
ಚನ್ನಮ್ಮನ ಕಿತ್ತೂರು,ಆ೬: ವೃತ್ತಿಯಲ್ಲಿದ್ದವರು ನಿವೃತ್ತಿಯಾಗುವುದು ಸಹಜ ಆದರೆ ಅವರ ಸೇವಾವಧಿ ಸಾರ್ವಜನಿಕರಿಗೆ ಅನನ್ಯವಾಗಿರುತ್ತದೆ ಎಂದು ಕಸಾಪ ಅಧ್ಯಕ್ಷ ಡಾ. ಎಸ್.ಬಿ.ದಳವಾಯಿ ಹೇಳಿದರು.
ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಅಶೋಕ ಕುಶಲಾಪೂರ ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ತಾಲೂಕಿನ ನಿಚ್ಚಣಕಿ ಗ್ರಾಮದ ಶ್ರೀ ಗುರುಮಡಿವಾಳೇಶ್ವರ ಮಠದಲ್ಲಿ ಗ್ರಾಮಸ್ಥರು, ಸಂಘ-ಸAಸ್ಥೆಗಳು ಹಾಗೂ ಕಸಾಪ ಪದಾಧಿಕಾರಿಗಳು, ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿವೃತ್ತಿ ಎನ್ನುವುದು ಸೇವೆಯ ಅಂತ್ಯವಲ್ಲ. ಅದು ಸಮಾಜಮುಖಿ ಚಟುವಟಿಕೆಗಳ ಹೊಸ ಆರಂಭಕ್ಕೆ ಮುನ್ನುಡಿಯಾಗಿದೆ. ಅಂಚೆ ಇಲಾಖೆಯು ದೇಶದ ಜನರ ಪರಸ್ಪರ ಸಂಪರ್ಕಿಸುವ ಮಹತ್ವದ ಸೇತುವೆ. ಈ ಇಲಾಖೆಯಲ್ಲಿ ತಮ್ಮ ಸರಳತೆ, ಸಮಯಪಾಲನೆ, ಜನಸ್ನೇಹಿ, ಕಾರ್ಯಗಳಿಂದ ಉತ್ತಮ ಸೇವೆಗೈದಿದ್ದಾರೆ. ಆದ್ದರಿಂದ ಇವರ ವಿಶ್ರಾಂತಿ ಜೀವನ ಫಲಪ್ರದವಾಗಲೆಂದು ಆಶಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಅಶೋಕ ಕುಶಲಾಪೂರ ತಮ್ಮ ಸೇವಾವಧಿ ಅನುಭವ ಹಂಚಿಕೊAಡು ಸಹೋದ್ಯೋಗಿಗಳ, ಇಲಾಖಾಧಿಕಾರಗಳ ಸಹಕಾರವನ್ನು ಸ್ಮರಿಸಿ ನಿಮ್ಮೆಲ್ಲರಿಗೂ ಕೃತಜ್ಞತೆ ಎಂದರು.
ಸಾನಿಧ್ಯ ವಹಿಸಿ ಆರ್ಶೀವಚನ ನೀಡಿ ಮಾತನಾಡಿದ ಮಡಿವಾಳೇಶ್ವರ ಮಠದ ಪೀಠಾಧ್ಯಕ್ಷ ಪಂಚಾಕ್ಷರಿ ಸ್ವಾಮಿಜೀ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿದರು.
ಸಭೆಯಲ್ಲಿ ಫಕ್ಕೀರಪ್ಪ ದಳವಾಯಿ, ಕರ್ನಾಟಕ ರೈತ ಜಾಗೃತಿ ಸಂಘದ ಮುಖಂಡರಾದ ಅಪ್ಪೇಶ ದಳವಾಯಿ, ಗ್ರಾಪಂ ಮಾಜಿ ಚೇರಮನ್ನ ಮಡಿವಾಳಪ್ಪ ವರಗನ್ನವರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸವರಾಜ ಮಾತನವರ, ಗ್ರಾಮ ಹಿತರಕ್ಷಣಾ ಸಂಘದ ಪದಾಧಿಕಾರಿಗಳು, ಶಂಕರ ಸರಪಳಿ, ಬಸನಗೌಡ ಪಾಟೀಲ, ಶಂಕರ ಹಳೇಮನಿ, ಪತ್ರಕರ್ತ ಮಹಾಂತೇಶ ಕರಬಸನ್ನವರ, ಸನ್ಮಾನಿತ ಕುಟುಂಬದ ಸದಸ್ಯರು, ಇನ್ನಿತರರಿದ್ದರು. ಗ್ರಂಥಪಾಲಕ ಬಸವರಾಜ ದಳವಾಯಿ ನಿರೂಪಿಸಿದರು, ರಮೇಶ ವರಗನ್ನವರ ಸ್ವಾಗತಿಸಿದರು, ಶಂಕರ ಆಯಟ್ಟಿ ವಂದಿಸಿದರು.






























