ಹಿರಿಯ ನಾಗರಿಕರನ್ನು ಗೌರವಿಸಿ- ನ್ಯಾ.ಹರೀಶ್.ಜಿ

ಮುಳಬಾಗಿಲು,ಅ,೮-ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ನಿವೃತ್ತ ಸರ್ಕಾರಿ ನೌಕರರ ಸಂಘದಿಂದ ನಗರದ ನಿವೃತ್ತ ಸರ್ಕಾರಿ ನೌಕರರ ಭವನದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.


ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾದೀಶ ಹರೀಶ್.ಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿರಿಯ ನಾಗರೀಕರೊಂದಿಗೆ ಜನತೆ ಗೌರವದಿಂದ ವರ್ತಿಸಬೇಕು, ಯಾವುದೇ ಕಾರಣಕ್ಕೂ ತಾತ್ಸಾರ ಮನೋಭಾವದಿಂದ ಕಾಣಬಾರದೆಂದು ಕರೆ ನೀಡಿದರು.


ಹಿರಿಯ ನಾಗರೀಕರು ಸರ್ಕಾರಗಳಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳುವ ಜತೆಗೆ ಯುವ ಪೀಳಿಗೆಗೆ ತಮ್ಮ ಅನುಭವ ಹಂಚಿಕೊಂಡು ಮಾರ್ಗದರ್ಶಕರಾಗಬೇಕೆಂದು ಕಿವಿಮಾತು ಹೇಳಿದರು.


ಹಿರಿಯ ನಾಗರೀಕರ ದಿನಾಚರಣೆ ನಿವೃತ್ತ ಸರ್ಕಾರಿ ನೌಕರರು ಅರ್ಥಪೂರ್ಣವಾಗಿ ನಡೆಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.


ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ನಂಜುಂಡಪ್ಪ, ವಕೀಲ ಸಂಘದ ಅಧ್ಯಕ್ಷ ಎನ್. ಸತೀಶ್ ಕುಮಾರ್, ಉಪಾಧ್ಯಕ್ಷ ಸಿ.ವಿ. ಶ್ರೀನಿವಾಸ್, ಸರ್ಕಾರಿ ಅಭಿಯೋಜಕ ಆರ್. ನಾಗರಾಜ್, ಹಿರಿಯ ವಕೀಲ ಎನ್. ಶೇಖರ್, ನಿವೃತ್ತ ಮುಖ್ಯ ಶಿಕ್ಷಕ ಎಂ.ವಿ. ಜನಾರ್ಧನ್, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಮುನಿರತ್ನಯ್ಯ, ಖಜಾಂಚಿ ಎಸ್.ಜಯರಾಮ್ ಇದ್ದರು.