Home ಜಿಲ್ಲೆ ಕಲಬುರಗಿ ದಂಡಗುAಡ ಬಸವಣ್ಣ ದೇವಸ್ಥಾನದ ಜೀರ್ಣೋದ್ಧಾರ ; ಸಂಕನೂರ

ದಂಡಗುAಡ ಬಸವಣ್ಣ ದೇವಸ್ಥಾನದ ಜೀರ್ಣೋದ್ಧಾರ ; ಸಂಕನೂರ

ಚಿತ್ತಾಪುರ;ಫೆ.೧೬: ತಾಲೂಕಿನ ದಂಡಗುAಡ ಗ್ರಾಮದ ಹಳೆಯ ಬಸವಣ್ಣ ದೇವಸ್ಥಾನವನ್ನು ತೆರವುಗೊಳಿಸಿ ಆ ಸ್ಥಳದಲ್ಲಿ ಕಳೆದ ಎರಡು ವರ್ಷಗಳಿಂದ ಬಸವನ ಭಾಗೇವಾಡಿಯ ಬಸವೇಶ್ವರ ದೇವಸ್ಥಾನದ ಮಾದರಿಯಲ್ಲಿ ನೂತನ ಕಟ್ಟಡವನ್ನು ಭಕ್ತರ ಇಷ್ಟಾರ್ಥದಂತೆ ಜೀರ್ಣೋದ್ದಾರ ಮಾಡಲಾಗುತ್ತಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ ಹೇಳಿದರು.
ತಾಲೂಕಿನ ದಂಡಗುAಡ ಗ್ರಾಮದ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ ಅವರು ತಯಾರಿಸಿದ ೧೦ ಕೋಟಿ ವೆಚ್ಚದ ನೀಲಿ ನಕ್ಷೆಯಡಿಯಲ್ಲಿ ಭಕ್ತರು ನೀಡಿರುವ ಸ್ವಯಂ ಪ್ರೇರಿತ ದೇಣಿಗೆಯಿಂದ ನೂತನ ದೇವಸ್ಥಾನ ನಿರ್ಮಾಣ ಕಾಮಗಾರಿ ನಡೆದಿದ್ದು, ಇದುವರೆಗೂ ಸರ್ಕಾರದಿಂದ ಯಾವುದೇ ರೀತಿಯ ಅನುದಾನವನ್ನು ಪಡೆಯದೇ ಭಕ್ತರು ನೀಡಿದ ಹಣದಲ್ಲಿ ಸುಮಾರು ೪ ಕೋಟಿ ವೆಚ್ಚದಲ್ಲಿ ಶೇ.೩೦ ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಕಾಮಗಾರಿಗೆ ಹಣದ ಹೊಂದಾಣಿಕೆಗೆ ಟ್ರಸ್ಟ್ ಹಾಗೂ ಗ್ರಾಮಸ್ಥರು ಕೂಡಿಕೊಂಡು ಗ್ರಾಮಗಳಿಗೆ ತೆರಳಿ ಭಕ್ತರಿಂದ ದೇಣಿಗೆ ಸಂಗ್ರಹಿಸಲು ಭಕ್ತರಿಂದ ಒತ್ತಡ ಬರುತ್ತಿದ್ದು, ಅದರಂತೆ ಟ್ರಸ್ಟ್ ಕಾರ್ಯೋನ್ಮುಖವಾಗಿದೆ. ಅವರ ಸಹಕಾರದಿಂದ ಬರುವ ಶ್ರಾವಣಮಾಸದಲ್ಲಿ ನಡೆಯುವ ಜಾತ್ರೆಯವರೆಗೂ ದೇವಸ್ಥಾನ ಕಾಮಗಾರಿ ಪೂರ್ಣಗೊಳಿಸಿ ಭಕ್ತರಿಗೆ ಅನುಕೂಲ ಮಾಡಿಕೊಡುವ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ದೇವಸ್ಥಾನಕ್ಕಾಗಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯಿAದ ೫೦ ಲಕ್ಷ ರೂ. ನೀಡುವ ಭರವಸೆ ನೀಡಿದ್ದಾರೆ. ಈಗಾಗಲೇ ೯ ಜನ ಭಕ್ತರು ಯಾತ್ರಾರ್ಥಿಗಳಿಗೆ ೯ ಕೊಣೆಗಳನ್ನು ನಿರ್ಮಿಸಿದ್ದಾರೆ ಇನ್ನು ಹಲವಾರು ಭಕ್ತರು ಕೊಣಿ ನಿರ್ಮಿಸಲು ಮುಂದೆ ಬಂದಿದ್ದಾರೆ ಎಂದರು.
ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಅವಂಟಿ ಮಾತನಾಡಿ, ಸುಮಾರು ವರ್ಷಗಳಿಂದ ಜೀರ್ಣೋದ್ಧಾರ ಕಾರ್ಯವನ್ನು ನಮ್ಮ ಟ್ರಸ್ಟ್ ಮಾಡುತ್ತಿದೆ, ಇದಕ್ಕೆ ಕೆಲವರು ತುಂಬಾ ತೊಂದರೆ ನೀಡಿದ್ದರು, ಇವರ ಕುತಂತ್ರಕ್ಕೆ ಭಕ್ತರು ಅವಕಾಶ ನೀಡದೇ ಇರುವುದರಿಂದ ದೇವಸ್ಥಾನದ ಚಿತ್ರಣವನ್ನು ಬದಲಾಯಿಸಲು ಸಾಧ್ಯವಾಗುತ್ತಿದೆ ಅದಕ್ಕಾಗಿ ಭಕ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಟ್ರಸ್ಟ್ ಹಿರಿಯ ಸದಸ್ಯ ಭೀಮಣ್ಣ ಸಾಲಿ ಮಾತನಾಡಿ, ದೇವಸ್ಥಾನದಲ್ಲಿ ಈ ಬಾರಿ ೮೦ ಕೆ.ಜಿ ಬೆಳ್ಳಿಯ ಪಲ್ಲಕ್ಕಿ, ದೇವಸ್ಥಾನದಲ್ಲಿರುವ ೫೦ ರಿಂದ ೬೦ ತೊಲೆ ಬಂಗಾರದಲ್ಲಿ ದೇವರ ಮೂರ್ತಿ ಮತ್ತು ಭಕ್ತರು ನೀಡಿದ ಬೆಳ್ಳಿ ದೇಣಿಗೆಯಿಂದ ದೇವಸ್ಥಾನದ ಕಮಾನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ದೇವಸ್ಥಾನಕ್ಕೆ ಹಿಂದಿನ ಕಾಲದಿಂದಲೂ ಭಕ್ತರು ತಮ್ಮ ಹರಕೆಯನ್ನು ತೀರಿಸಲು ಹೋರಿಗಳನ್ನು ದೇಣಿಗೆ ನೀಡುತ್ತಾ ಬರುತ್ತಾರೆ. ಆದರೆ ಅವುಗಳ ನಿರ್ವಹಣೆ ತುಂಬಾ ಕಷ್ಟವಾಗುತ್ತಿದ್ದು ಮುಂದಿನ ದಿನಗಳಲ್ಲಿ ಭಕ್ತರು ಹೋರಿಗಳನ್ನು ದೇಣಿಗೆ ನೀಡದೇ ಹಣವನ್ನು ದೇಣಿಗೆಯಾಗಿ ನೀಡಿದಲ್ಲಿ ಈಗಿರುವ ಹೋರಿಗಳನ್ನು ನಿರ್ವಹಣೆಗೆ ತುಂಬಾ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಟ್ರಸ್ಟ್ ನ ಮಹಾಂತಗೌಡ ಪಾಟೀಲ್, ರಾಜಶೇಖರ ಗೌಡ ಇದ್ದರು.