ಕಲಬುರಗಿ : ನ.4:ಬಂಜಾರ ಭೋವಿ ಕೊರಚ ಮತ್ತುಕೊರಮ ಸಮಾಜಗಳ ಕ್ಷೇಮಾಭಿವೃದ್ಧಿ ಸಂಘಗ ವತಿಯಿಂದ ಬಂಜಾರ ಭೋವಿ ಕೊರಚ ಮತ್ತುಕೊರಮ ಸಮುದಾಯಗಳಿಗೆ ಒಳ ಮೀಸಲಾತಿಯಲ್ಲಿ 6%ಕ್ಕಿಂತಲೂ ಹೆಚ್ಚಿನ ಮೀಸಲಾತಿ ನೀಡಬೇಕುಎಂದು ಆಗ್ರಹಿಸಿ ಕಾನೂನು ಹೋರಾಟ ಮಾಡಲಾಗುತ್ತಿದು, ಸಮುದಾಯದಜನರು ನಮ್ಮ ಸಂಘಟನೆಗೆಆರ್ಥಿಕವಾಗಿ ಬೆಂಬಲ ಮತ್ತು ಸಹಕಾರ ನೀಡಬೇಕುಎಂದು ಮುಖಂಡ ಖೇಮಸಿಂಗ್ ರಾಠೋಡ್ ಮನವಿ ಮಾಡಿದ್ದಾರೆ.
ನಗರದ ಬಂಜಾರಾ ಭವನದಲ್ಲಿ ಮಾತನಾಡಿದಅವರು ನಮ್ಮ ಸಂಘಟನೆ ವತಿಯಿಂದಅಕ್ಟೋಬರ್ 16 ರಂದುಕರ್ನಾಟಕ ಹೈಕೋರ್ಟ್ ನಲ್ಲಿರಿಟ್‍ಅರ್ಜಿ ಸಲ್ಲಿಸಲಾಗಿದ್ದು, ನ.3ರಂದು ವಿಚಾರಣೆ ನಡೆಸಿ, ನ.13ಕ್ಕೆ ವಿಚಾರಣೆ ಮುಂದೂಡಲಾಗಿದೆ. ಈ ಹೋರಾಟಕ್ಕೆ ಸಮುದಾಯದಎಲ್ಲಾ ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರು ಸಹಕಾರ ನೀಡಬೇಕು. ನಮ್ಮ ಸಮುದಾಯಗಳಿಗೆ ಒಳ ಮೀಸಲಾತಿಯಲ್ಲಿ 5 % ದಿಂದ 6% ಹೆಚ್ಚಿಸಬೇಕು. ಮೀಸಲಾತಿದೊರೆಯುವರೆಗೂ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದೆವರೆಯಲಿದೆ. ಎಲ್ಲರೂ ನಮ್ಮಗೆ ಬೆಂಬಲ ನೀಡಬೇಕುಎಂದು ಮನವಿ ಮಾಡಿದ್ದಾರೆ.
ಬಂಜಾರ ಭೋವಿ ಕೊರಚ ಮತ್ತುಕೊರಮ ಸಮಾಜಗಳ ಕ್ಷೇಮಾಭಿವೃದ್ಧಿ ಸಂಘದರಾಜ್ಯಅಧ್ಯಕ್ಷ ಶಾಮರಾವ ಪವಾರ ಮಾತನಾಡಿದರು.
ಚಂದುಜಾಧವಅವರು ಮಾತನಾಡಿದರು.
ಈ ಸಂದರ್ಭದಲ್ಲಿ ವಕೀಲರಾದ ವಿನೋದಚವ್ಹಾಣ, ಹೊಬ್ಬಸಿಂಗ ಚವ್ಹಾಣ, ಬಿಬಿ ನಾಯಕ, ವಿನೋದಚವ್ಹಾಣ ಹಾಗೂ ದತ್ತು ಪವಾರ ಉಪಸ್ಥಿತರಿದ್ದರು.



























