ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ

ಸಂಜೆವಾಣಿ ವಾರ್ತೆ,
ವಿಜಯಪುರ, ಜ. ೨೮: ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧೀನದಲ್ಲಿ ನಡೆಯುವ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ೭೭ ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ ಹಾಗೂ ಶಾಲೆಯ ನಾಮಿನಿ ಚೇರ್ಮನ್ ಎಸ್.ಎಚ್. ನಾಡಗೌಡ ಅವರು ಹಾಗೂ ಸಂಸ್ಥೆಯ ಆಡಳಿತಾದಿಕಾರಿ ಎಚ್.ವೆಂಕಟೇಶ ಹಾಗೂ ಶಾಲೆಯ ಪ್ರಾಂಶುಪಾಲ ವಿಜಯಲಕ್ಷ್ಮೀ ಪಟ್ಟೇದ ಅವರು ಹಾಗೂ ಉಪ ಪ್ರಾಚಾರ್ಯ.ದ್ವಜಾ ರೋಹಣ ಮಾಡಿ ನಂತರ ವಿವಿಧ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರ್ಮನ್ ಬಸಯ್ಯ ಹಿರೇಮಠ ಅವರು ಗಣರಾಜ್ಯೋತ್ಸವವನ್ನು ಉದ್ದೇಶಿಸಿ ಮಾತನಾಡಿದರು
ಶಾಲೆಯ ನಾಮಿನಿ ಚೇರ್ಮನ್ ಎಸ್.ಎಚ್. ನಾಡಗೌಡ ಅವರು, ದೇಶಕ್ಕಾಗಿ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳ ಕುರಿತು ಹಾಗೂ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಕುರಿತು ವಿಶೇಷವಾಗಿ ಮಾತನಾಡಿದರು.
ವಿಜ್ಞಾನ ಪ್ರದರ್ಶನಗಳು ಸುಸಜ್ಜಿತ ಶಿಕ್ಷಣದ ನಿರ್ಣಾಯಕ ಅಂಶವಾಗಿದೆ. ವಿಜ್ಞಾನ ಪ್ರದರ್ಶನಗಳು ಸಮಗ್ರ ಶೈಕ್ಷಣಿಕ ಅನುಭವವನ್ನು ರೂಪಿಸುವಲ್ಲಿ ಅಮೂಲ್ಯವಾದ ಪಾತ್ರವನ್ನು ವಹಿಸುತ್ತದೆ. ವಿಜ್ಞಾನ ಪ್ರದರ್ಶನಗಳು ವಿದ್ಯಾರ್ಥಿಗಳ ವೈಜ್ಞಾನಿಕ ಪ್ರಯತ್ನಗಳು ಮತ್ತು ಸಾಧನೆಗಳನ್ನು ಗುರುತಿಸಲು ವೇದಿಕೆಯನ್ನು ಒದಗಿಸುತ್ತದೆ ಇದು ಪರಿಶೋದನೆ ಮತ್ತು ಪ್ರಯೋಗಳನ್ನು ಗೌರವಿಸುವ ಮತ್ತು ಮೆಚ್ಚುವ ಸಂಸ್ಕ್ರತಿಯನ್ನು ಬೆಳೆಸುತ್ತದೆ. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿವಿಧ ರೀತಿಯ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ನರ್ಸರಿ ವಿದ್ಯಾರ್ಥಿಗಳು ವಿವಿಧ ರೀತಿಯ ಹಣ್ಣುಗಳು ಮತ್ತು ಹಣ್ಣುಗಳ ವೇಷಭೂಷಣ ಧರಿಸಿ ಹಣ್ಣುಗಳ ಬಗ್ಗೆ ವಿವರಿಸಿದರು.
ಎಲ್.ಕೆ.ಜಿ ವಿದ್ಯಾರ್ಥಿಗಳು ದೇಶಕ್ಕಾಗಿ ತ್ಯಾಗ ಮಾಡಿದ ಮಹಾ ನಾಯಕರ ವೇಷಭೂಷಣ ಧರಿಸಿದ್ದರು.ಇನ್ನೂ ಹಲವಾರು ವಿದ್ಯಾರ್ಥಿಗಳು ಜಂಗ್ ಪುಡ್, ಹೆಲ್ತಿ ಪುಡ್ ನಿಂದಾಗುವ ಪರಿಣಾಮವನ್ನು ವಿವರಿಸಿದರು. ಯು.ಕೆ.ಜಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ವಿವರಿಸಿದರು.ಇನ್ನೂ ಹಲವಾರು ವಿದ್ಯಾರ್ಥಿಗಳು ಚಂದ್ರಯಾನದ ಮಾದರಿ ತಯಾರಿಸಿ ಅದರ ಬಗ್ಗೆ ಯು.ಕೆ.ಜಿ ಯ ಮುದ್ದು ವಿದ್ಯಾರ್ಥಿಗಳು ಸಂಪೂರ್ಣ ಮಾಹಿತಿ ವಿವರಿಸಿದರು.
ಇನ್ನೂ ಹಲವಾರು ವಿದ್ಯಾರ್ಥಿಗಳು ಹಳ್ಳಿಯ ಹಾಡುಗಳನ್ನು ನೃತ್ಯ ಮಾಡುವ ಮೂಲಕ ಗೀಗೀ ಪದಗಳು, ಭಜನಾ ಪದಗಳು ಇನ್ನೂ ಹಲವಾರು ವಿವಿಧ ರೀತಿಯ ಹಾಡುಗಳನ್ನು ಹಾಡಿದರು. ೫ ನೇ ತರಗತಿ ವಿದ್ಯಾರ್ಥಿಗಳು ಹಳ್ಳಿ ಮತ್ತು ಪಟ್ಟಣ ಕುರಿತು ವಿಶೇಷವಾಗಿ ನೃತ್ಯ ಮಾಡುವುದನ್ನು ವಿಕ್ಷೀಸಿ ಪಾಲಕರು ಮತ್ತು ನಿರ್ಣಾಯಕರು ಶ್ರೀ ಸಿದ್ದೇಶ್ವರ ಸಂಸ್ಥೆಯ ಆಡಳಿತಾದಿಕಾರಿಗಳು , ಪ್ರಾಚಾರ್ಯರು, ಉಪ ಪ್ರಾಚಾರ್ಯರು ಹರ್ಷ ವ್ಯಕ್ತ ಪಡಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಚೇರಮನ್, ಶಾಲೆಯ ನಾಮಿನಿ ಚೇರ್ಮನ್, ಸಂಸ್ಥೆಯ ಆಡಳಿತಾದಿಕಾರಿಗಳು, ಶಾಲೆಯ ಪ್ರಾಚಾರ್ಯರು, ಉಪ ಪ್ರಾಚಾರ್ಯರು, ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.