ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ 1.97 ಲಕ್ಷ ರೂ.ವಂಚನೆ

ಕಲಬುರಗಿ,ಡಿ.31-ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ 1.97 ಲಕ್ಷ ರೂಪಾಯಿ ಆನ್‍ಲೈನ್ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಸೇಡಂ ರಸ್ತೆಯ ಸ್ವಸ್ತಿಕ ನಗರದ ನಿವಾಸಿಯಾದ ನಿವೃತ್ತ ಉಪ ಸಂರಕ್ಷಣಾಧಿಕಾರಿ ಮಲ್ಲಪ್ಪ ಭಾವಿಕಟ್ಟಿ (62) ಅವರೇ ವಂಚನೆಗೆ ಒಳಗಾಗಿದ್ದಾರೆ.
ಮಲ್ಲಪ್ಪ ಭಾವಿಕಟ್ಟಿ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಪ್ ಮೂಲಕ ಕರೆ ಮಾಡಿ ಲಿಂಕ್ ಕಳುಹಿಸಿ ಅದರ ಮೇಲೆ ಕ್ಲಿಕ್ ಮಾಡಿಸಿಕೊಂಡು ಎರಡು ಬ್ಯಾಂಕ್ ಖಾತೆಗಳಿಂದ 1.97 ಲಕ್ಷ ರೂಪಾಯಿಗಳನ್ನು ಫೋನ್ ಪೇ ಮೂಲಕ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಮೋಸ, ವಂಚನೆ ಮಾಡಿದ್ದಾನೆ.
ಮಲ್ಲಪ್ಪ ಭಾವಿಕಟ್ಟಿ ಅವರು ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.