
ಬೀದರ: ಫೆ.೨೮:ಸಂಶಯದಿAದ ಸತ್ಯದ ಪಥದೆಡೆಗೆ ಕೊಂಡೊಯ್ಯುವುದೇ ಸಂಶೋಧನೆ. ಸಂಶೋಧನೆ ಎಂಬುದೊAದು ತಪಸ್ಸು. ಆಳವಾದ ಅಧ್ಯಯನ. ಅದೊಂದು ಜ್ಞಾನದ ದಿಗಂತ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಸಿ.ಟಿ.ಗುರುಪ್ರಸಾದ ತಿಳಿಸಿದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ, ಕ.ಕ. ಸಂಶೋಧನಾ ಕೇಂದ್ರ ಬೀದರ, ಕನ್ನಡ ವಿಭಾಗ, ಕರ್ನಾಟಕ ಕಾಲೇಜು, ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಶರಣಬಸವ ವಿಶ್ವವಿದ್ಯಾಲಯ ಕಲಬುರಗಿ ಇವರ ಸಹಯೋಗದಲ್ಲಿ ಕರ್ನಾಟಕ ಕಾಲೇಜಿನ ಸಭಾಂಗಣದಲ್ಲಿ ಫೆ. ೨೬ ರಂದು ಬೆ. ೧೦ ಗಂಟೆಗೆ ಜರುಗಿದ ಸಂಶೋಧನಾ ಬರವಣಿಗೆಯ ರಚನಾ ವಿನ್ಯಾಸ ಕುರಿತು ಜರುಗಿದ ಒಂದು ದಿನದ ರಾಜ್ಯಮಟ್ಟದ ಸಂಶೋಧನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಂಶೋಧನೆ ಎಂದರೆ ಸತ್ಯದ ಹುಡುಕಾಟ. ಅಸತ್ಯದಿಂದ ಸತ್ಯದ ಕಡೆಗೆ, ಅಜ್ಞಾತದಿಂದ ಜ್ಞಾತದೆಡೆಗೆ ಸಂಶೋಧನೆ ಕೊಂಡೊಯ್ಯುತ್ತದೆ. ಸಂಶೋಧನೆ ಪ್ರಾಮಾಣಿಕವಾಗಿರಬೇಕು. ನಿಖರತೆ ಮತ್ತು ನೈಜ ಮೌಲ್ಯಗಳನ್ನು ಒಳಗೊಂಡಿರಬೇಕು. ಶಿಸ್ತು, ಉತ್ತಮ ಶೀರ್ಷಿಕೆ, ವಿಷಯದ ಆಳ ಅಧ್ಯಯನ, ನಿರೂಪಣೆ, ವಿಶ್ಲೇಷಣೆ, ಅನ್ವೇಷಣೆ ನಿಖರವಾಗಿರಬೇಕು. ಕೇವಲ ಪದವಿಗಾಗಿ ಸಂಶೋಧನೆ ಮಾಡದೆ ಸಮಾಜ ಸುಧಾರಣೆ ಮಾಡುವ ದೃಷ್ಟಿಕೋನ ಅದರಲ್ಲಿ ಅಡಕಗೊಂಡಿರಬೇಕು. ಮುಂದಿನ ಪೀಳಿಗೆಗೆ ಉತ್ತಮ ವಿಷಯ ತಲುಪಿಸುವ ಕಾರ್ಯ ಸಂಶೋಧನೆ ಮೂಲಕ ಸಂಶೋಧನಾಕಾರರು ಮಾಡಬೇಕಾಗಿದೆ. ಸತ್ಯದ ಹುಡುಕಾಟದ ತವಕ ಮತ್ತು ಕುತೂಹಲ ಸಂಶೋಧನಾಕಾರರಿಗೆ ಇರಬೇಕೆಂದು ಗುರುಪ್ರಸಾದ ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಾಚಾರ್ಯರಾದ ಸೋಮನಾಥ ಬಿರಾದಾರ ಅವರು ಜ್ಞಾನೋತ್ಪತ್ತಿ, ಜ್ಞಾನಸಂಚಾರ ಮತ್ತು ಜ್ಞಾನವೃದ್ಧಿಗಾಗಿ ಕ.ರಾ.ಶಿ ಸಂಸ್ಥೆ ೧೯೫೩ರಲ್ಲಿ ನೊಂದಣಿಯಾಗಿ ಶೂನ್ಯದಿಂದ ಬ್ರಹ್ಮಾಂಡದೆಡೆಗೆ ಎನ್ನುವಂತೆ ಎಲ್‌ಕೆಜಿ ಯಿಂದ ಸ್ನಾತಕೋತ್ತರ ಪದವಿವರೆಗೆ ಶಿಕ್ಷಣ ನೀಡುತ್ತಿದೆ. ಇದುವರೆಗೆ ೪೭ ಎಂ.ಫಿಲ್, ೧೫ ಪಿ.ಎಚ್‌ಡಿ ಪದವೀಧರರು ಶಿಕ್ಷಣ ಪಡೆದುಕೊಂಡಿದ್ದಾರೆ. ೧೮ ಸಂಶೋಧನಾ ವಿದ್ಯಾರ್ಥಿಗಳು ೬ ಜನ ಮಾರ್ಗದರ್ಶಕರ ಅಡಿಯಲ್ಲಿ ಸಂಶೋಧನೆ ಮಾಡುತ್ತಿದ್ದಾರೆ ಎಂದರು.
ಕ.ರಾ.ಶಿ.ಸAಸ್ಥೆಯ ನಿರ್ದೇಶಕ ಡಾ. ಧೂಳಪ್ಪ ಪಾಟೀಲ ಮಾತನಾಡಿ ಸಂಶೋಧಕರು ತಮ್ಮ ವಿನೂತನ ಸಂಶೋಧನೆ ಮೂಲಕ ಜೀವನ ಉಜ್ವಲಗೊಳಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಯಾರೂ ನಮ್ಮನ್ನು ಕೈಹಿಡಿದು ಮೇಲೆತ್ತುವುದಿಲ್ಲ. ನಮಗೆ ನಾವೇ ಮೈಕೊಡವಿ ಉತ್ಸಾಹದಿಂದ ಎದ್ದು ನಿಂತಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ.ಸುಮಂಗಲಾ ಎನ್.ರೆಡ್ಡಿ ಮಾತನಾಡಿದರು. ಕರಾಶಿ ಸಂಸ್ಥೆಯ ನಿರ್ದೇಶಕ ಬಿ.ಶಿವಶಂಕರ ಶೆಟಕಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಸಂಸ್ಥೆಯ ನಿರ್ದೇಶಕರಾದ ಬುಯ್ಯಾ ವೀರಭದ್ರಪ್ಪ, ರವಿ ಹಾಲಹಳ್ಳಿ, ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಶಶಿಧರ ಪಾಟೀಲ, ಐ.ಕ್ಯೂ.ಎ.ಸಿ. ಸಂಯೋಜಕಿ ಡಾ. ಸೋಮೇಶ್ವರಿ ಮುದ್ದಾ ಉಪಸ್ಥಿತರಿದ್ದರು.
ರೇಣುಕಾ ಮಳ್ಳಿ ಪ್ರಾರ್ಥಿಸಿದರು. ಶಾಂತಕುಮಾರ ಪಾಟೀಲ ಅತಿಥಿ ಪರಿಚಯ ಮಾಡಿಕೊಟ್ಟರು. ಡಾ. ಮಹಾನಂದ ಮಡಕಿ ಸ್ವಾಗತಿಸಿದರು. ನಾಗೇಶ ಸ್ವಾಮಿ ನಿರೂಪಿಸಿದರು. ಜಗನ್ನಾಥ ಕಮಲಾಪುರೆ ವಂದಿಸಿದರು. ಕಾರ್ಯಾಗಾರದಲ್ಲಿ ಕರ್ನಾಟಕ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.



























