ಪರವಾನಿಗೆ ಪಡೆಯದೇ ಮರಳು ಸಾಗಾಣಿಕೆ ತಡೆಯುವಂತೆ ತಹಸಿಲ್ದಾರ್ ಗೆ ಮನವಿ

ಸೇಡಂ, ಜ ,10:ತಾಲೂಕಿನ ಬಿಜನಳ್ಳಿ ಹಾಗೂ ತೋಟ್ನಳ್ಳಿ ಗಾಮದಲ್ಲಿ ಕಾಗೀಣ ನದಿ ಹಾದುಹೋಗುತಿರುವ ನದಿಯ ಪಕ್ಕದ ಗ್ರಾಮದ ಬಿಜನಳ್ಳಿ ಹಾಗೂ ತೋಟ್ನಳ್ಳಿ ಗ್ರಾಮಕ್ಕೆ ಸಂಪರ್ಕಕ್ಕೆ ಕಲ್ಪಸುವುದಕ್ಕೆ ಮೇಲಸೇತುವೆ ಕಾಮಾಗಾರಿ ನಡೆಯುತ್ತಿದ್ದು, ಈ ಕಾಮಾಗಾರಿಯು ದೇವಿಂದ್ರಪ್ಪ ಎಮ್ ಬಿರಾದಾರ ಗುತ್ತಿಗೆದಾರರು ಹೆಸರಿನಲ್ಲಿ ಕಾಮಾಗಾರಿ ಪ್ರಗತಿಯಲ್ಲಿದ್ದು, ತೋಟ್ನಳ್ಳಿ ಗ್ರಾಮಕ್ಕೆ ಸಂಪರ್ಕಕ್ಕೆ ಕಲ್ಪಸುವುದಕ್ಕೆ ಮೇಲಸೇತುವೆ ಕಾಮಾಗಾರಿಗಾಗಿ ಅಕ್ರಮವಾಗಿ ಮರಳನ್ನು ಯಾವುದೇ ಪರವಾನಿಗೆ ಪಡೆಯದೇ ಮರಳನ್ನು ಹಗಲು ಮತ್ತು ರಾತ್ರಿ ರಾಜರೋಷವಾಗಿ ಯಾರ ಭಯವಿಲ್ಲದೆ ಮರಳನ್ನು ಸಾಗಿಸುತ್ತಿದ್ದು ತಕ್ಷಣ ತಡೆಹಿಡಿಯುವಂತೆ ತಹಸಿಲ್ದಾರ್ ಅವರಿಗೆ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ರವೀಂದ್ರ ಎಲ್ ನಾಯಕ್ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.ಈ ವೇಳೆಯಲ್ಲಿ ರಾಮು ಮೆಕ್ಯಾನಿಕ್,ಶರಣು ಬುಡಸಣ,ರವಿಕುಮಾರ್ ಊಡಗಿ ನರೇಂದ್ರ ರೆಡ್ಡಿ,ನಾಗು ದೋರೆ,ಇದ್ದರು.