗಿಯಲ್ಲಿ ಭವ್ಯವಾಗಿ ನೂತನವಾಗಿ ನಿರ್ಮಾಣವಾಗಿರುವ ಜಗದ್ಗುರು ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಜಗದ್ಗುರು ರೇವಣಸಿದ್ದೇಶ್ವರ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಇದೇ ಫೆ. 14ರಂದು ನಡೆಯಲಿದೆ.

ಈ ಧಾರ್ಮಿಕ ಕಾರ್ಯಕ್ರಮದಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿ ಬರುತ್ತಿವೆ ಎಂದು ಮುದ್ದಡಗಾದ ಸದ್ಯೋಜಾತ ರೇಣುಕಾ ಶಿವಾಚಾರ್ಯರು ಹಾಗೂ ನ್ಯಾಯವಾದಿ ಅಮೃತಪ್ಪ ಮಲ್ಕಪ್ಪಗೋಳ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಂಭಾಪುರಿ ಜಗದ್ಗುರುಗಳಾದ ವೀರಸಿಂಹಾಸನಾಧೀಶ್ವರ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಇವರ ಸನ್ನಿಧಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಜತೆಗೆ ಪಂಚಮುಖಿ ಆಂಜನೇಯ, ಮಾಯಾ ಶಕ್ತಿದೇವಿ, ನಂದಿಮೂರ್ತಿ ಹಾಗೂ ನಾಗದೇವತೆ ಪ್ರಾಣ ಪ್ರತಿಷ್ಠಾಪನೆ ಸಹ ನಡೆಯಲಿವೆ. ಇದಕ್ಕಾಗಿ ಎಲ್ಲ ಸಿದ್ದತೆಗಳು ಪೂರ್ಣಗೊಂಡಿವೆ. ಅದೇ ತೆರನಾಗಿ ಫೆ. 17 ರಂದು ಜಗದ್ಗುರು ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ವಿವರಣೆ ನೀಡಿದರು.

ಮುತ್ಯಾನ ಬಬಲಾದ ಮಠದ ಗುರುಪಾದಲಿಂಗ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಸುಕ್ಷೇತ್ರ ಭೂಸಣಗಿಯ ಜಗದ್ಗುರು ರೇವಣಸಿದ್ದೇಶ್ವರ ಆರಾಧಕರಾದ ಶರಣ ಪ್ರಕಾಶ ಮುತ್ತಾ ನೇತೃತ್ವ ವಹಿಸಲಿದ್ದು, ಕಡಗಂಚಿ ವೀರಭದ್ರ ಶಿವಾಚಾರ್ಯರು, ಹಾರಕೂಡ ಹಿರೇಮಠ ಸಂಸ್ಥಾನದ ಡಾ. ಚೆನ್ನವೀರ ಶಿವಾಚಾರ್ಯರು, ಹವಾ ಮಲ್ಲಿನಾಥ ಮಹಾರಾಜರು ನಿರಗುಡಿ ಮುತ್ಯಾ, ಕೆಸರಿಬೆಟ್ಟ ಬಾಲತಪಸ್ವೀ ದ್ವಿತೀಯ ಸಾಂಬ ಶಿವಯೋಗಿ ಶಿವಾಚಾರ್ಯರು, ಭೂಸಣಗಿ ವೀರೂಪಾಕ್ಷ ದೇವರು ಸಮ್ಮುಖತೆ ವಹಿಸುವರು. ದೇವಾಪುರದ ಶಿವಮೂರ್ತಿ ಶಿವಾಚಾರ್ಯರು ನುಡಿ ನಮನ ಸಲ್ಲಿಸುವರು.

ಶಾಸಕರಾದ ಬಸವರಾಜ ಮತ್ತಿಮಡು, ಕೆಕೆಆರ್ ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ , ಅಲ್ಲಮಪ್ರಭು ಪಾಟೀಲ್, ಅವಿನಾಶ ಜಾಧವ್, ಬಿ.ಜಿ.ಪಾಟೀಲ್, ಮಾಜಿ ಸಂಸದ ಡಾ. ಉಮೇಶ ಜಾಧವ್, ಮಾಜಿ ಸಚಿವರಾದ ಎಸ್.ಕೆ.ಕಾಂತಾ, ರೇವು ನಾಯಕ ಬೆಳಮಗಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಅಮರನಾಥ ಪಾಟೀಲ್, ವಿಜಯಸಿಂಗ್ ಮುಖಂಡರಾದ ವೈಜನಾಥ ತಡಕಲ್, ಶಿವಪ್ರಭು ಪಾಟೀಲ್, ನೀಲಕಂಠರಾವ ಎನ್. ಮೂಲಗೆ, ವೀರಣ್ಣ ಮಹಾಂತಗೋಳ, ರವಿ ಬಿರಾದಾರ ಸೇರಿದಂತೆ ಮುಂತಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಕಳೆದ ಫೆ. 9 ರ ಸೋಮವಾರದಿಂದ ಪುರಾಣ ಶುರು: ಜಗದ್ಗುರು ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಅಂಗವಾಗಿ ಕಳೆದ ಫೆ. 9ರಿಂದ ಐದು ದಿನಗಳ ಕಾಲ ರೇವಣಸಿದ್ದೇಶ್ವರ ಮಹಾಪುರಾಣ ಮಹೋತ್ಸವ ನಡೆದು ಬರುತ್ತಲಿದೆ. ಮುದ್ದಡಗಾ ಸಂಗಮೇಶ್ವರ ಸಂಸ್ಥಾನ ಹಿರೇಮಠದ ಸಜ್ಯೋತಾ ರೇಣುಕಾ ಶಿವಾಚಾರ್ಯರು, ಕಪನೂರಿನ ಮಲ್ಲಿಕಾರ್ಜುನ ಟೆಂಗಳಿ ಅವರಿಂದ ಪುರಾಣ ನಡೆದು ಬರುತ್ತಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಜಗದ್ಗುರು ರೇವಣಸಿದ್ದೇಶ್ವರ ಭಕ್ತಿ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಇತಿಹಾಸ : ಸುಮಾರು 400 ವರ್ಷಗಳ ಹಿಂದೆ ಹುಚ್ಚಪ್ಪ ಮುತ್ಯಾ ಅವರು ರೇವಣಸಿದ್ದೇಶ್ವರ ಆರಾಧಕರಾಗಿ ತಮ್ಮ ನಡೆ ನುಡಿಗಳಿಂದ ಶರಣರು ಏನಿಸಿಕೊಂಡರು. ಅವರ ಹೇಳಿಕೆಗಳು ಈ ಭಾಗದಲ್ಲಿ ಜನಮಾಸದಲ್ಲಿ ಬೇರೂರಿದ್ದರು. ತದನಂತರ ಶಿವರಾಯ ಮುತ್ಯಾ ರೇವಣಸಿದ್ದೇಶ್ವರ ಭಕ್ತಿ ಪರಂಪರೆ ಮುಂದುವರೆಸಿಕೊಂಡರು. ತದನಂತರ ಚಂದ್ರಶೇಖರ ಮುತ್ಯಾ ಅವರು ಮುನ್ನೆಡೆಸಿಕೊಂಡು ತಮ್ಮದೇ ಅಪಾರ ಭಕ್ತ ವೃಂದವನ್ನು ಹೊಂದಿದರು. ಚಂದ್ರಶೇಖರ ಮುತ್ಯಾ ಅವರ ಮೊಮ್ಮಗ ಶರಣಪ್ರಕಾಶ ಮುತ್ಯಾ ಅವರಾಗಿದ್ದಾರೆ. ಇವರ ನೇತೃತ್ವದಲ್ಲೇ ಈಗ ಭೂಸಣಗಿಯಲ್ಲಿ ರೇವಣಸಿದ್ದೇಶ್ವರ ನೂತನ ಮಂದಿರ ಭವ್ಯವಾಗಿ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.

ಭಕ್ತ ಮುಖಂಡರಾದ ಸಿದ್ರಾಮಪ್ಪ ಆಲಗೂಡಕರ್, ಬಸವರಾಜ ಈರದಿ ಕುಮಸಿ, ಸಿದ್ದಣ್ಣ ಈತರ ಪಾಟೀಲ್ ಕಣ್ಣೂರ, ನಿಜಲಿಂಗಪ್ಪ ಬುಕ್ಕಾ ಕುಮಸಿ, ಮಲ್ಲಿನಾಥ ಬಿರಾದಾರ ಭೂಸಣಗಿ, ವಿರೇಶ ಬಿರಾದಾರ ಭೂಸಣಗಿ ಮುಂತಾದವರಿದ್ದರು.

……………………

17 ರಂದು ಭವಿಷ್ಯದ ಹೇಳಿಕೆಗಳು

ಶರಣ ಪ್ರಕಾಶ ಮುತ್ಯಾ ಅವರು ಪ್ರತಿವರ್ಷ ಶಿವರಾತ್ರಿ ಅಮಾವಾಸ್ಯೆಯಂದು ಹೇಳುವ ವರ್ಷದ ಭವಿಷ್ಯ ಹೇಳಿಕೆಗಳು ಭಾರಿ ಖ್ಯಾತಿ ಪಡೆದಿವೆ. ಅಂದರೆ ವರ್ಷದ ಕಾಲ ಆಗುವ ಮಳೆ-ಬೆಳೆ ಜತೆಗೆ ರಾಜಕೀಯ ಭವಿಷ್ಯ ಹಾಗೂ ಸಾಮಾಜಿಕ ಘಟನೆಗಳ ಕುರಿತಾಗಿ ಹೇಳಿಕೆಗಳನ್ನು ನುಡಿಯುತ್ತಾರೆ. ಈ ಸಲ ಇದೇ ಫೆ. 17 ರಂದು ಪೂಜ್ಯ ಶರಣಪ್ರಕಾಶ ಮುತ್ಯಾ ಅವರ ಹೇಳಿಕೆಗಳನ್ನು ನುಡಿಯುವರು.

ಜಾತ್ರಾ ಮಹೋತ್ಸವ ಅಂಗವಾಗಿ ಫೆ. 17 ರಂದು ಬೆಳಿಗ್ಗೆ 7.35 ಕ್ಕೆ ಜಗದ್ಗುರು ರೇವಣಸಿದ್ದೇಶ್ವರ ಮೂರ್ತಿಗೆ ರುದ್ರಾಭಿಷೇಕ, ಪಂಚಾಚಾರ್ಯ ಧ್ವಜಾರೋಹಣ ಹಾಗೂ ಅಗ್ನಿ ಪೂಜೆ ನೆರವೇರುವುದು. ತದನಂತರ ಭವಿಷ್ಯದ ಹೇಳಿಕೆಗಳು ನಡೆಯಲಿವೆ.