
ಬೀದರ :ಫೆ.೧೯: ೨೦೧೯ ರಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾರವರ ಪ್ರಯತ್ನದಿಂದ ಬೀದರ- ನಾಂದೇಡ ನೂತನ ರೈಲ್ವೆ ಮಾರ್ಗ ಮಂಜೂರಾಗಿದ್ದರು ಇಲ್ಲಿಯವರೆಗೆ ಕೆಲಸ ಪ್ರಾರಂಭವಾಗದಿದ್ದುದರಿAದ ನಮ್ಮ ರಾಜ್ಯದವರೆ ಆದ ಕೇಂದ್ರ ರೇಲ್ವೆ ರಾಜ್ಯ ಸಚಿವ ವಿ.ಸೋಮಣ್ಣನವರಲ್ಲಿ ವಿನಂತಿಸದಕ್ಕೆ ಅವರು ಸದರಿ ಯೋಜನೆ ೨೩೫೪ ಕೋಟಿ.ರೂ ಬೇಕಾಗಿದ್ದು ಅದಕ್ಕೆ ಬೇಕಾದ ಭೂಮಿ ಹಾಗೂ ತಮ್ಮ ಪಾಲಿನ ಅರ್ಧ ಹಣವನ್ನು ಸಂಬAಧಿಸಿದAತ ರಾಜ್ಯ ಸರ್ಕಾರರಗಳು ನೀಡದಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ ಹಾಗೂ ಮಹಾರಾಷ್ಟç ಸರ್ಕಾರ ಈಗಾಗಲೇ ತನ್ನ ಪಾಲನೆಯ ಒಪ್ಪಿಗೆಗೆ ನೀಡಿದ್ದು ಕರ್ನಾಟಕ ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ ಎಂದು ಉತ್ತರಿಸಿ ರೈಲ್ವೆ ರಾಜ್ಯ ಸಚಿವರು ವಿ. ಸೋಮಣ್ಣನವರು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಅವರಿಗೆ ಪತ್ರ ಬರೆದು ಸೂಚಿಸಿದ್ದಾರೆ.
ರೈಲ್ವೆ ರಾಜ್ಯ ಮಂತ್ರಿ ವಿ.ಸೋಮಣ್ಣನವರು ಜಿಲ್ಲಾಧ್ಯಕ್ಷರಿಗೆ ಬರೆದ ಪತ್ರವನ್ನು ಪರಿಗಣಿಸಿ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದಿನಾಂಕ ೧೭-೦೨-೨೦೨೬ ರಂದು ಮನವಿ ಪತ್ರವನ್ನು ಸಲ್ಲಿಸಿ ದಕ್ಷೀಣ ಭಾರತದಿಂದ ಉತ್ತರ ಭಾರತಕ್ಕೆ ದೂರ ಹಾಗೂ ಸಮಯವನ್ನು ಕಡಿಮೆಗೊಳಿಸುವ ಈ ರೈಲ್ವೆಲೈನ್ ನಾಂದೇಡನ ಗುರುವಾರ ಹಾಗೂ ಬೀದರಿನ ಗುರುನಾನಕ ಸಾಹೇಬ ಗುರುದ್ವಾರದ ಪ್ರವಾಸಿಗರಿಗೆ ಅನುಕೂಲವಾಗಿ ಜಿಲ್ಲೆಯ ಪ್ರವಾಸೋದ್ಯಮಕ್ಕು ಉತ್ತೇಜನ ನೀಡಲಿದೆ ೧೫೫ ಕಿ.ಮೀ ಉದ್ದದ ಈ ಲೈನ್ ೧೦೦ ಕಿಮೀ ಮಹಾರಾಷ್ಟç ಹಾಗೂ ೫೫ ಕಿ.ಮೀ ಕರ್ನಾಟಕದಲ್ಲಿ ಹಾದು ಹೋಗಲಿದ್ದು ಕರ್ನಾಟಕದ ಪಾಲಿಗೆ ಸುಮಾರು ೪೦೦ ಕೋಟಿ ರೂ ಕೊಡಬೇಕಾಗಿದ್ದು ಅದನ್ನು ಬರುವ ಬಜೆಟ್‌ನಲ್ಲಿ ಕಾಯ್ದಿರಿಸಿ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕೆಂದು ರಾಜ್ಯದ ಮುಖ್ಯಮಂತ್ರಿಯವರಿಗೆ ಬರೆದ ಮನವಿ ಪತ್ರದಲ್ಲಿ ವಿನಂತಿಸಿಕೊAಡಿದ್ದಾರೆ



























