
ಕಲಬುರಗಿ ನ.30: ವೃತ್ತಿಯಿಂದ ನಿವೃತ್ತಿಯೇ ಹೊರತು ಪ್ರವೃತ್ತಿಯಿಂದ ಅಲ್ಲ, ನಿಮ್ಮ ಹವ್ಯಾಸಗಳನ್ನು ಎಂದಿಗೂ ಬಿಡಬೇಡಿ ಅವುಗಳನ್ನು ಮುಂದುವರಿಸಿಕೊಂಡು ಹೋಗಿ ಎಂದು ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಹೇಳಿದರು.
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪೆನಿ ನಿಗಮ ಹಾಗೂ ಎಲ್ಲಾ ಅಧಿಕಾರಿ ನೌಕರರ ವತಿಯಿಂದ ಜೆಸ್ಕಾಂನ ನಿರ್ದೇಶಕರಾದ (ತಾಂತ್ರಿಕ) ಎನ್. ಆರ್. ಎಮ್ ನಾಗರಾಜನ್, ನಿಗಮ ಕಾರ್ಯಾಲಯದ ವ್ಯವಸ್ಥಾಪಕ ನಿರ್ದೇಶಕರವರ ಹಿರಿಯ ಆಪ್ತ ಕಾರ್ಯದರ್ಶಿ ಮಹಮ್ಮದ್ ಮಿನ್ಹಾಜುದ್ದೀನ್ ಹಾಗೂ ನಿಗಮ ಕಾರ್ಯಾಲಯದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರಾಜಶೇಖರ್ ಗುಂಡದ ಅವರ ವಯೋ ನಿವೃತ್ತ ಬೀಳ್ಕೊಡುಗೆ ಸಮಾರಂಭವನ್ನು ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಮ್ ಹಾಲ್‍ನಲ್ಲಿ ಜರುಗಿತು.
ಈ ವೇಳೆ ಮಾತನಾಡಿದ ಅವರು, ವಿದ್ಯುತ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿ, ಒಂದೇ ಸ್ಥಳದಲ್ಲಿ ಕುಳಿತು ಓದಿದರೆ ಅಥವಾ ಕೆಲಸ ಮಾಡಿದರೆ ಯಾವುದೇ ಮಾಹಿತಿ, ಜ್ಞಾನ ಸಿಗುವುದಿಲ್ಲ ಫಿಲ್ಡ್ ವರ್ಕ್ ಮಾಡಿದರೆ ಹೆಚ್ಚಿನ ಜ್ಞಾನ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜೆಸ್ಕಾಂ ತಾಂತ್ರಿಕ ನಿರ್ದೇಶಕ ಕೆ. ಬಲರಾಮ, ಜೆಸ್ಕಾಂನ ಮುಖ್ಯ ಅಭಿಯಂತರ ಸುವರ್ಣ ಧಡದೆ, ಕೆಪಿಟಿಸಿಎಲ್ ಪ್ರಸರಣ ವಲಯದ ಮುಖ್ಯ ಅಭಿಯಂತರ ರಾಮಸ್ವಾಮಿ, ಆರ್ಥಿಕ ಸಲಹೆಗಾರರು, ಆಂತರಿಕ ಪರಿಶೋಧನೆ ಮಹಾಲಕ್ಷ್ಮೀ, ಸಂತೋಷ ವಡ್ಕಿ, ಬಾಬು ಕೊರೆ, ಆರ್.ಡಿ. ಚಂದ್ರಶೇಖರ, ಮುಮ್ತಾಜ್ ಸೇರಿದಂತೆ ಜೆಸ್ಕಾಂನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಅವರ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

























