
ತಾಳಿಕೋಟೆ:ಜೂ.೨: ಸರ್ಕಾರಿ ನೌಕರರಿಗೆ ಸೇವಾ ನಿವೃತ್ತಿ ಎಂಬುದು ಸಹಜವಾದ ಪ್ರಕ್ರೀಯೇಯಾಗಿದೆ ಆದರೆ ಮಾಡುವ ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ ಎಂಬುದು ಅಡಗಿದ್ದರೆ ಗೌರವವೆಂಬುದು ಹುಡುಕಿಕೊಂಡು ಬರಲಿದೆ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ ಅವರು ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತರಾದ ಎಮ್.ಎಚ್. ಬೀಳಗಿ ಅವರಿಗೆ ಇಲಾಖೆ ವತಿಯಿಂದ ಶನಿವಾರ ಏರ್ಪಡಿಸಲಾದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಸರ್ಕಾರಿ ನೌಕರರ ಬಧುಕು ಒಂದೆಡೆ ಇರುವದಿಲ್ಲಾ ಊರಿಂದೂರಿಗೆ ಅಲೆಯುವಂತಹದ್ದಾಗಿದೆ ಜನರೊಂದಿಗೆ ಬೆರೆತು ಕೆಲಸ ಮಾಡಬೇಕಾಗುತ್ತದೆ ಆ ಸಮಯದಲ್ಲಿ ಸಾಕಷ್ಟು ತೊಂದರೆಗಳು ಬಂದರೂ ಕೂಡಾ ಅವುಗಳನ್ನು ನಿಭಾಯಿಸಿಕೊಂಡು ಕೆಲಸ ಮಾಡಬೇಕಾಗುತ್ತದೆ ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಮತ್ತು ಪದೋನ್ನತಿ ಒಂದು ಸಹಜ ಪ್ರಕ್ರಿಯೆಯಾಗಿದೆ ಆದರೆ ನಾವು ನಮ್ಮ ಸೇವಾ ಅವಧಿಯಲ್ಲಿ ಎಷ್ಟು ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಈ ಇಲಾಖೆಯಲ್ಲಿ ೩೮ ವರ್ಷಗಳ ಸುದಿರ್ಘ ಸೇವೆಯನ್ನು ಸಲ್ಲಿಸಿದ ಎಂ.ಎಚ್. ಬೀಳಗಿಯವರು ಇಲಾಖೆ ಅಭಿಮಾನ ಪಡುವ ರೀತಿಯಲ್ಲಿ ಸೇವೆಯನ್ನು ಸಲ್ಲಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಅವರ ವಿಶ್ರಾಂತ ಬದುಕು ಸುಖಕರವಾಗಿರಲೆಂದು ಹಾರೈಸುತ್ತೇನೆ ಎಂದರು.
ಇನ್ನೋರ್ವ ಅತಿಥಿ ಇಲಾಖೆಯ ನಿವೃತ್ತ ಕೃಷಿ ಅಧಿಕಾರಿ ಹೆಚ್.ವೈ.ಮಸರಕಲ್ಲ ಮಾತನಾಡಿ ಎಂ.ಎಚ್.ಬೀಳಗಿ ಅವರು ಕಡು ಬಡತನದ ಕುಟುಂಬದ ಹಿನ್ನೆಲೆಯಿಂದ ಬಂದವರು ಬಹಳ ಕಷ್ಟಪಟ್ಟು ಓದಿ ಸರ್ಕಾರಿ ನೌಕರಿಯನ್ನು ಪಡೆದು ಈ ಇಲಾಖೆಯಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ ಅವರ ಆದರ್ಶ ಬದುಕು ಹಾಗೂ ಸೇವಾ ನಿಷ್ಠೆ ಇಂದಿನ ಯುವಕರಿಗೆ ಮಾದರಿಯಾಗಿದೆ ಅವರ ವಿಶ್ರಾಂತ ಬದುಕು ನೆಮ್ಮದಿದಾಯಕ ವಾಗಿರಲೆಂದು ಹಾರೈಸುತ್ತೇನೆ ಎಂದರು.
ಭಾಗವಾನ ಬ್ಯಾಂಕ್ ಅಧ್ಯಕ್ಷ ಎಸ್.ಎ.ನಾಲಬಂದ ಅವರು ಮಾತನಾಡಿ ವೃತ್ತಿ ಬಧಕಿನಲ್ಲಿ ಸಾಕಷ್ಟು ತೊಂದೆಗಳು ಬರುತ್ತವೆ ಅವೇಲ್ಲವುಗಳನ್ನು ಎದುರಿಸಿ ಸೇವೆಯಲ್ಲಿ ಮುಂದುವರೆಯುತ್ತಾ ಸಾಗಬೇಕಾಗುತ್ತದೆ ಸರ್ಕಾರಿ ನೌಕರರಿಗೆ ನಿವೃತ್ತಿ ಎಂಬುದು ಕಟ್ಟಿಟ್ಟ ಬುತ್ತಿಯಾಗಿದೆ ಸೇವೆಯಲ್ಲಿರುವಾಗಿ ಮಾಡಿದ ಕೆಲಸಗಳು ಜನರು ಮಾತನಾಡುವಂತಿರಬೇಕು ಅಂದಾಗ ಸರ್ಕಾರಿ ನೌಕರನ ಬಧುಕು ಸುಂದರದ ಜೊತೆಗೆ ನೆಮ್ಮದಿಯ ಜೀವನವಾಗಲಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಎಂ.ಎಚ್.ಬಿಳಗಿ ಅವರ ಸೇವಾ ಕಾರ್ಯ ಕುರಿತು ಕೊಂಡಾಡಿದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಕೃಷಿ ಅಧಿಕಾರಿ ಬೀಳಗಿ ಮಾತನಾಡಿ ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿರುವೆ ನನ್ನ ಸೇವೆಯ ಉದ್ದಕ್ಕೂ ಸಂಘದ ಅಧ್ಯಕ್ಷರಾದ ಅರವಿಂದ ಹೂಗಾರ ನನ್ನ ಸಹೋದ್ಯೋಗಿಗಳು ಹಾಗೂ ಒಳ್ಳೆಯ ಮಿತ್ರರ ಸಹಕಾರ ಮಾರ್ಗದರ್ಶನ ದಿಂದಾಗಿ ನಾನು ನನ್ನ ಸೇವೆಯನ್ನು ಪ್ರಮಾಣಿಕತೆಯಿಂದ ಮಾಡಲು ಸಾಧ್ಯವಾಗಿದೆ ಅವರಿಗೆ ನಾನು ಚಿರಋಣಿಯಾಗಿರುವೆ ಎಂದರು.
ನಿವೃತ್ತ ಶಿಕ್ಷಕಿ ಲಾಲಬಿ ಎಂ.ಬೀಳಗಿ, ರಾಜು ರುದ್ರವಾಡಿ,ಸಂಗಮೇಶ ಪಾಟೀಲ,ಲತೀಫ್ ಬೀಳಗಿ, ಎಂ. ಎಸ್.ಖಾಜಿ,ಎಂ.ಎಸ್.ಕೋರವಾರ, ಎನ್.ಎ.ಖಾಜಿ,ಆಸೀಫ ಬೀಳಗಿ ಮಾತನಾಡಿದರು.
ಇದೇ ಸಮಯದಲ್ಲಿ ನಿವೃತ್ತ ಕೃಷಿ ಅಧಿಕಾರಿ ಬೀಳಗಿ ಅವರಿಗೆ ಇಲಾಖೆ ವತಿಯಿಂದ ಹಾಗೂ ವಿವಿಧ ಸಂಘ-ಸAಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಗವಾನ ಜಮಾತ್ ಅಧ್ಯಕ್ಷ ಸದ್ದಾಂ ಬೀಳಗಿ, ಕೊಹಿನೂರ ಸಂಘದ ಅಧ್ಯಕ್ಷ ಕಾಸೀಮಸಾಬ ಜಕಾತಿ,ಅಬ್ಬಾಸಲಿ ನಿಡಗುಂದಿ, ಮೈನು ಕೊರ್ತಿ, ಆದಮಸಾಬ ಢಾಲಾಯತ್, ಮೋದಿನ ಹೊನ್ನುಟಗಿ, ರಾಜಅಹ್ಮದ್ ಬೆಣ್ಣೂರ,ಮಶಾಕ್ ಮುರಾಳ ಹಾಗೂ ಇಲಾಖೆಯ ಸಿಬ್ಬಂದಿಗಳು ಇದ್ದರು.
ಕೃಷಿ ಅಧಿಕಾರಿ ಮಹೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಸಂಗಮೇಶ ಪಾಟೀಲ ವಂದಿಸಿದರು.