ಪ್ರಾಂಶುಪಾಲ ಜಿ ನರಸಿಂಹಯ್ಯ ಅವರಿಗೆ ನಿವೃತ್ತಿ ಸನ್ಮಾನ

ಚಿಕ್ಕಬಳ್ಳಾಪುರ : ಡಿ.೧-ಜಿಲ್ಲೆಯ ಪ್ರತಿಷ್ಠಿತ ಸರ್ಕಾರಿ ಅನುದಾನಿತ ಕೆ.ವಿ.ಟಿ. ಪಾಲಿಟೆಕ್ನಿಕ್ ವಿದ್ಯಾಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿರುವ ಪ್ರಾಂಶುಪಾಲ ಜಿ. ನರಸಿಂಹಯ್ಯ ರವರ ಸೇವೆ ಹಾಗೂ ಅವರ ಕರ್ತವ್ಯ ಪಾಲನೆ ಅತ್ಯುತ್ತಮ ರೀತಿಯಲ್ಲಿದ್ದು ಇವರ ಕರ್ತವ್ಯ ಪಾಲನೆಯಿಂದ ವಿದ್ಯಾ ಸಂಸ್ಥೆ ಮುನ್ನಡೆ ಹಾಗೂ ಅಭಿವೃದ್ಧಿ ಹೊಂದಿದೆ ಎಂದು ಕೆ. ವಿ. ಮತ್ತು ಪಂಚಗಿರಿ ವಿದ್ಯಾ ದತ್ತಿಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ತಿಳಿಸಿದರು.


ಅವರು ನಗರದ ಹೊರವಲಯದ ಶ್ರೀ ಸಿವಿವಿ ಶಿಕ್ಷಣ ಕೇಂದ್ರದಲ್ಲಿನ ಕೆವಿಟಿ ಪಾಲಿಟೆಕ್ನಿಕ್ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಜಿ ನರಸಿಂಹಯ್ಯ ರವರಿಗೆ ವಿದ್ಯಾ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಜಿ ನರಸಿಂಹಯ್ಯ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದರು.


ಕೆ. ವಿ.ಟಿ. ಪಾಲಿಟೆಕ್ನಿಕ್ ವಿದ್ಯಾ ಸಮಸ್ತೆಯಲ್ಲಿ ಉಪನ್ಯಾಸಕರಾಗಿ ಕರ್ತವ್ಯ ಆರಂಭಿಸಿ ನಂತರದ ದಿನಗಳಲ್ಲಿ ಪ್ರಾಂಶುಪಾಲರಾಗಿ ಭರ್ತಿ ಹೊಂದಿ ಅವರು ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ವಿದ್ಯಾ ಸಂಸ್ಥೆಯನ್ನು ಬಹಳ ಅಭಿವೃದ್ಧಿ ಪಡಿಸಿದರು ಅಲ್ಲದೆ ನೂತನ ಕಟ್ಟಡಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ಗುಣಗಾನ ಮಾಡಿದರು.


ಇದೇ ಸಂದರ್ಭದಲ್ಲಿ ಜಿ ನರಸಿಂಹಯ್ಯ ಅವರ ಶ್ರಯೋಭಿಲಾಷಿಗಳು ಹಾಗೂ ಪಾಲಿಟೆಕ್ನಿಕ್ ವಿದ್ಯಾ ಸಂಸ್ಥೆಯ ಸಿಬ್ಬಂದಿ ವರ್ಗ ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೊಡುಗೆ ಮಾಡಿದರು.


ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತಿ ಹೊಂದಿರುವ ಪ್ರಾಂಶುಪಾಲ ಜಿ ನರಸಿಂಹಯ್ಯ ಅವರು ತಾವು ಇಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ಸಂಸ್ಥೆಯ ಅಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗ ಮತ್ತು ಆಡಳಿತ ಮಂಡಳಿ ಸದಸ್ಯರು ನೀಡಿದ ಸಹಕಾರವೇ ಕಾರಣವಾಯಿತು ಎಂದರು.