ಗಣರಾಜ್ಯೋತ್ಸವ ಆಚರಣೆ


ಗುಳೇದಗುಡ್ಡ,ಜ.೨೮: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ನಿಧಿಯಿಂದ ಹಣ ಬಿಡುಗಡೆಯಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಪಟ್ಟಣದಲ್ಲಿ ಹೈಟೆಕ್ ಲೈಬ್ರರಿ ನಿರ್ಮಾಣಕ್ಕೆ ಕ್ರಿಯಾಯೋಜನೆ ಅನುಮೋದನೆಗೊಂಡಿದೆ. ಕೆಳಗಿನ ಪೇಟೆಯಲ್ಲಿ ಸುಸಜ್ಜಿತ ಮಿನಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಿಯಾಯೋಜನೆಗೆ ಅನುಮೊದನೆ ದೊರೆಕಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಅಸ್ಲಂ ಮುಜಾವರ ಹೇಳಿದರು.
ಅವರು ಪಟ್ಟಣದ ಪುರಸಭೆ ಎದುರು ೭೭ನೇ ಗಣರಾಜ್ಯೋತ್ಸವದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಪುರಸಭೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಪಟ್ಟಣವನ್ನು ಸ್ವಚ್ಛ ಸುಂದರವನ್ನಾಗಿಸಲು ಪುರಸಭೆ ಶ್ರಮವಹಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮ್ಯಾನೇಜರ್ ಎ.ಎಚ್. ಮುದ್ದೇಬಿಹಾಳ, ಅಭಿಯಂತರ ಜಿ.ಎಂ. ಕಿತ್ತಲಿ, ಆರ್.ಓ. ಹಿರೇಮಠ, ಪುರಸಭೆ ನಾಮನಿರ್ದೆಶನ ಸದಸ್ಯರಾದ ಚಿದಾನಂದಸಾ ಕಾಟವಾ, ಜಮೀರ ಮೌಲ್ವಿ, ಶಿವನಯ್ಯ ಮಳಿಮಠ, ಮುಸ್ತಾಕ್ ಕೊತ್ತಲ್, ಆರ್.ವಿ. ಚಂದರಗಿ ಮತ್ತಿತರರು ಇದ್ದರು.