ಚನ್ನಮ್ಮನ ಕಿತ್ತೂರು,ಅ28: ಅನೇಕ ವರ್ಷಗಳ ಈ ಭಾಗದ ರೈತರ ಜೀವನಾಡಿಯಾಗಿದ್ದ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ತೀವ್ರ ಸಂಕಷ್ಟದಲ್ಲಿದೆ. ಈ ಕಾರ್ಖಾನೆಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಮಟ್ಟದಲ್ಲಿ ಆರ್ಥಿಕ ನೆರವು ನೀಡಿ ಪುನಶ್ಚೇತನಗೊಳಿಸಿ ರೈತರ ಹಾಗೂ 700 ಜನ ಕಾರ್ಮಿಕರ ಕುಟುಂಬ ರಕ್ಷಣೆ ಮಾಡಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ರೈತರು, ಆಡಳಿತ ಮಂಡಳಿ ಜೊತೆಗೂಡಿ ಸಿಎಂ ಸಿದ್ದಾರಾಮಯ್ಯ ಅವರಲ್ಲಿ ಮನವಿ ಸಲ್ಲಿಸಿದರು.
201ನೇ ಕಿತ್ತೂರು ಉತ್ಸವದ 3ನೇ ದಿನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
18ನೇ ಶತಮಾನದಲ್ಲಿ ಕಿತ್ತೂರು ಚನ್ನಮ್ಮನ ಜೈಲಿಗೆ ಹಾಕಿದ ಮೇಲೆ ಸ್ವಾತಂತ್ರ್ಯ ಹೋರಾಟಗಾರ ಸಂಗೋಳ್ಳಿ ರಾಯಣ್ಣ ಹಾಗೂ ಕಿತ್ತೂರು ನಾಡಿನ ಅನೇಕ ಹೋರಾಟಗಾರರು ಬ್ರಿಟಿಷರ ವಿರುದ್ದ ಸಂಗ್ರಾಮ ಮಾಡಿ ಮರಳಿ ಕಿತ್ತೂರು ರಾಜ್ಯದ ಸ್ಥಾಪನೆಗೆ ಹೋರಾಟ ಮಾಡುವ ವೇಳೆ ಒಳಸಂಚಿನಿಂದ ರಾಯಣ್ಣನನ್ನು ಬಂಧಿಸಲು ಬ್ರಿಟಿಷರಿಗೆ ಸಹಾಯ ಮಾಡಿದ ಇಂತಹ ಕೋಮುಖ ವ್ಯಾಘ್ರಗಳಿಗೆ 11 ಸಾವಿರ ಎಕರೆ ಭೂಮಿಯನ್ನು ದಾನವಾಗಿ ನೀಡಿದರು. ತದನಂತರ ಈ ಭೂಮಿ ಹಕ್ಕನ್ನು ಹಾಗೂ ಬೆಳೆಯನ್ನು ಬೆಳೆಯುತ್ತಾ ರೈತರು ಬಂದಿದ್ದು ಸದರಿ ಭೂಮಿಯನ್ನು ಕುರಿತು 2016-17ನೇ ಸಾಲಿನಲ್ಲಿ ಅಂದಿನ ಕಂದಾಯ ಮಂತ್ರಿ ಕಾಗೋಡ ತಿಮ್ಮಪ್ಪನವರ ಗಮನಕ್ಕೆ ತಂದಾಗ ಸದರಿ ಭೂಮಿ ಸಾಗುವಳಿ ಮಾಡುತ್ತಿರುವ ಪ್ರತ್ಯಕ್ಷ ಸಾಗುವಳಿದಾರರಿಗೆ ಪಿಟಿಸಿಟಿ ಮಾಡಿಸಿ ಆದೇಶ ಹೊರಡಿದ್ದರೂ ಇದುವರೆಗೆ ಅಧಿಕಾರಿಗಳು ತಪ್ಪು ಮಾಹಿತಿ ಕೊಟ್ಟು ರೈತರ ದಾರಿ ತಪ್ಪಿಸುತ್ತಿದ್ದಾರೆ. ಈ ಭೂಮಿಯನ್ನು ನಂಬಿಕೊಂಡು ನೂರಾರು ಕುಟುಂಬಗಳು ಬದಕುತ್ತಿವೆ. ಅದಕ್ಕಾಗಿ ತಾವುಗಳು ಸರ್ಕಾರ ಜೊತೆ ಮಾತನಾಡಿ ಈ ಭೂಮಿಯನ್ನು ರೈತರ ಹೆಸರು ಪಹಣಿ ಪ್ರತಿಕೆಯಲ್ಲಿ ನೋದಾಯಿಸಬೇಕೆಂದರು. ಸಭೆಯಲ್ಲಿ ವಿವಿಧ ಕ್ಷೇತ್ರದ ಶಾಸಕರು, ಜಿಲ್ಲಾಉಸ್ತುವಾರಿ ಸಚಿವರು, ವಿಪ್ ಸದಸ್ಯರು, ಹಲವಾರು ಮುಖಂಡರಿದ್ದರು.






















