ಹಾಸ್ಟೇಲ್‍ಗೆ ಹೋಗುವ ರಸ್ತೆ ನಿರ್ಮಿಸಲು ಮನವಿ

ಜೇವರಗಿ,ಸೆ.20: ಪಟ್ಟಣದ ದತ್ತನಗರದಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಹೋಗುವ ರಸ್ತೆ ನಿರ್ಮಾಣ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ತಾಲೂಕ ಅಧ್ಯಕ್ಷ ಸಿದ್ದರಾಮ ಕಟ್ಟಿ ಅಗ್ರಹಿಸಿದ್ದಾರೆ.
ಅಲ್ಲಿನ ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಕುರಿತು ವಿಚಾರಿಸಿದಾಗ ವಿದ್ಯಾರ್ಥಿನಿಯರು ನಮಗೆ ರಸ್ತೆ , ಬೀದಿ ದೀಪದ ತೊಂದರೆಯಿದ್ದು ಮುಖ್ಯವಾಗಿ ನಮಗೆ ವಿದ್ಯಾರ್ಥಿ ನಿಲಯದಿಂದ ವಿಜಯಪುರ ರಾಜ್ಯ ಹೆದ್ದಾರಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಸುಮಾರು 400 ವಿದ್ಯಾರ್ಥಿಗಳು ಇರುವ ಎರಡು ವಸತಿ ನಿಲಯಗಳು ಹಾಗೂ ಅಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿಗಳು ವಾರ್ಡನ್ ಗಳಿಗೆ, ವಿದ್ಯಾರ್ಥಿಗಳ ಪಾಲಕ ಪೆÇೀಷಕರುಗಳಿಗೆ ಹಾಗೂ ಯಾರಾದರೂ ಜನಪ್ರತಿನಿಧಿಗಳು ಅಧಿಕಾರಿಗಳು, ಅಲ್ಲಿಗೆ ಹೋಗಬೇಕಾದರೆ ಹರ ಸಾಹÀಸ ಪಡುವಂತಾಗಿದೆ ವಸತಿ ನಿಲಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಸಮಸ್ಯೆ ಆಗುತ್ತಿದ್ದುದ್ದನ್ನು ಅರಿತು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ )ತಾಲೂಕು ಸಂಚಾಲಕ ಸಿದ್ದು ಕೆರೂರ್, ಹಾಗೂ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಸಿದ್ರಾಮಕಟ್ಟಿ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಸಂಭಂದಪಟ್ಟ ಈ ಎಲ್ಲಾ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು, ಸಿಬ್ಬಂದಿಗಳು,ಮತ್ತು ಪಾಲಕರ ಜೊತೆಗೂಡಿ ಜೇವರ್ಗಿ ತಾಲೂಕ ಶಾಸಕ ಡಾ. ಅಜಯ್ ಸಿಂಗ್ ರವರ ಕಚೇರಿ ಮುಂದೆ,ಹೋರಾಟ ರೂಪಿಸಲಾಗುವುದು ಎಂದಿದ್ದಾರೆ